Advertisement

ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ

07:59 PM Dec 25, 2021 | Adarsha |

ಶಿವಮೊಗ್ಗ: ದೈಹಿಕ ಹಲ್ಲೆ, ಮಾನಸಿಕ ಹಿಂಸೆ, ಲೈಂಗಿಕದೌರ್ಜನ್ಯ ಸೇರಿದಂತೆ ಮಹಿಳೆ ಮತ್ತು ಮಕ್ಕಳಮೇಲಾಗುವ ಯಾವುದೇ ದೌರ್ಜನ್ಯ ಪ್ರಕರಣಗಳನ್ನುಅತ್ಯಂತ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದುಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌ ಹೇಳಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯಿಂದ ಅನುಷ್ಠಾನದಲ್ಲಿರುವ ವಿವಿಧಯೋಜನೆಗಳ ಕುರಿತು ನಡೆದ ಪ್ರಗತಿ ಪರಿಶೀಲನಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಳೆದ ಆರು ತಿಂಗಳ ಅವ ಧಿಯಲ್ಲಿ ಮಕ್ಕಳಮೇಲಿನ ದೌರ್ಜನ್ಯ ನಡೆದ 24 ಪ್ರಕರಣಗಳನ್ನುಗುರುತಿಸಲಾಗಿದ್ದು, ಆ ಪೈಕಿ 11 ಪ್ರಕರಣಗಳಿಗೆಸಂಬಂಧಿ ಸಿದಂತೆ ದೂರು ದಾಖಲಿಸಲಾಗಿದೆ.

ಇಂತಹಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಧಿಕಾರಿಗಳು ಜಿಪಂ ಸಿಇಒಎಂ.ಎಲ್‌. ವೈಶಾಲಿ ಅವರಿಗೆ ಸೂಚಿಸಿದರು.ಮಕ್ಕಳ ಮೇಲೆ ನಡೆಯುವ ಕ್ರೌರ್ಯ,ಹಲ್ಲೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ,ಅವರಿಂದ ದೂರುಗಳನ್ನು ಸ್ವೀಕರಿಸಿ, ನೊಂದವರನೆರವಿಗೆ ಧಾವಿಸಲು ಮಕ್ಕಳ ಸಹಾಯವಾಣಿಕಾರ್ಯನಿರ್ವಹಿಸುತ್ತಿದೆ. ಈ ಸಹಾಯವಾಣಿಸಾರ್ವಜನಿಕರು 1098ಕ್ಕೆ ಉಚಿತವಾಗಿ ಕರೆಮಾಡಿದೂರು ದಾಖಲಿಸಬಹುದಾಗಿದೆ.

ಈ ವಿಷಯವನ್ನುಜಿಲ್ಲಾದ್ಯಂತ ಭಿತ್ತಿ ಬರಹಗಳ ಮೂಲಕಪ್ರಚುರಪಡಿಸಲಾಗಿದೆ. ಅಗತ್ಯವಿರುವಲ್ಲಿ ಇನ್ನಷ್ಟುಭಿತ್ತಿ ಬರಹಗಳನ್ನು ಬರೆಸಿ, ಪ್ರಚುರ ಪಡಿಸುವಂತೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಅ ಧಿಕಾರಿಗಳಿಗೆ ಸೂಚಿಸಿದ ಅವರು, ರಾಜ್ಯ ರಸ್ತೆಸಾರಿಗೆ ನಿಗಮದ ಬಸ್‌ ನಿಲ್ದಾಣ ಮತ್ತು ಮಹಾನಗರಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ಮನವಿಮಾಡುವುದಾಗಿ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯಿಂದ ಪೊಲೀಸ್‌, ಶಿಕ್ಷಣ ಇಲಾಖೆಅ ಧಿಕಾರಿಗಳಿಗೆ ಈಗಾಗಲೇ ತರಬೇತಿಗಳನ್ನುಆಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಸಂಬಂಧಿ ತಇನ್ನಷ್ಟು ವಿವಿಧ ಇಲಾಖೆಯ ಅಧಿ ಕಾರಿಗಳಿಗೂತರಬೇತಿ ನೀಡಿ. ಇದರಿಂದ ಯೋಜನೆಯ ವ್ಯವಸ್ಥಿತಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ಸಲಹೆನೀಡಿದರು.

ಆಲ್ಕೊಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಸಂಕೀರ್ಣ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಕಲ್ಯಾಣ ಸಮಿತಿ ಕಟ್ಟಡವುಅತ್ಯಂತ ಚಿಕ್ಕದಾಗಿದ್ದು, ಕಾರ್ಯನಿರ್ವಹಣೆಗೆಅಡಚಣೆ ಉಂಟಾಗುತ್ತಿದ್ದು, ಪರ್ಯಾಯ ಕಟ್ಟಡಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದುಜಿಲ್ಲಾ ಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ಎಸ್ಪಿ ಲಕ್ಷಿ ¾àಪ್ರಸಾದ್‌, ಜಿಪಂ ಸಿಇಒಎಂ.ಎಲ್‌. ವೈಶಾಲಿ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾ ಧಿಕಾರಿ ಡಾ| ರಾಜೇಶ್‌ಸುರಗೀಹಳ್ಳಿ, ಮಹಿಳಾ ಅಭಿವೃದ್ಧಿ ಯೋಜನೆಯಕಾರ್ಯಕ್ರಮ ನಿರ್ವಾಹಕ ಸಿ. ಸುರೇಶ್‌,ಗಂಗೀಬಾಯಿ, ಮಕ್ಕಳ ಕಲ್ಯಾಣ ಸಮಿತಿಯ ರೇಖಾ,ಜಿಲ್ಲಾ ಆರ್‌.ಸಿ.ಎಚ್‌. ಡಾ| ನಾಗರಾಜ ನಾಯ್ಕ,ಡಾ| ರಜನಿ ಪೈ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next