ಶಿವಮೊಗ್ಗ: ಮಕ್ಕಳ ಹಕ್ಕುಗಳ ರಕ್ಷಣೆಪ್ರತಿಯೊಬ್ಬರ ಜವಾಬ್ದಾರಿ. ಇದು ಯಾವುದೇಇಲಾಖೆಗೆ ಸೀಮಿತವಲ್ಲ. ಮಕ್ಕಳ ಹಕ್ಕುಗಳರಕ್ಷಣೆಗೆ ಪ್ರತಿಯೊಬ್ಬರೂ ಸ್ಪಂದಿಸಬೇಕುಎಂದು ಜಿಲ್ಲಾಧಿ ಕಾರಿ ಡಾ| ಸೆಲ್ವಮಣಿಹೇಳಿದರು.ಶುಕ್ರವಾರ ಜಿಲ್ಲಾ ಧಿಕಾರಿ ನೂತನಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ಕುರಿತಾದಕಾರ್ಯಾಗಾರ ಉದ್ಘಾಟಿಸಿ ಅವರುಮಾತನಾಡಿದರು.ಕೋವಿಡ್ ಬಳಿಕ ಮಕ್ಕಳು ಹಲವಾರುಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅವರಿಗೆಸರಿಯಾಗಿ ಮಾರ್ಗದರ್ಶನ ಮಾಡುವಕಾರ್ಯ ಮಾಡಬೇಕಿದೆ. ಮಕ್ಕಳ ಹಕ್ಕುಗಳರಕ್ಷಣೆಗಾಗಿ ಇರುವ ಕಾನೂನುಗಳ ಬಗ್ಗೆಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಮಕ್ಕಳದತ್ತು ಸ್ವೀಕಾರ ಪ್ರಕ್ರಿಯೆಯಂತಹ ಕಾಯ್ದೆಗಳಬಗ್ಗೆ ಸರಿಯಾಗಿ ಅರಿವು ಇಲ್ಲದೆ, ಹಲವಾರುಮಂದಿ ಸಮಸ್ಯೆಗೆ ತುತ್ತಾಗುತ್ತಾರೆ ಎಂದರು.ಕೋವಿಡ್ ಹಿನ್ನೆಲೆಯಲ್ಲಿ ಶಾಲೆಯಿಂದಹೊರಗುಳಿದಿರುವ ಮಕ್ಕಳನ್ನು ಗುರುತಿಸಿಮತ್ತೆ ಶಾಲೆಗೆ ಸೇರಿಸುವ ಪ್ರಕ್ರಿಯೆಯಲ್ಲಿಎಲ್ಲಾ ಇಲಾಖೆಗಳು ಕೈ ಜೋಡಿಸಬೇಕು.
ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿ ಶಾಲೆಗಳಲ್ಲಿಅರಿವು ಮೂಡಿಸುವ ಕಾರ್ಯ ಆಗಬೇಕಿದೆ.ಪ್ರತಿ ಗ್ರಾಪಂಗಳಲ್ಲಿ ಮಕ್ಕಳ ಗ್ರಾಮಸಭೆಗಳನ್ನುನಡೆಸಲು ಈಗಾಗಲೇ ಸೂಚಿಸಲಾಗಿದೆ. ಈಗ್ರಾಮಸಭೆಗಳಲ್ಲಿ ಗ್ರಾಮದ ಮಕ್ಕಳ ಸಮಸ್ಯೆಗಳಬಗ್ಗೆ, ಅವರ ಅಗತ್ಯಗಳನ್ನು ಪೂರೈಸುವಬಗ್ಗೆ ಚರ್ಚೆ ನಡೆದು ಅನುಷ್ಠಾನಗೊಳಿಸುವಕಾರ್ಯ ಆಗಬೇಕಿದೆ ಎಂದರು.ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರದಸದಸ್ಯ ಕಾರ್ಯದರ್ಶಿ ಸರಸ್ವತಿ ಮಾತನಾಡಿ,ಮಕ್ಕಳ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆಅರಿವು ಮೂಡಿಸುವ ಉದ್ದೇಶದಿಂದಎಲ್ಲಾ ಶಾಲೆಗಳಲ್ಲಿ ಕಾನೂನು ಅರಿವು ಕ್ಲಬ್‌ರೂಪಿಸಲಾಗುತ್ತಿದೆ.
ಈ ಮೂಲಕ ವಾರದಲ್ಲಿಒಂದು ದಿನ ಮಕ್ಕಳ ಹಕ್ಕುಗಳ ಕುರಿತಾದಕಾನೂನುಗಳ ಬಗ್ಗೆ ಮಕ್ಕಳಿಗೆ ಅರಿವುಮೂಡಿಸಲಾಗುವುದು. ಮೊದಲ ಹಂತದಲ್ಲಿಶಿಕ್ಷಕರಿಗೆ ಮೂಲಭೂತ ಕಾನೂನುಗಳ ಬಗ್ಗೆಅರಿವು ಮೂಡಿಸಲಾಗುತ್ತಿದೆ ಎಂದರು.ಜಿಲ್ಲಾಡಳಿತ ಹಾಗೂ ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್ ಸಂಸ್ಥೆ ಜಂಟಿಯಾಗಿಕಾರ್ಯಾಗಾರವನ್ನು ಆಯೋಜಿಸಿತ್ತು.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆರೇಖಾ, ಜಿಪಂ ಉಪ ಕಾರ್ಯದರ್ಶಿಮಲ್ಲಿಕಾರ್ಜುನ, ಡಿವೈಎಸ್‌ಪಿ ಸಂತೋಷ್,ಡಿಡಿಪಿಯು ನಾಗರಾಜ್, ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಜಿ.ಜಿ. ಸುರೇಶ್, ಜಂಟಿ ನಿರ್ದೇಶಕ ಅಶೋಕ್‌ರೇವಣ ಇತರರು ಇದ್ದರು.