Advertisement

ಪೂರ್ಣಪ್ರಮಾಣದ ತರಗತಿ ಆರಂಭಕ್ಕೆ ಆಗ್ರಹ

03:25 PM Dec 29, 2021 | Adarsha |

ಶಿವಮೊಗ್ಗ: ಪದವಿ ಕಾಲೇಜಿನಲ್ಲಿಪೂರ್ಣಪ್ರಮಾಣದ ತರಗತಿಗಳನ್ನುಪ್ರಾರಂಭಿಸಬೇಕೆಂದು ಆಗ್ರಹಿಸಿ ಮತ್ತುಇಂಜಿನಿಯರಿಂಗ್‌ ಪ್ರವೇಶ ಶುಲ್ಕ ಏರಿಕೆಮಾಡಿರುವುದನ್ನು ಖಂಡಿಸಿ ಅಖೀಲಭಾರತೀಯ ವಿದ್ಯಾರ್ಥಿ ಪರಿಷತ್‌ಶಿವಮೊಗ್ಗ ಘಟಕದ ವತಿಯಿಂದಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿಪ್ರತಿಭಟನೆ ನಡೆಸಿ ಜಿಲ್ಲಾಡಳಿತದಮೂಲಕ ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸಲಾಯಿತು.

Advertisement

ರಾಜ್ಯದಲ್ಲಿ ಕೋವಿಡ್‌ 2ನೇ ಲಾಕ್‌ಡೌನ್‌ ನಂತರ ಶಾಲಾ ಕಾಲೇಜುಗಳುಪ್ರಾರಂಭವಾಗಿ ತಿಂಗಳುಗಳೇ ಕಳೆದಿವೆ.ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳುಭರದಿಂದ ಸಾಗಿವೆ. ಇದರ ಜೊತೆಯಲ್ಲಿಅನೇಕ ವಿದ್ಯಾರ್ಥಿಗಳು ವಿವಿಧ ಕೋಸ್‌ìಗಳಿಗೆ ಪ್ರವೇಶ ಪಡೆಯಲು ತಯಾರಿನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿಅತಿಥಿ ಉಪನ್ಯಾಸಕರು ತರಗತಿಗಳನ್ನುಬಹಿಷ್ಕರಿಸಿರುವುದರಿಂದ ಪೂರ್ಣಪ್ರಮಾಣದ ತರಗತಿಗಳು ನಡೆಯದೇಇರುವುದರಿಂದ ತೊಂದರೆಯಾಗಿದೆ.ಅಲ್ಲದೆ ಸರ್ಕಾರ ಇಂಜಿನಿಯರಿಂಗ್‌ಪ್ರವೇಶ ಶುಲ್ಕ ಏರಿಕೆ ಮಾಡಿರುವುದುಸರಿಯಲ್ಲ ಎಂದು ಪ್ರತಿಭಟನಾಕಾರರುದೂರಿದರು.

ತರಗತಿಗಳು ಸರಾಗವಾಗಿ ನಡೆಯುವಅವಶ್ಯಕತೆ ಇದೆ. ಆದರೆ ರಾಜ್ಯದಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುತಮ್ಮ ಹಲವಾರು ಬೇಡಿಕೆಗಳಈಡೇರಿಕೆಗೆ ಒತ್ತಾಯಿಸಿ ತರಗತಿಗಳನ್ನುಬಹಿಷ್ಕರಿಸಿರುವುದರಿಂದ ತರಗತಿನಡೆಯದೆ ವಿದ್ಯಾರ್ಥಿಗಳು ತೊಂದರೆಅನುಭವಿಸುತ್ತಿದ್ದಾರೆ.

ಆದ್ದರಿಂದಈ ನಿಟ್ಟಿನಲ್ಲಿ ಸರ್ಕಾರ ಆದಷ್ಟುಬೇಗ ಕ್ರಮವಹಿಸಿ ಉಪನ್ಯಾಸಕರಬೇಡಿಕೆಗಳನ್ನು ಈಡೇರಿಸಬೇಕು ಮತ್ತುತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿಆರಂಭಿಸಬೇಕೆಂದು ಆಗ್ರಹಿಸಿದರು.ರಾಜ್ಯದ ಸರ್ಕಾರಿ ಹಾಗೂ ಖಾಸಗಿವಿಶ್ವವಿದ್ಯಾಲಯಗಳಲ್ಲಿನ ಸರ್ಕಾರಿಕೋಟಾದ ಇಂಜಿನಿಯರಿಂಗ್‌ವಿದ್ಯಾರ್ಥಿಗಳಿಗಾಗಿ ಸರ್ಕಾರವು2021-22ನೇ ಸಾಲಿನಿಂದ 20,000ರೂ.ಕಾಲೇಜು ಶುಲ್ಕ ಹಾಗೂ ಸ್ಕಿಲ್‌ಲ್ಯಾಬ್‌ ಸೌಲಭ್ಯಕ್ಕಾಗಿ 10,000ರೂ.ನಿಂದ 20,000 ರೂ.ವರೆಗೆಹೆಚ್ಚುವರಿ ಶುಲ್ಕ ವಸೂಲಿಗೆ ಸರ್ಕಾರಕಾಲೇಜುಗಳಿಗೆ ಅವಕಾಶ ಕಲ್ಪಿಸಿದೆ.

ಇದರಿಂದಾಗಿ 40,000 ರೂ.ವರೆಗೆ ಶುಲ್ಕವನ್ನು ಹೆಚ್ಚುವರಿಯಾಗಿವಿದ್ಯಾರ್ಥಿಗಳು ನೀಡಬೇಕಾಗಿದೆ. ಬಡಪ್ರತಿಭಾವಂತ ವಿದ್ಯಾರ್ಥಿಗಳು ಮತ್ತುಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆತುತ್ತಾಗಿರುವ ಪಾಲಕ, ಪೋಷಕರಹಿತವನ್ನು ಗಮನದಲ್ಲಿಟ್ಟುಕೊಂಡುಸರ್ಕಾರ ಶುಲ್ಕ ಹೆಚ್ಚಳಕ್ಕೆಹೊರಡಿಸಿರುವ ಆದೇಶವನ್ನು ತಕ್ಷಣಹಿಂಪಡೆಯಬೇಕೆಂದು ಮನವಿಯಲ್ಲಿಒತ್ತಾಯಿಸಲಾಗಿದೆ. ಪ್ರತಿಭಟನೆಯಲ್ಲಿಎಬಿವಿಪಿ ಮುಖಂಡರಾದ ದರ್ಶನ್‌,ಮನೋಹರ, ಚಂದನ್‌, ಅಭಿಹಾಗೂ ನೂರಾರು ವಿದ್ಯಾರ್ಥಿಗಳುಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next