Advertisement

ರೈತರನ್ನು ಸಾಲಮುಕ್ತಗೊಳಿಸಲು ಆಗ್ರಹ

02:28 PM Dec 09, 2021 | Adarsha |

ಶಿವಮೊಗ್ಗ: ರೈತರನ್ನು ಸಾಲದಿಂದ ಮುಕ್ತಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಕಿಸಾನ್‌ ಸಂಘದಿಂದ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗೆಮನವಿ ಸಲ್ಲಿಸಲಾಯಿತು.ರಾಜ್ಯದಲ್ಲಿ 3.5 ಕೋಟಿ ರೈತರು ಕೃಷಿಯನ್ನೇ ನಂಬಿ ಬದುಕುತಿದ್ದಾರೆ.

Advertisement

ಉತ್ಪಾದನಾ ವೆಚ್ಚ ಅತಿಯಾಗಿದ್ದು, ವೈಜ್ಞಾನಿಕಬೆಲೆ ಸಿಗದೇ ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣವೇ ಬೆಂಬಲಬೆಲೆಯನ್ನು ನೀಡಬೇಕು. ರೈತರ ಎಲ್ಲಾ ಸಾಲಗಳನ್ನು ಮನ್ನಾಮಾಡಬೇಕು. ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಬೆಳೆವಿಮೆ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು.

ಬೀಜ,ಗೊಬ್ಬರ, ಯಂತ್ರಗಳ ಖರೀದಿಗೆ ಸಹಾಯಧನ ನೀಡಬೇಕು.ವೈಜ್ಞಾನಿಕ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳನ್ನುಸ್ಥಾಪಿಸಬೇಕು. 60 ವರ್ಷ ವಯಸ್ಸಾದ ಎಲ್ಲಾ ರೈತರಿಗೂ ಕೃಷಿನಿವೃತ್ತಿ ವೇತನ ನೀಡಬೇಕು. ರೈತರ ಮಕ್ಕಳಿಗೆ ಉಚಿತ ಶಿಕ್ಷಣನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ರಾಷ್ಟ್ರೀಯ ಕಿಸಾನ್‌ ಸಂಘದ ರಾಜ್ಯಾಧ್ಯಕ್ಷವಿ. ನಾಗಭೂಷಣ ರೆಡ್ಡಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ, ಸಹ ಸಂಚಾಲಕಿ ಎಸ್‌.ವಿ. ರಾಜಮ್ಮ, ಪ್ರಮುಖರಾದಲತಾ, ಜಯಮ್ಮ, ನಾರಾಯಣ ಗೌಡ, ಹೊನ್ನಮ್ಮ, ಚಂದ್ರು,ಶ್ರುತಿ, ರಾಜು, ಬೇಬಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next