Advertisement
ಭದ್ರಾ ಜಲಾಶಯ ಭರ್ತಿಯಾಗಿರುವ ಕಾರಣ ಪ್ರತಿದಿನ ರೈತ ಮುಖಂಡರು, ಇತರರು ಬಾಗಿನ ಅರ್ಪಿಸಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವುದರಿಂದ ಭದ್ರತೆಗೆ ಧಕ್ಕೆಯಾಗುತ್ತಿದ್ದು ನಿಷೇಧಾಜ್ಞೆ ವಿಧಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ವಿಧಿಸಿ ಆದೇಶಿಸಿದ್ದಾರೆ.
Related Articles
ತುಂಗೆ, ಭದ್ರೆ ಸಂಗಮ ಸ್ಥಳದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲಾಡಳಿತ ಕೂಡಲಿ ಶೃಂಗೇರಿ ಪೀಠವಿರುವ ಗ್ರಾಮದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Advertisement
ಮೊನ್ನೆ ಎರಡು ದಿನಗಳ ಪ್ರವಾಹದಿಂದ ಒಂದೂವರೆ ಲಕ್ಷ ಕ್ಯೂಸೆಕ್ಸ್ಗೆ ಅಧಿಕ ನೀರು ಬಿಡಲಾಗಿತ್ತು. ಇದರಿಂದ ಕೂಡಲಿಯ ಸ್ನಾನಘಟ್ಟದವರೆಗೂ ನೀರು ಬಂದಿತ್ತು. ಇನ್ನೂ ಎರಡು ತಿಂಗಳು ಮಳೆಗಾಲ ಇರುವುದರಿಂದ ಮತ್ತೆ ಪ್ರವಾಹ ಭೀತಿ ಇದೆ. ಕೂಡಲಿ ಗ್ರಾಮದಲ್ಲಿ 1500 ಜನಸಂಖ್ಯೆ ಇದ್ದು ಗ್ರಾಮದಿಂದ ಹೊರಹೋಗಲು ಕೂಡಲಿ ಸರ್ಕಲ್ ಬಿಟ್ಟರೆ, ಪಿಳ್ಳಂಗೆರೆ ಮೂಲಕ ಮಾತ್ರ ರಸ್ತೆ ಇದೆ. ಏಕಾಏಕಿ ಪ್ರವಾಹ ಭೀತಿ ಎದುರಾದರೆ ಜನರನ್ನು ಶಿಫ್ಟ್ ಮಾಡುವುದು ಕಷ್ಟಸಾಧ್ಯ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂದು ಕೂಡಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.