Advertisement

ಮತಾಂತರ ನಿಷೇಧ ಕಾಯ್ದೆ ಜಾರಿ ಸೂಕ್ತ

04:05 PM Dec 12, 2021 | Adarsha |

ಶಿವಮೊಗ್ಗ: ಪದೇ ಪದೇ ಅಲ್ಲೊಂದು-ಇಲ್ಲೊಂದು ಮತಾಂತರಪ್ರಕರಣ ಕೇಳಿ ಬರುತ್ತಿದೆ. ಆ ದೃಷ್ಟಿಕೋನ ಇಟ್ಟುಕೊಂಡು ಮತಾಂತರಕಾಯ್ದೆಯಲ್ಲಿ ತಿದ್ದುಪಡಿ ತರಲು ಸರ್ಕಾರಯೋಚಿಸುತ್ತಿದೆ. ಸಿಎಂ ಬೊಮ್ಮಾಯಿ ಅವರುಈಗಾಗಲೇ ಈ ಬಗ್ಗೆ ಹೇಳಿದ್ದಾರೆ ಎಂದುಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೆಳಗಾವಿ ಅ ಧಿವೇಶನದಲ್ಲಿ ಮಹತ್ವದಚರ್ಚೆಯಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವರೇ ಹೇಳಿದ್ದಾರೆ.ಯಾರೇ ಆದರೂ ಸ್ವತಂತ್ರವಾಗಿ ಅವರ ಧರ್ಮದಲ್ಲಿ ಬದುಕಲುಅವಕಾಶವಿದೆ. ಆದರೆ ಬಲಾತ್ಕಾರವಾಗಿ ಮಾಡಲು ಕಾನೂನಿನಲ್ಲಿಅವಕಾಶ ಇಲ್ಲ. ಈ ನಿಟ್ಟಿನಲ್ಲಿ ಬಿಗಿಯಾದ ನಿಲುವು ಬರುವುದು ಸರಿಇದೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆಗೂ ತಿದ್ದುಪಡಿ ಅಗತ್ಯವಿದೆ.ಪ್ರಕರಣ ದಾಖಲಾದರೂ ಕೆಲವೇ ಗಂಟೆಯಲ್ಲಿ ಹೊರಬರುತ್ತಾರೆ.ಹೀಗಾಗಿ ಕಾಯ್ದೆ ಮತ್ತಷ್ಟು ಬಿಗಿಯಾದರೆ ಕಾನೂನಿಗೂ ಗೌರವಬರುತ್ತದೆ ಎಂದರು. ಪರಿಷತ್‌ ಚುನಾವಣೆಯಲ್ಲಿ ನಾವು ಗೆಲೆ¤àವೆ.ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮೊದಲ ಪ್ರಾಶಸ್ತ್ಯದಲ್ಲೇ ಶಿವಮೊಗ್ಗ ಗೆಲ್ಲುತ್ತೇವೆ. ರಾಜ್ಯದಲ್ಲಿ 12-15 ಸ್ಥಾನ ಗೆಲ್ಲುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next