ಶಿವಮೊಗ್ಗ: ಕೆಎಫ್‌ಡಿ ಸಾಂಕ್ರಾಮಿಕ ರೋಗನಿಯಂತ್ರಣದಲ್ಲಿ ಶಿವಮೊಗ್ಗದ ವಿಡಿಎಲ್ ಲ್ಯಾಬ್‌ಮಹತ್ವದ ಯಶಸ್ಸು ಸಾ ಧಿಸಿದೆ. ಇಷ್ಟು ದಿನಉಣುಗು ಪರೀಕ್ಷೆಗೆ ಪುಣೆ, ಬೆಂಗಳೂರು ಲ್ಯಾಬ್‌ಅವಲಂಬಿಸಿದ್ದ ಇಲಾಖೆ ಈಗ ಶಿವಮೊಗ್ಗದಲ್ಲಿಪರೀಕ್ಷೆಗೆ ಸಜ್ಜಾಗಿದೆ. ಕೆಎಫ್‌ಡಿ ಬಾಧಿ ತ 11 ಜಿಲ್ಲೆಗಳಿಗೆಇದು ವರದಾನವಾಗಲಿದೆ.
ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ವೈರಸ್‌ಆ ಪ್ರದೇಶದಲ್ಲಿ ಇದೆಯೇ ಇಲ್ಲವೇ ಎಂಬುದನ್ನುಪತ್ತೆ ಹಚ್ಚಲು ಇಲಾಖೆ ಮಾನವ ರಕ್ತ ಮಾದರಿ,ಉಣುಗುಗಳ ಪರೀಕ್ಷೆ, ಸತ್ತ ಮಂಗಗಳ ಪರೀಕ್ಷೆನಡೆಸುತ್ತದೆ. ಇದರ ಮೂಲಕ ಕೆಎಫ್‌ಡಿ ಬಾ ಧಿತವೇಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಸಾಮಾನ್ಯವಾಗಿಕೆಎಫ್‌ಡಿ ವೈರಸ್ ಉಣುಗುಗಳ ಮೂಲಕದನಕರುಗಳಿಗೆ ಸಂಪರ್ಕಿಸಿ ನಂತರ ಮಾನವನಿಗೆಬರುತ್ತದೆ. ಹಾಗಾಗಿ ಪ್ರತಿವರ್ಷ ಕೆಎಫ್‌ಡಿ ಬಾಧಿ ತಪ್ರದೇಶಗಳಲ್ಲಿ ಉಣುಗುಗಳ ಮಾದರಿ ಸಂಗ್ರಹಿಸಿಲ್ಯಾಬ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.ಉಣುಗುಗಳಲ್ಲಿ ವೈರಸ್ ಪತ್ತೆಯಾದರೆ ಆ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನುಕೈಗೊಳ್ಳಲಾಗುತ್ತಿದೆ.
ಆದರೆ ಈ ಪರೀಕ್ಷೆಗೆಪುಣೆ ಅಥವಾ ಬೆಂಗಳೂರು ಲ್ಯಾಬ್‌ಗಳನ್ನುಅವಲಂಬಿಸಬೇಕಾಗುತ್ತದೆ. ಫಲಿತಾಂಶ ಸಿಗಲು ಕನಿಷ್ಟ10ರಿಂದ 15 ದಿನಗಳ ಕಾಲಾವಕಾಶ ಬೇಕು. 15ದಿನದಲ್ಲಿ ವೈರಸ್ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿರುವಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇದರಿಂದ ತುರ್ತುಕ್ರಮಗಳನ್ನು ಕೈಗೊಳ್ಳಲು ವಿಳಂಬವಾಗುತ್ತಿತ್ತು.ಇನ್ಮುಂದೆ ಶಿವಮೊಗ್ಗದ ವಿಡಿಎಲ್ ಲ್ಯಾಬ್‌ನಲ್ಲೇ ಈಪರೀಕ್ಷೆ ನಡೆಯಲಿದೆ.
ಒಂದೇ ದಿನದಲ್ಲಿ ರಿಸಲ್ಟ್: ಉಪಕರಣಗಳು ಇದ್ದರೂಪರೀಕ್ಷೆಗೆ ಬೇಕಾದ ನುರಿತ ತಜ್ಞರು ಇರಲಿಲ್ಲ.ಈಗ ವಿಡಿಎಲ್ ಲ್ಯಾಬ್ ಸಿಬ್ಬಂದಿಯೊಬ್ಬರಿಗೆಉಣುಗು ಪರೀಕ್ಷೆ ತರಬೇತಿ ನೀಡಲಾಗಿದೆ. ಕೆಲವೇದಿನಗಳಲ್ಲಿ ಉಣುಗು ಪರೀಕ್ಷೆ ಆರಂಭಗೊಳ್ಳಲಿದೆ.ಆಗ ಒಂದೇ ದಿನದಲ್ಲಿ ಫಲಿತಾಂಶ ಸಿಗಲಿದೆ.
ಪ್ರತಿವರ್ಷ 1500ಕ್ಕೂ ಹೆಚ್ಚು ಉಣುಗುಗಳನ್ನು ಪರೀಕ್ಷೆಗೆಒಳಪಡಿಸಲಾಗುತ್ತಿದೆ. ಕೆಎಫ್‌ಡಿ ತನ್ನ ವ್ಯಾಪ್ತಿ ವಿಸ್ತಾರಮಾಡಿಕೊಂಡಿರುವುದರಿಂದ ಒಂದೇ ದಿನದಲ್ಲಿರಿಸಲ್ಟ್ ಸಿಕ್ಕರೆ ಅಂತಹ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್,ಫಾಗಿಂಗ್ ಮಾಡಲು ಅನುಕೂಲವಾಗುತ್ತದೆಎಂಬುದು ತಜ್ಞರ ಅಭಿಮತ.
ಶರತ್ ಭದ್ರಾವತಿ