Advertisement

ರಾಜ್ಯ ಸರಕಾರ ರೈತ ವಿರೋಧಿ ಕಾಯ್ದೆ ರದ್ದುಗೊಳಿಸಲಿ

04:02 PM Dec 22, 2021 | Team Udayavani |

ಶಿವಮೊಗ್ಗ: ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿ ವಾಪಸ್‌ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ರೈತ ಸಂಘದರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

Advertisement

ರಾಜ್ಯ ರೈತ ಸಂಘ ರೋಟರಿ ರಕ್ತನಿಧಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ರೈತ ನಾಯಕ ಎನ್‌.ಡಿ.ಸುಂದರೇಶ್‌ ಅವರ ನೆನಪಿನ ಕಾರ್ಯಕ್ರಮ ಉದ್ಘಾಟಿಸಿಅವರು ಮಾತನಾಡಿದರು.ರಾಜ್ಯ ಸರ್ಕಾರ ಕೂಡ ಎಪಿಎಂಸಿ ಕಾಯ್ದೆ ಸೇರಿದಂತೆಕೆಲವು ರೈತ ವಿರೋ ಧಿ ಕಾಯ್ದೆಗಳನ್ನು ವಾಪಸ್‌ತೆಗೆದುಕೊಳ್ಳಬೇಕು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಜೊತೆ ಚರ್ಚಿಸಲಾಗಿದೆ.

ಅವರು ವಾಪಸ್‌ ತೆಗೆದುಕೊಳ್ಳುವಭರವಸೆ ನೀಡಿದ್ದಾರೆ. ಸರ್ಕಾರದ ನಡೆಯನ್ನುಗಮನದಲ್ಲಿಟ್ಟುಕೊಂಡು ನಂತರ ರೈತ ಸಂಘ ತನ್ನ ನಿರ್ಧಾರಕೈಗೊಳ್ಳಲಿದೆ ಎಂದರು.ಸರ್ಕಾರ ರೈತರ ಸಮಸ್ಯೆಗಳನ್ನು ಆದಷ್ಟು ಬೇಗಪರಿಹರಿಸಬೇಕು. ಸರ್ಕಾರದಿಂದ ಸಿಗಬೇಕಾದ ಪರಿಹಾರಗಳುರೈತರನ್ನು ತಲುಪುತ್ತಿಲ್ಲ. ರೈತರ ಸಮಸ್ಯೆಗಳು ಹಾಗೆಯೇಉಳಿದುಕೊಂಡಿವೆ.

ರೈತರಿಗೆ ವೈಜ್ಞಾನಿಕವಾದ ರೀತಿಯಲ್ಲಿಪರಿಹಾರ ನೀಡಬೇಕಾಗಿದೆ. ಬೆಳೆ ವಿಮೆ ರೈತರ ತಲುಪಿಲ್ಲ.ಸರ್ಕಾರ ಈ ಬಗ್ಗೆ ರೈತರ ಪರ ನಿಲ್ಲಬೇಕು. ಈ ವಿಚಾರದಲ್ಲಿಸರ್ಕಾರದ ನಡೆ ಗಮನಿಸಿ ರೈತಸಂಘ ಮುಂದಿನ ನಿರ್ಧಾರಕೈಗೊಳ್ಳಲಿದೆ ಎಂದರು.ರಾಯಣ್ಣನ ಮೂರ್ತಿ ವಿರೂಪಗೊಳಿಸಿದವರು, ನಾಡಧ್ವಜಸುಟ್ಟು ಹಾಕಿ ದವರಿಗೆ ಕಠಿಣ ಶಿಕ್ಷೆಯಾಗಬೇಕು. ಕಿಡಿಗೇಡಿಗಳಕೃತ್ಯಗಳನ್ನು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ.

ಅವರನ್ನೆಲ್ಲಾ ರಾಜ್ಯದಿಂದ ಆಚೆ ನೂಕಬೇಕು. ಗಡಿಭಾಗದಲ್ಲಿಓಟಿಗಾಗಿ ಕೆಲ ರಾಜಕಾರಣಿಗಳು ಮೌನವಾಗಿರುವುದುಸರಿಯಲ್ಲ. ಇದು ಓಲೈಕೆ ರಾಜಕಾರಣ. ಇದಕ್ಕೆಲ್ಲ ಸರ್ಕಾರಅವಕಾಶ ಕೊಡಬಾರದು ಎಂದರು.ಹಿರಿಯ ರೈತ ಮುಖಂಡ ಎಚ್‌.ಆರ್‌. ಬಸವರಾಜಪ್ಪಮಾತನಾಡಿ, ಸುಂದರೇಶ್‌ ಅವರ 29 ನೇ ನೆನಪಿನಕಾರ್ಯಕ್ರಮವನ್ನು ರೈತಸಂಘ ರಕ್ತದಾನದ ಮೂಲಕಆಚರಿಸುತ್ತಿದೆ. ಇಂದು ಹಲವು ರೈತರು ರಕ್ತದಾನ ಮಾಡಿದ್ದಾರೆ.ಮುಂದಿನ ಬಾರಿ ನೇತ್ರದಾನದ ಮೂಲಕ ಸುಂದರೇಶ್‌ಅವರನ್ನು ಸ್ಮರಿಸಲಾಗುವುದು ಎಂದರು.

Advertisement

ಸುಂದರೇಶ್‌ ಅವರ ವಿಚಾರಧಾರೆಗಳು ಸದಾವರ್ತಮಾನದಲ್ಲಿರುತ್ತವೆ. ಅವರು ಆದರ್ಶಹೋರಾಟಗಾರರಾಗಿದ್ದರು. ರಾಜಕಾರಣಿಗಳಿಗೆಸಿಂಹಸ್ವಪ್ನವಾಗಿದ್ದರು. ಯಾವ ಅ ಧಿಕಾರಿಗೂ ಸೊಪ್ಪುಹಾಕುತ್ತಿರಲಿಲ್ಲ. ಉಗ್ರ ಸ್ವಭಾವ ದವರಾಗಿದ್ದರೂ ಅವರೊಳಗೆಮಾತೃ ಹೃದಯವಿತ್ತು. ಅವರ ಚಿಂತನೆಗಳ ಆತ್ಮಾವಲೋಕನಮಾಡಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ|ಬಿ.ಎಂ.ಚಿಕ್ಕಸ್ವಾಮಿ, ಡಿ.ಎಚ್‌. ರಾಮಚಂದ್ರಪ್ಪ, ಹಿಟ್ಟೂರು ರಾಜು,ಪುರದಾಳ್‌ ನಾಗರಾಜ್‌, ಟಿ.ಎಂ. ಚಂದ್ರಪ್ಪ, ಭೆ„ರೇಗೌಡ,ಪಿ.ಡಿ. ಮಂಜಪ್ಪ, ಕೆ. ರಾಘವೇಂದ್ರ, ಕುರುವ ಗಣೇಶ್‌,ಬಾಬಣ್ಣ, ಶಿವಮೂರ್ತಪ್ಪ, ರೋಟರಿ ಬ್ಲಿಡ್‌ ಬ್ಯಾಂಕ್‌ ಅಧ್ಯಕ್ಷಅರಕೆರೆ ಮಂಜಪ್ಪ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next