Advertisement

ಜನವರಿಯಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟ

05:38 PM Dec 28, 2021 | Adarsha |

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕಸ್ಪರ್ಧೆಗಳನ್ನು 2022 ರ ಜನವರಿಯಲ್ಲಿಆಯೋಜಿಸಲು ಉದ್ದೇಶಿಸಲಾಗಿದೆ ಎಂದುಜಿಲ್ಲಾಧಿ ಕಾರಿ ಕೆ.ಬಿ. ಶಿವಕುಮಾರ್‌ ಹೇಳಿದರು.

Advertisement

ಸೋಮವಾರ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು.ಎರಡು ದಿನಗಳ ಕಾಲ ನಡೆಯಲಿರುವ ಈಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವರುಸೇರಿದಂತೆ ವಿವಿಧ ಗಣ್ಯರನ್ನು ಉದ್ಘಾಟನೆಗೆಆಹ್ವಾನಿಸಲಾಗುವುದು.

ಕ್ರೀಡೆಗಳ ನಿರ್ಣಯಕ್ಕೆದೈಹಿಕ ಶಿಕ್ಷಕರನ್ನು ಹಾಗೂ ಸಾಂಸ್ಕೃತಿಕಸ್ಪರ್ಧೆಗಳಿಗೆ ತಜ್ಞ ತೀರ್ಪುಗಾರರನ್ನುನಿಯೋಜಿಸಲಾಗುವುದು ಎಂದರು.ನಗರದ ಕುವೆಂಪು ರಂಗಮಂದಿರ, ನೌಕರರಭವನ, ಡಾ|ಅಂಬೇಡ್ಕರ್‌ ಭವನ ಹಾಗೂನೆಹರೂ ಒಳಾಂಗಣ ಹಾಗೂ ಹೊರಾಂಗಣಕ್ರೀಡಾಂಗಣದಲ್ಲಿ ಕ್ರೀಡಾ ಕೂಟ ಹಾಗೂಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುವುದು.

ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆರಾಜ್ಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿಭಾಗವಹಿಸಲು ಶಿಫಾರಸ್ಸು ಮಾಡಲಾಗುವುದು.ಜಿಲ್ಲಾ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆಕರ್ಷಕಬಹುಮಾನ ಹಾಗೂ ಸ್ಮರಣಿಕೆಗಳನ್ನು ನೀಡಿಗೌರವಿಸಲಾಗುವುದು ಎಂದರು.

ಈ ಕ್ರೀಡಾಕೂಟಕ್ಕೆ ಜಿಲ್ಲೆಯಿಂದ ಸುಮಾರು4,000ಕ್ಕೂ ಹೆಚ್ಚಿನ ನೌಕರರು ಭಾಗವಹಿಸುವನಿರೀಕ್ಷೆ ಇದ್ದು, ಕ್ರೀಡಾಪಟುಗಳಿಗೆ 2ದಿನಗಳಕಾಲ ಮಧ್ಯಾಹ್ನದ ಊಟೋಪಚಾರ ವ್ಯವಸ್ಥೆಕಲ್ಪಿಸಲಾಗುವುದು. ಅಲ್ಲದೇ ಕ್ರೀಡಾಕೂಟದಲ್ಲಿಭಾಗವಹಿಸುವ ನೌಕರರಿಗೆ ವಿಶೇಷಸಾಂದರ್ಭಿಕ ರಜೆ ಸೌಲಭ್ಯ ಕಲ್ಪಿಸಲಾಗುವುದುಎಂದು ಜಿಲ್ಲಾ ಧಿಕಾರಿಗಳು ತಿಳಿಸಿದರು.ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ,ಸ್ಪರ್ಧೆಗಳನ್ನು ಆಯೋಜಿಸಲಾಗುವುದು.ಆದ್ದರಿಂದ ಪ್ರತಿ ವರ್ಷದಂತೆ ಕ್ರೀಡಾಕೂಟದಅಂಗವಾಗಿ ಏರ್ಪಡಿಸಲಾಗುತ್ತಿದ್ದ ರಸಸಂಜೆಕಾರ್ಯಕ್ರಮವನ್ನು ಮೊಟಕುಗೊಳಿಸಲುಉದ್ದೇಶಿಸಲಾಗಿದೆ ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next