Advertisement

ಮೊಬೈಲ್‌ ವ್ಯಾಮೋಹಕ್ಕೆ ಬಲಿಯಾಗದಿರಿ

02:33 PM Dec 09, 2021 | Adarsha |

ಸೊರಬ: ವಿದ್ಯಾರ್ಥಿಗಳು ಮೊಬೈಲ್‌ವ್ಯಾಮೋಹಕ್ಕೆ ಬಲಿಯಾಗದೆ ಆಧುನಿಕತಂತ್ರಜ್ಞಾನಗಳನ್ನು ಜ್ಞಾನಾರ್ಜನೆಗೆ ಬಳಕೆಮಾಡಿಕೊಳ್ಳಬೇಕು ಎಂದು ಪೊಲೀಸ್‌ವೃತ್ತ ನಿರೀಕ್ಷಕ ಎಲ್‌. ರಾಜಶೇಖರ ಕರೆ ನೀಡಿದರು.

Advertisement

ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್‌ಇಲಾಖೆ ವತಿಯಿಂದ ರಾಷ್ಟ್ರೀಯಸೇವಾ ಯೋಜನೆ ಘಟಕ 1 ಮತ್ತು 2,ರೋವರ್ ಮತ್ತು ರೇಂಜರ್ ಘಟಕದಸಹಯೋಗದಲ್ಲಿ ಹಮ್ಮಿಕೊಂಡಿದ್ದಅಪರಾಧ ತಡೆ ಮಾಸಾಚರಣೆಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಯುವ ಸಮೂಹ ಮೋಜು-ಮಸ್ತಿಯಗೀಳಿಗೆ ಬಿದ್ದು, ಕಾನೂನು ಪರಿಪಾಲನೆಯಅರಿವಿಲ್ಲದೆ ಜೀವನ ಹಾಳುಗೆಡವಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ.

ನಮ್ಮ ದೇಶದಕಾನೂನನ್ನು ಗೌರವಿಸಿ ಸಮಾಜದಲ್ಲಿಶಾಂತಿ- ಸುವ್ಯವಸ್ಥೆ ಕಾಪಾಡಲು ಸಹಕಾರನೀಡಬೇಕು. ವಿದ್ಯಾರ್ಥಿಗಳು ಶಿಕ್ಷಣಕ್ಕೆಹೆಚ್ಚು ಒತ್ತು ನೀಡಬೇಕೇ ವಿನಃ, ದಿನವಿಡೀಮೊಬೈಲ್‌ನಲ್ಲಿ ಮಗ್ನರಾಗುವುದು,ಯಾವುದೋ ಒಂದು ಸಂದೇಶದಬಗ್ಗೆ ಅರಿತು ಅರಿಯದೇ ಅದನ್ನುಇನ್ನೊಬ್ಬರಿಗೆ ವರ್ಗಾವಣೆ ಮಾಡುವುದು,

ಅಪರಿಚಿತರೊಂದಿಗೆ ಸಾಮಾಜಿಕಜಾಲತಾಣದಲ್ಲಿ ಸ್ನೇಹ ಬೆಳೆಸುವುದರಿಂದಮುಂದಾಗುವ ಪರಿಣಾಮಗಳನ್ನುಎದುರಿಸಬೇಕಾಗುತ್ತದೆ ಎಂದರು.ಕಾಲೇಜಿನ ಉಪನ್ಯಾಸಕರಾದ ಡಾ|ಶೋಯಬ್‌ ಅಹಮ್ಮದ್‌, ಮಧುರಯಾದವ್‌, ಕಾಸನಾಳೆ ವರ್ಷ, ಆನಂದಕುಮಾರ್‌, ಶಂಕರ ನಾಯ್ಕ, ಪೊಲೀಸ್‌ಇಲಾಖೆಯ ಸಿಬ್ಬಂದಿ ಸಂದೀಪಕುಮಾರ್‌, ಯು. ಶಿವಾನಂದ,ಬಂಗಾರಪ್ಪ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next