ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ವಿಳಂಬ ನೀತಿ ಖಂಡಿಸಿ ಗುರುವಾರ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ರೂಪಿಸಿರುವ ಕಾಮಗಾರಿಗಳ ವಿಳಂಬ ಖಂಡಿಸಿ ಅನುಭವ ಇಲ್ಲದ ಸ್ಮಾರ್ಟ್‌ಸಿಟಿ ಇಂಜಿನಿಯರ್‌ರ ಧೋರಣೆಯಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್‌ಸಿಟಿ ಯೋಜನೆ 2ನೇ ಹಂತ ನಗರದಲ್ಲಿ ಅನುಷ್ಠಾನಗೊಂಡಿದೆ. ನಗರದ ನಾಗರಿಕರು, ಸ್ಥಳೀಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಉದ್ಯಮಿಗಳು, ವರ್ತಕರು, ಕಾರ್ಮಿಕರು, ಶಿಕ್ಷಕರು ಹೀಗೆ ಸಮಾಜದ ಅನೇಕ ವರ್ಗಗಳ ಜನ, ಸಮುದಾಯ ಸರ್ಕಾರದ ಎಲ್ಲ ಇಲಾಖೆ ಅಧಿಕಾರಿಗಳ ಸಹಾಯದಿಂದ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಎಲ್ಲರೊಂದಿಗೆ ಚರ್ಚಿಸಿ ರೂಪಿಸಲಾದ ಯೋಜನೆಗಳನ್ನು ಕೈಬಿಟ್ಟು ಅದರಲ್ಲಿ ಬಹುತೇಕ ಕಾಮಗಾರಿಗಳನ್ನು ಬದಲಿಸಿ ಸ್ಮಾರ್ಟ್‌ಸಿಟಿ ಟೆಂಡರ್ ಕರೆಯಲಾಗಿದೆ. ಚಾನಲ್ ರಿ ಡೆವಲಪ್‌ಮೆಂಟ್ ಕಾಮಗಾರಿಯಲ್ಲಿ ಸ್ಥಳೀಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘ, ಸ್ಥಳೀಯ ಜನಪ್ರತಿನಿಧಿಗಳು ಸೇರಿ ಯೋಜನೆ ರೂಪಿಸಿದ್ದರು. ಆದರೆ ಸ್ಮಾರ್ಟ್ ಸಿಟಿ ಪ್ರವೇಟ್ ಲಿಮಿಟೆಡ್ ವತಿಯಿಂದ ಅನಾವಶ್ಯಕವಾದ 70 ಲಕ್ಷ ರೂ. ಕೆಟೆರಿಯಾ (ಹೋಟೆಲ್) ನಿರ್ಮಿಸುತ್ತಿದ್ದು, ಹಳೆಯ ಬಸ್ ನಿಲ್ದಾಣ ರಿ ಡೆವೆಲಪ್‌ಮೆಂಟ್‌ಗೆ ಒತ್ತು ನೀಡಿಲ್ಲ ಎಂದು ದೂರಿದರು.
ರವೀಂದ್ರನಗರದಲ್ಲಿ ಸ್ಮಾರ್ಟ್‌ಸಿಟಿ ಪ್ಯಾಕೇಜ್ 2-ಎ ಕಾಮಗಾರಿ ಪ್ರಾರಂಭಿಸಿ ಮನೆಗಳ ಮುಂದೆ ಚರಂಡಿ, ಕಲ್ಲುಗಳನ್ನು ಕಿತ್ತು ಯುುಡಿಜಿ ಪೈಪ್‌ಗ್ಳಿಗೆ ಡ್ಯಾಮೇಜ್ ಮಾಡಿ 2 ತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಗುತ್ತಿಗೆದಾರರ ಬಳಿ ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಿದಾಗ ಅಧಿಕಾರಿಗಳಿಂದ ಡ್ರಾಯಿಂಗ್ ಬಂದಿಲ್ಲ ಎಂದು ಹೇಳುತ್ತಾರೆ. ಅಧಿಕಾರಿಗಳು ಗುತ್ತಿಗೆದಾರರ ಬಳಿ ಮೆಟೀರಿಯಲ್ ಸ್ಟಾಕ್ ಇಲ್ಲ ಎಂದು ಹೇಳುತ್ತಾರೆ ಹಾಗೂ ಚರಂಡಿ ಕಲ್ಲುಗಳನ್ನು ಕಿತ್ತು ಹಾಗೆಯೇ ಬಿಟ್ಟಿರುವುದರಿಂದ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಹೇಳಿದರು.
ಕನ್ಸರ್‌ವೆನ್ಸಿಗಳಲ್ಲಿ ಮ್ಯಾನ್ ಹೋಲ್ಗಳು ಹಾಳಾಗಿದ್ದು, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಮ್ಯಾನ್ ಹೋಲ್ಗಳ ಬಗ್ಗೆ ಯೋಜನೆ ರೂಪಿಸಿಲ್ಲ ಎಂದು ಹೇಳಿದರು. ಇನ್ನು ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸಿಲ್ಲ. ಮಾಹಿತಿ ಇಲ್ಲದೇ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ದೂರಿದರು.
ನಗರದಲ್ಲಿ ಡಾಂಬರೀಕರಣ ಯೋಜನೆ ಅವೈಜ್ಞಾನಿಕವಾಗಿದೆ. ಈ ಯೋಜನೆಯ ಟೆಂಡರನ್ನು ರಿ ಟೆಂಡರ್ ಕರೆಯಬೇಖೀದೆ. ಸ್ಮಾರ್ಟ್‌ಸಿಟಿ ಇಂಜಿನಿಯರ್‌ಗಳಿಗೆ ಅನುಭವ ಇಲ್ಲದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕಾಮಗಾರಿಗಳು ಹೊರ ರಾಜ್ಯಗಳ ಗುತ್ತಿಗೆದಾರರ ನೇತೃತ್ವದಲ್ಲಿ ನಡೆಯುತ್ತಿದ್ದು ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಕಾಮಗಾರಿ ಕೈಗೊಳ್ಳಬೇಕೆಂದು ಒತ್ಥಾಯಿಸಿದರು.
ಸ್ಥಳೀಯರಾದ ನಾಗರಾಜ ಕಂಕಾರಿ, ಕೆ. ರಂಗನಾಥ್, ಎಚ್.ಸಿ. ಯೋಗೀಶ್, ಕಾಶಿ ವಿಶ್ವನಾಥ್ ಮತ್ತಿತರರು ಇದ್ದರು.