Advertisement

ವಿವಿಧೆಡೆ ಭಕ್ತಿಭಾವದ ಗೋಪೂಜ

03:02 PM Nov 07, 2021 | Adarsha |

ಶಿವಮೊಗ್ಗ: ಗೋ ರಕ್ಷಣೆ ನಮ್ಮೆಲ್ಲರ ಹೊಣೆ.ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆಪೂಜ್ಯ ಸ್ಥಾನವಿದ್ದು, ದೇಹದ ಅನೇಕ ರೋಗಗಳಿಗೆ ಗೋವಿನ ಉತ್ಪನ್ನಗಳು ಔಷಧೀಯ ಪರಿಣಾಮ ಬೀರುವುದು ಪ್ರಾಚೀನಕಾಲದಿಂದಲೂ ಸಾಬೀತಾಗಿದೆ. ಗೋವುನಮ್ಮ ರಾಷ್ಟ್ರೀಯ ಸಂಪತ್ತು ಎಂದು ಖ್ಯಾತಮಕ್ಕಳ ತಜ್ಞ ಡಾ| ಧನಂಜಯ ಸರ್ಜಿ ಹೇಳಿದ್ದಾರೆ.

Advertisement

ನಗರದ ಕೋಟೆ ಸೀತಾರಾಮಾಂಜನೇಯದೇವಸ್ಥಾನದ ಆವರಣದಲ್ಲಿ ಶುಕ್ರವಾರ ಗೋಪೂಜೆ ನಿಮಿತ್ತ ವಿಶ್ವ ಹಿಂದೂ ಪರಿಷತ್‌ಮತ್ತು ಭಜರಂಗ ದಳದಿಂದ ಹಮ್ಮಿಕೊಂಡಿದ್ದಗೋಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿಅವರು ಮಾತನಾಡಿದರು.

ದೇಶದಲ್ಲಿ 30 ಕೋಟಿಗೂ ಹೆಚ್ಚುಗೋವುಗಳಿವೆ. ಗೋವನ್ನು ಪುಣ್ಯಕೋಟಿಎಂದು ಕರೆಯುತ್ತಾರೆ. ಗೋವಿನಹಾಲು, ಸಗಣಿ, ಮೂತ್ರದಿಂದ ಕೂಡಅನೇಕ ಔಷ ಧಗಳು ತಯಾರಾಗುತ್ತಿದ್ದು,ಆಯುರ್ವೇದದಲ್ಲಿ ಗೋವಿನ ಉತ್ಪನ್ನಗಳುಪ್ರಮುಖ ಪಾತ್ರ ವಹಿಸಿವೆ. ರಕ್ತದೊತ್ತಡ,ಸಕ್ಕರೆ ಕಾಯಿಲೆ, ಚರ್ಮರೋಗ, ಕ್ಯಾನ್ಸರ್‌,ಹೃದಯ ರೋಗಗಳ ನಿಯಂತ್ರಣದಲ್ಲಿಗೋಮೂತ್ರ ಪ್ರಮುಖ ಪಾತ್ರ ವಹಿಸುತ್ತದೆ.ಗೋವಿನ ಗೊಬ್ಬರದಿಂದಲೂ ಅನೇಕವಸ್ತುಗಳನ್ನು ತಯಾರಿಸುತ್ತಾರೆ.  ಸಗಣಿ ಕೂಡ ಕ್ರಿಮಿನಾಶಕವಾಗಿ ಪರಿಣಾಮ ಬೀರುತ್ತದೆ ಎಂದರು.

ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿನಿತ್ಯ ಕನಿಷ್ಠ400 ಮಿ.ಲೀ. ಹಾಲು ಬೇಕೇ ಬೇಕು.ನಮ್ಮ ದೇಶದಲ್ಲಿ ಗೋವಿನ ಸಂತತಿ ಜಾಸ್ತಿಇರುವುದರಿಂದ ನಮಗೆ ಹಾಲು ಉತ್ಪನ್ನಗಳ ಆಮದು ಅವಶ್ಯಕತೆ ಇಲ್ಲ. ವಿಶ್ವದಲ್ಲೇ ಗೋಉತ್ಪನ್ನಗಳ ಮಾರಾಟದಲ್ಲಿ 5 ನೇ ಸ್ಥಾನಪಡೆದಿದ್ದೇವೆ. ಆದರೆ, ನಮ್ಮ ದೇಶದಲ್ಲಿ ಪೂಜಿಸಲ್ಪಡುವ ಗೋವನ್ನು ಮಾಂಸಕ್ಕಾಗಿಹತ್ಯೆ ಮಾಡುತ್ತಿರುವುದು ವಿಷಾದದ ಸಂಗತಿಯಾಗಿದೆ.

360 ಮಿಲಿಯನ್‌ಮೆಟ್ರಿಕ್‌ ಟನ್‌ ಗೋ ಮಾಂಸವನ್ನು ನಾವುರಫ್ತು ಮಾಡುತ್ತಿದ್ದೇವೆ. ಗೋ ಹತ್ಯೆಯನ್ನುತಡೆಯುವ ಅವಶ್ಯಕತೆ ಇದ್ದು, ಇದರ ರಕ್ಷಣೆಗೆಎಲ್ಲರೂ ಮುಂದಾಗಬೇಕು ಎಂದರು.

Advertisement

ಈ ಸಂದರ್ಭದಲ್ಲಿ ಗೋವಿಗೆ ವಿಶೇಷಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ನಮಿತಾ ಸರ್ಜಿ, ವಿಶ್ವ ಹಿಂದೂ ಪರಿಷತ್‌ಜಿಲ್ಲಾಧ್ಯಕ್ಷ ವಾಸುದೇವ್‌, ಕಾರ್ಯದರ್ಶಿನಾರಾಯಣ ವರ್ಣೇಕರ್‌, ಭಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್‌ ಗೌಡ,ಕೋಶಾಧ್ಯಕ್ಷ ಕುಮಾರಸ್ವಾಮಿ, ನಗರಕಾರ್ಯದರ್ಶಿ ಸುಧಾಕರ್‌, ಅರವಿಂದ್‌,ಕಿರಣ್‌, ಗಣೇಶ್‌, ವಿಷ್ಣುಮೂರ್ತಿ, ರಾಜು,ಪಾಲಿಕೆ ಸದಸ್ಯ ಚನ್ನಬಸಪ್ಪ, ನಟರಾಜ್‌,ರಾಮಪ್ರಸಾದ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next