Advertisement

ನರೇಗಾದಡಿ ರಾಜ್ಯದಡಿ ಗುರಿ ಮೀರಿ ಸಾಧನೆ

05:31 PM Dec 28, 2021 | Adarsha |

ಶಿವಮೊಗ್ಗ: ಮಹಾತ್ಮಾ ಗಾಂ ಧಿ ನರೇಗಾಯೋಜನೆಯಡಿ 2021 -22 ನೇ ಸಾಲಿಗೆನೀಡಲಾಗಿದ್ದ 13 ಕೋಟಿ ಮಾನವ ದಿನಗಳಗುರಿಯನ್ನು ಮೀರಿ ಇಲ್ಲಿಯವರೆಗೆ 13.4 ಕೋಟಿಮಾನವ ದಿನಗಳ ಉದ್ಯೋಗ ಸƒಷ್ಟಿ ಮಾಡಲಾಗಿದೆಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಸರ್ಕಾರದ ಬೇಡಿಕೆ ಪರಿಗಣಿಸಿ ಕೇಂದ್ರಸರ್ಕಾರ ನಿಗದಿತ ಗುರಿಯನ್ನು ಅವ ಧಿಗೆ ಮುನ್ನಪೂರ್ಣಗೊಳಿಸಿದ್ದಕ್ಕಾಗಿ ಹೆಚ್ಚುವರಿಯಾಗಿ 1.40ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಗೆ ಅವಕಾಶಕಲ್ಪಿಸಿದ್ದು, ರಾಜ್ಯಕ್ಕೆ ಹೆಚ್ಚುವರಿಯಾಗಿ715 ಕೋಟಿ ರೂ. ಅನುದಾನ ನೀಡಿದೆಎಂದರು.ನರೇಗಾ ಕೂಲಿ ಪಾವತಿಸಲು ಕೇಂದ್ರಸರ್ಕಾರ ಡಿ. 24 ರಂದು 661.24 ಕೋಟಿರೂ. ಅನುದಾನ ಬಿಡುಗಡೆ ಮಾಡಿದ್ದು,ಇಲ್ಲಿಯವರೆಗಿನ ಸಂಪೂರ್ಣ ಬಾಕಿ ಚುಕ್ತಾಆದಂತಾಗಿದೆ ಎಂದರು.ಡಿ.31 ರ ಬಂದ್‌ ಮತ್ತು ನೈಟ್‌ ಕರ್ಫ್ಯೂಗೆ ಸಂಬಂ ಧಿಸಿದಂತೆ ವ್ಯಾಪಾರಿಗಳ ಆಕ್ಷೇಪದಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರನಿಯಮಾವಳಿಯನ್ನು ಶಿವಮೊಗ್ಗದಜನತೆ ಮತ್ತು ವ್ಯಾಪಾರಿಗಳು ಆರೋಗ್ಯದದೃಷ್ಟಿಯಿಂದ ಬೆಂಬಲಿಸುತ್ತಾ ಬಂದಿದ್ದು,ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಸೂಚಿಸಿದಮಾರ್ಗಸೂಚಿಗಳು ಶಿವಮೊಗ್ಗದಲ್ಲೂಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ.

ಕೆಲವು ಅಪಸ್ವರಗಳು ಬರುವುದು ಸಹಜ. ಆದರೆ,ಆರೋಗ್ಯವಿದ್ದರೆ ಯಾವಾಗ ಬೇಕಾದರೂ ದುಡಿಮೆಮಾಡಿಕೊಳ್ಳಬಹುದೆಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದರು.ಮಹಾರಾಷ್ಟÅ ಏಕೀಕರಣ ಸಮಿತಿ(ಎಂಇಎಸ್‌)ನಿಷೇ ಧಿಸುವ ವಿಚಾರವಾಗಿ ಈಗಾಗಲೇ ಸರ್ಕಾರಚರ್ಚೆ ನಡೆಸಿದೆ. ರಾಜ್ಯದ ಗಡಿ, ಜಲ ವಿಚಾರದಲ್ಲಿರಾಜೀಯಾಗೋ ಪ್ರಶ್ನೆಯೇ ಇಲ್ಲ. ಮೇಕೆದಾಟುಯೋಜನೆ ಜಾರಿಗೆ ತಂದಿದ್ದೆ ಬಿಜೆಪಿ. ಕೇಂದ್ರಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು,ಜಾರಿಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಕಾಂಗ್ರೆಸ್‌ಅ ಧಿಕಾರದಲ್ಲಿದ್ದಾಗ ಯಾಕೆ ಮಾಡಲಿಲ್ಲ ಎಂದುಪ್ರಶ್ನಿಸಿದರು.ಮತಾಂತರ ಕಾಯ್ದೆ ದೊಡ್ಡ ವಿಷಯವಲ್ಲ ಎಂದುಸಿದ್ಧರಾಮಯ್ಯನವರು ಈಗ ಹೇಳಿಕೆ ನೀಡುತ್ತಿದ್ದಾರೆ.

ಆಬಿಲ್‌ ಅನ್ನು ಮೊದಲು ಜಾರಿಗೆ ತರಲು ಪ್ರಯತ್ನಿಸಿದ್ದೇಕಾಂಗ್ರೆಸ್‌. ಈಗ ಇದೇ ವಿಚಾರಕ್ಕೆ ಸದನದ ಸಮಯವ್ಯರ್ಥಗೊಳಿಸಿದ್ದೇಕೆ ಎಂದು ಪ್ರಶ್ನಿಸಿದರು.ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಬಗ್ಗೆಚರ್ಚೆ ನಡೆಸುವ ಬದಲು ಮತಾಂತರ ಕಾಯ್ದೆ ಬಗ್ಗೆಕ್ಯಾತೆ ತೆಗೆದು ಉತ್ತರ ಕರ್ನಾಟಕದ ಜನತೆಗೆ ದ್ರೋಹಮಾಡಿದ್ದಾರೆ. ಈಗ ಮೇಕೆದಾಟು ಯೋಜನೆಯಕ್ಯಾತೆ ತೆಗೆದು ಅಣ್ಣ ತಮ್ಮಂದಿರಂತೆ ಇರುವ ತಮಿಳುಮತ್ತು ಕನ್ನಡ ಭಾಷಿಕರನ್ನು ಎತ್ತಿಕಟ್ಟಿ ಸಮಾಜದಶಾಂತಿ ಕದಡುವ ಹುನ್ನಾರ ಕಾಂಗ್ರೆಸ್‌ ನಡೆಸುತ್ತಿದೆಎಂದು ಅವರು ಆರೋಪಿಸಿದರು. ಈ ಸಂದರ್ಭದಲ್ಲಿಬಿಜೆಪಿಯ ಹಲವು ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next