ಶಿವಮೊಗ್ಗ: ನಂದಿತಾ ಪ್ರಕರಣದ ಸಾಕ್ಷಿ ನಾಶವಾಗಿ ಮಣ್ಣುಹಿಡಿದಿದೆ. ಈಗ ಯಾಕೆ ಸಿಬಿಐ ತನಿಖೆ ಎಂದು ಗೃಹ ಸಚಿವಆರಗ ಜ್ಞಾನೇಂದ್ರ ಪ್ರಶ್ನಿಸಿದರು.ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಪತ್ರಕರ್ತರು ಕೇಳಿದಪ್ರಶ್ನೆಗೆ ಉತ್ತರಿಸಿದರು.
ಕಿಮ್ಮನೆ ರತ್ನಾಕರ್ ಅವರು ನಂದಿತಾ ಸಾವಿನ ಪ್ರಕರಣವನ್ನುಸಿಬಿಐಗೆ ವಹಿಸಲು ಒತ್ತಾಯಿಸಿ ಜ.30 ರಂದು ಉಪವಾಸಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ ಎಂದು ಪತ್ರಕರ್ತರು ಕೇಳಿದಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಂದಿತಾ ಪ್ರಕರಣದಲ್ಲಿಭಾಗವಹಿಸಿದ ಹೋರಾಟಗಾರರ ಮೇಲೆ ಪ್ರಕರಣದಾಖಲಾಗಲು ಕಿಮ್ಮನೆ ರತ್ನಾಕರ್ ಅವರೇ ಹೆಚ್ಚು ಪ್ರಭಾವಬೀರಿದ್ದಾರೆ. 300ಕ್ಕೂ ಹೆಚ್ಚು ಜನರ ಮೇಲೆ ಕೇಸ್ ದಾಖಲಾಗಿದೆ.ಆರೋಪಿಗಳ ರಕ್ಷಿಸುವ ಕೆಲಸ ಮಾಡಿದ್ದರು. ವೋಟ್ ಬ್ಯಾಂಕ್‌ಗೆ ತೊಡಕಾಗಲಿದೆ ಎಂದು ಆಗ ಹೋರಾಟ ಮಾಡಿದ್ದರು.
ಈಗ ಅವರೇ ಸಿಬಿಐಗೆ ವಹಿಸಿ ಎಂದು ಒತ್ತಾಯಿಸುತ್ತಿದ್ದಾರೆಎಂದರು. ನಂದಿತಾ ಪ್ರಕರಣದಲ್ಲಿ ಸಾಕ್ಷಿಗಳು ಸರ್ವನಾಶವಾಗಿ,ಮಣ್ಣು ಹಿಡಿದಿದೆ. ಈಗ ಸಿಬಿಐಗೆ ವಹಿಸುವಂತೆ ಕೇಳುತ್ತಿದ್ದಾರೆ.ನಂದಿತಾ ಪ್ರಕರಣದಿಂದ ಸೋಲಾಗಿದೆ ಎಂಬ ಪಾಪ ಪ್ರಜ್ಞೆಅವರನ್ನು ಕಾಡುತ್ತಿದೆ. ಹಾಗಾಗಿ ಈಗ ಅದೇ ಪ್ರಕರಣ ಪ್ರಸ್ತಾಪಿಸಿಗೆಲವು ಸಾ ಧಿಸಲು ಹೊರಟಂತಿದೆ ಎಂದರು. ಅಡಕೆಯಲ್ಲಿಔಷ ಧೀಯ ಗುಣ ಇದೆ ಎಂದು ಸಾಬೀತು ಮಾಡಲುಸಂಶೋಧನೆ ನಡೆಸಲಾಗುತ್ತಿದೆ.
ಎಂ.ಎಸ್. ರಾಮಯ್ಯಸಂಸ್ಥೆಯಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಈಗಾಗಲೆಮಧ್ಯಂತರ ವರದಿ ಬಂದಿದೆ. ಸದ್ಯದಲ್ಲೆ ಪೂರ್ಣ ವರದಿಬರಲಿದೆ ಎಂದರು.ಆಂಧ್ರದಿಂದ ಬರುತ್ತಿದೆ ಗಾಂಜಾ: ಗಾಂಜಾ, ಮಾದಕ ವಸ್ತುಗಳಸೇವನೆ ನಿದ್ದೆಗೆಡಿಸಿದೆ. ಯುವ ಸಮೂಹದಲ್ಲಿ ಮಾದಕ ವಸ್ತುಗಳಸೇವನೆ ದೊಡ್ಡ ಪಿಡುಗಾಗಿದೆ.ಶಿವಮೊಗ್ಗಕ್ಕೆ ಆಂಧ್ರದಿಂದ ಗಾಂಜಾ ಸರಬರಾಜುಮಾಡಲಾಗುತ್ತಿತ್ತು. ಸುಮಾರು 200 ಕೆಜಿ ಗಾಂಜಾ ವಶಕ್ಕೆಪಡೆಯಲಾಗಿದೆ. ಗಾಂಜಾ ಸೇವನೆ ಮಾಡುವವರ ವಿರುದ್ಧ 160ಕೇಸ್ ಹಾಕಲಾಗಿದೆ. 72 ಜನರನ್ನು ಕಸ್ಟಡಿಗೆ ಪಡೆಯಲಾಗಿದೆ.ಹಾಗಾಗಿ ಬಹಳ ಜನ ಗಾಂಜಾ ಸೇವನೆ ಬಿಟ್ಟಿದ್ದಾರೆ ಎಂದರು.ಸಂವಾದದಲ್ಲಿ ಪ್ರಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್,ಕಾರ್ಯದರ್ಶಿ ನಾಗರಾಜ ನೇರಿಗೆ, ಮಾಧ್ಯಮ ಅಕಾಡೆಮಿಸದಸ್ಯ ಗೋಪಾಲ ಯಡಗೆರೆ ಇದ್ದರು