ಶಿವಮೊಗ್ಗ: ಶಿಕ್ಷಣದಿಂದ ಮಾತ್ರ ಸಮಾಜವನ್ನುಶಾಶ್ವತವಾಗಿ ಮೇಲೆತ್ತಬಹುದು ಎಂದುಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ನಿಯೋಜಿತ ಪೀಠಾಧಿ ಪತಿ ಶ್ರೀವಿಖ್ಯಾತನಂದ ಸ್ವಾಮೀಜಿ ಹೇಳಿದರು.
ಫೆ.2 ರಂದು ಸೋಲೂರಿನಲ್ಲಿಆಯೋಜಿಸಲಾದ ಪಟ್ಟಾಭಿಷೇಕಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಡಿಗಭವನದಲ್ಲಿ ಶನಿವಾರ ನಡೆದ ಭಕ್ತರ ಸಭೆಯಲ್ಲಿಅವರು ಆಶೀರ್ವಚನ ನೀಡಿದರು.ಈಡಿಗ ಸಮಾಜದ ಕಟ್ಟ ಕಡೆಯವ್ಯಕ್ತಿಯನ್ನೂ ತಲುಪುವ ಉದ್ದೇಶದಿಂದಧರ್ಮಪೀಠ ಸ್ಥಾಪನೆಯಾಗಿದೆ.
ಎಲ್ಲಾ 26ಉಪ ಪಂಗಡಗಳನ್ನು ಒಂದುಗೂಡಿಸಿ ಮಠದವ್ಯಾಪ್ತಿಗೆ ತರುವ ಕೆಲಸ ನಡೆಯುತ್ತಿದೆ. ಸಮಾಜಬಾಂಧವರಿಗೆ ಶಿಕ್ಷಣ, ಉದ್ಯೋಗ ಹಾಗೂಸೂರು ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆಎಂದರು.ಈಡಿಗ ಸಮಾಜದಲ್ಲಿ ಅತ್ಯಂತ ಪ್ರತಿಭಾಶಾಲಿಮಕ್ಕಳಿದ್ದಾರೆ. ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗೆಅಣಿಗೊಳಿಸುವ ಕೆಲಸವನ್ನು ಮಠ ಮಾಡಲಿದೆ.ಈ ದಿಸೆಯಲ್ಲಿ ಸಮಾಜದ ಎಲ್ಲರ ಸಹಕಾರಅಗತ್ಯವಿದೆ. ಜನಸೇವೆ ಮಾಡುವ ಉದ್ದೇಶದಿಂದಸ್ವಾಮೀಜಿ ಆಗಿದ್ದೇನೆ.
ನನಗೆ ಜನ ಸೇರಿಸಿಸಮಾವೇಶ ಮಾಡುವುದು ಮುಖ್ಯವಲ್ಲ.ಕಷ್ಟದಲ್ಲಿರುವ ಸಮಾಜದ ಕೊನೇ ಮನುಷ್ಯನಿಗೆಸಾಂತ್ವನ ಹೇಳುವುದು ನನ್ನ ದ್ಯೆàಯವಾಗಿದೆಎಂದು ಶ್ರೀಗಳು ಹೇಳಿದರು.ಬಾಲ್ಯದಿಂದಲೇ ಸನ್ಯಾಸತ್ವ ಸ್ವೀಕರಿಸಿದತಾವು ಶಿವಗಿರಿಯಲ್ಲಿ ವೇದಾಧ್ಯಯನ,ಸಂಸ್ಕೃತ ಅಧ್ಯಯನ ಮಾಡಿದ್ದು, ಎರಡು ವರ್ಷಹೃಷಿಕೇಷದಲ್ಲಿ ಆಧ್ಯಾತ್ಮ ಶಿಕ್ಷಣ ಪಡೆದಿದ್ದೇನೆ.ಉಡುಪಿಜಿಲ್ಲೆ ಕಾರ್ಕಳ ತಾಲೂಕು ಈದುಗ್ರಾಮದಲ್ಲಿ ಆಶ್ರಮ ಮಾಡಿಕೊಂಡು ಬಡಮಕ್ಕಳಿಗೆ ಶಾಲೆ ನಡೆಸಲಾಗುತ್ತಿದೆ ಎಂದುಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಈಡಿಗಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್‌ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿಬಹುಸಂಖ್ಯಾತರಾದರೂ, ಸಂಘಟನಾದೃಷ್ಟಿಯಲ್ಲಿ ನಾವು ಹಿಂದೆ ಬಿದ್ದಿದ್ದೇವೆ.ಸ್ವಾಮೀಜಿಗಳ ಸಾರಥ್ಯದಲ್ಲಿ ಮುಂದಿನ ದಿನಗಳಲ್ಲಿಸಮಾಜದ ಏಳಿಗೆ ಆಗಲಿದೆ ಎಂದು ಹೇಳಿದರು.ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣಮಾತನಾಡಿ, ಈಡಿಗರ ಸಾಮರ್ಥಯ ಸಾಬೀತುಪಡಿಸಲು ಫೆ.2 ರಂದು ನಡೆಯುವ ಪೀಠಾರೋಹಣ ಕಾರ್ಯಕ್ರಮ ಒಂದು ಅವಕಾಶವಾಗಿದೆ. ಐದು ಲಕ್ಷ ಜನ ಸೇರಿ ನಮ್ಮ ಗುರುಪೀಠಕ್ಕೆ ಶಕ್ತಿತುಂಬಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಾ|ಜಿ.ನಾರಾಯಣಪ್ಪ,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡುರತ್ನಾಕರ್,ಉದ್ಯಮಿ ಸುರೇಶ್ ಬಾಳೇಗುಂಡಿ,ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿದತ್ತಾತ್ರೇಯ, ಬಿಲ್ಲವ ಸಂಘದ ಜಿಲ್ಲಾಧ್ಯಕ್ಷಭುಜಂಗಯ್ಯ ಮಾತನಾಡಿದರು.ಕಾರ್ಯದರ್ಶಿ ಎಸ್.ಸಿ.ರಾಮಚಂದ್ರಸ್ವಾಗತಿಸಿದರು. ಜಿ.ಡಿ. ಮಂಜುನಾಥ್‌ಕಾರ್ಯಕ್ರಮ ನಿರೂಪಿಸಿದರು.