Advertisement

ಬೇಸಿಗೆ ಬೆಳೆಗಳಿಗೆ 120 ದಿನನೀರು ಹರಿಸಲು ನಿರ್ಧಾರ

03:12 PM Dec 29, 2021 | Adarsha |

ಶಿವಮೊಗ್ಗ: ಬೇಸಿಗೆ ಬೆಳೆಗಳಿಗಾಗಿ 120 ದಿನಗಳಕಾಲ ನೀರು ಹರಿಸಲು ತೀರ್ಮಾನಿಸಿ ಡಿ.29 ರಂದುಎಡದಂಡೆ ಮತ್ತು ಡಿ.30 ರಂದು ಬಲದಂಡೆನಾಲೆಗಳಿಗೆ ನೀರು ಹರಿಸುವುದನ್ನು ಆರಂಭಿಸಲುಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆತೀರ್ಮಾನ ಕೈಗೊಂಡಿದೆ ಎಂದು ಭದ್ರಾ ಅಚ್ಚುಕಟ್ಟುಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯತಿಳಿಸಿದರು.

Advertisement

ಮಂಗಳವಾರ ಭದ್ರಾ ಅಚ್ಚುಕಟ್ಟು ಅಭಿವೃದ್ಧಿಪ್ರಾಧಿಕಾರ ಕಚೇರಿಯಲ್ಲಿ ನಡೆದ 79ನೇ ಭದ್ರಾಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನೀರಾವರಿ ಸಲಹಾ ಸಮಿತಿಯ ಸರ್ವಸದಸ್ಯರೊಂದಿಗೆ ಚರ್ಚಿಸಿ ಈ ತೀರ್ಮಾನಕೈಗೊಳ್ಳಲಾಗಿದೆ. ಡಿ.29 ರ ರಾತ್ರಿಯಿಂದಎಡದಂಡೆ ನಾಲೆ ಮತ್ತು ಡಿ.30 ರ ರಾತ್ರಿಯಿಂದಬಲದಂಡೆ ನಾಲೆಗಳಿಗೆ 120 ದಿನಗಳ ಕಾಲನೀರು ಹರಿಸಲಾಗುವುದು.

ಅಚ್ಚುಕಟ್ಟು ಪ್ರದೇಶದ ಯಾವುದೇ ನಾಲೆಗಳ ಭಾಗದ ರೈತರಿಗೆತೊಂದರೆಯಾಗದಂತೆ ನೀರು ಹರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.ದಾವಣಗೆರೆ, ಮಲೆಬೆನ್ನೂರು ಶಾಖಾನಾಲೆಗಳಿಗೆ ಸ್ವಲ್ಪ ತಡವಾಗಿ ಅಂದರೆ ಜನವರಿ 6ಅಥವಾ 7 ಕ್ಕೆ ನೀರು ಹರಿಸುವಂತೆ ಅಧಿಕಾರಿಗಳುಕೇಳಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿ ಮರಳಿನ ತಡೆಒಡ್ಡಿ ನೀರು ಹರಿಸುವಂತೆ ಸೂಚಿಸಲಾಗಿದೆ.

ಭದ್ರಾ ಜಲಾಶಯದಲ್ಲಿ ಡಿ.28 ರಂದು 57.703 ಟಿಎಂಸಿನೀರು ಬಳಕೆಗೆ ಲಭ್ಯವಿದೆ. ಬೇಸಿಗೆ ಅವಧಿಗೆ 51.97ಟಿಎಂಸಿ ನೀರು ಅವಶ್ಯವಿದ್ದು,5.733 ಟಿಎಂಸಿ ನೀರುಜಲಾಶಯದಲ್ಲಿ ಉಳಿಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next