Advertisement
ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆಕೂಡ ನಿಯಮಾನುಸಾರವಾಗಿ ನಿಗದಿತ ಅವಧಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಪರಿಹಾರ ನೀಡಬೇಕೆಂದರು.ಕಳೆದ ಸಮಿತಿ ಸಭೆಯ ಅನುಪಾಲನಾ ವರದಿಚರ್ಚೆ ವೇಳೆ ಅವರು ಮಾತನಾಡಿ ಜುಲೈನಲ್ಲಿನಡೆದ ಸಭೆಯಲ್ಲಿ ಸಮಿತಿ ಸದಸ್ಯರು ಸಭೆಯಗಮನಕ್ಕೆ ತಂದ ಪರಿಶಿಷ್ಟ ಜಾತಿ, ವರ್ಗದವರ ಸಮಸ್ಯೆಗಳು, ದೌರ್ಜನ್ಯ ಪ್ರಕರಣಕ್ಕೆಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸಲಾಗಿದೆ.
Related Articles
Advertisement
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಹಸೂಡಿಗ್ರಾಮ ಸ್ಮಶಾನಕ್ಕಾಗಿ ಗ್ರಾಮಠಾಣಾ ಭೇಟಿ ನೀಡಿಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು.ಮರಳು ನೀಡಲು ನಿರಾಕರಿಸುತ್ತಿರುವ ಬಗ್ಗೆನಿಖರವಾಗಿತಿಳಿಸಿದಲ್ಲಿಕ್ರಮವಹಿಸಲಾಗುವುದು.ಅಂಬೇಡ್ಕರ್ ನಿಗಮದಡಿ ಅರ್ಜಿಗಳನ್ನು ಶೀಘ್ರವಿಲೇವಾರಿಗೆ ಅಧಿಕಾರಿಗೆ ಸೂಚಿಸಿದ ಅವರುಹಕ್ಕಿಪಿಕ್ಕಿ ವಸತಿ ಸೌಕರ್ಯದ ಬಗ್ಗೆ ಕೂಡ ಸೂಕ್ತಕ್ರಮ ವಹಿಸುವುದಾಗಿ ತಿಳಿಸಿದರು.ಶಿಕಾರಿಪುರ ತಾಲೂಕು ಉಡುಗಣಿಗ್ರಾಮದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಅರಣ್ಯ ಭೂಮಿ ಮಂಜೂರು ಮಾಡಿದ್ದರೂಅರಣ್ಯ ಇಲಾಖೆ ಅಧಿಕಾರಿಗಳು ಪ.ಜಾತಿಗೆಸೇರಿದ ರೈತರ ಅಡಕೆ ಮತ್ತು ಬಾಳೆ ಗಿಡಗಳನ್ನುಕಿತ್ತುಹಾಕಿರುವ ಬಗ್ಗೆ ಜಗದೀಶ್ ಅವರಪ್ರಸ್ತಾಪದ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳುಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ತೆರಳಿಪರಿಶೀಲನೆ ನಡೆಸಿದ್ದು, ಅಲ್ಲಿ ಸರ್ವೇ ಕಾರ್ಯನಡೆಯಬೇಕಿದೆ. ಸರ್ವೇ ವರದಿ ಬಂದ ನಂತರಈ ಬಗ್ಗೆ ನಿರ್ಧರಿಸಲಾಗುವುದು ಎಂದರು. ಸಮಿತಿ ಸದಸ್ಯರಾದ ನಾಗರಾಜ್ ಮಾತನಾಡಿ,ಶಿವಮೊಗ್ಗ ತಾಲ್ಲೂಕು ಮಂಜರಿಕೊಪ್ಪ ಸಿರಿಗೆರೆವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಕೊರಮ ಜನಾಂಗಕ್ಕೆಸೇರಿದ ಪರುಶುರಾಮ್ ಎಂಬವವರಿಗೆ ವಿದ್ಯುತ್‌ಸಂಪರ್ಕ ನೀಡಲು ಪಿಡಿಒ ಅಧಿಕಾರಿಗಳುನಿರಾಕ್ಷೇಪಣಾ ಪತ್ರ ನೀಡಿರುವುದಿಲ್ಲ.ಅಕ್ಕಪಕ್ಕದವರಿಗೆ ನೀಡಿದ್ದುಇವರಿಗೆ ಸಹ ನೀಡಲುಕ್ರಮ ವಹಿಸುವಂತೆ ಆಗ್ರಹಿಸಿದರು. ಜಿ.ಪಂಸಿಇಒ, ಈ ಕುರಿತು ತಾವೇ ಖುದ್ದು ಪರಿಶೀಲಿಸಿಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಶಿವಮೊಗ್ಗ ಮತ್ತು ಭದ್ರಾವತಿತಾಲೂಕುಗಳಲ್ಲಿ ಪರಿಶಿಷ್ಟ ಜಾತಿ ಅಲ್ಲದವರುನಕಲಿ ದಾಖಲಿ ಸƒಷ್ಟಿಸಿ ಪ.ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದು ಕಂಡು ಬಂದಿದ್ದುಈ ಬಗ್ಗೆ ಶಿಸ್ತಿನ ಕ್ರಮ ಜರುಗಿಸಬೇಕು. ಹಾಗೂಭದ್ರಾವತಿ ತಾಲೂಕಿನ ಕಲ್ಲೇಪುರದಲ್ಲಿ ಆರ್‌ಎಫ್‌ಒಗಳು ಜಮೀನಿಗೆ ಸಂಬಂಧಿಸಿದಂತೆ ದಲಿತರಮೇಲೆ ಎಫ್‌ಐಆರ್ ದಾಖಲಿಸಿದ್ದು, ಈ ಬಗ್ಗೆಸೂಕ್ತ ಪರಿಶೀಲನೆ ನಡೆಸಿ ದಲಿತರಿಗೆ ನ್ಯಾಯದೊರಕಿಸಿಕೊಡಬೇಕು ಎಂದು ನಾಗರಾಜ್‌ಆಗ್ರಹಿಸಿದರು. ಸಮಿತಿ ಸದಸ್ಯರೋರ್ವರುಸೊರಬ ತಾಲೂಕಿನ ಬೆನ್ನೂರು ಗ್ರಾಪಂನಲ್ಲಿಗೋಮಾಳ ಇದ್ದು ಇಲ್ಲಿ ಸ್ಮಶಾನಕ್ಕೆ ಅವಕಾಶಮಾಡಿಕೊಡಬೇಕೆಂದರು. ಜಿಲ್ಲಾಧಿಕಾರಿಗಳುಪ್ರತಿಕ್ರಿಯಿಸಿ ಗೋಮಾಳವನ್ನು ಸ್ಮಶಾನ ಜಾಗಕ್ಕೆನೀಡಲಾಗುವುದು ಹಾಗೂ ಪ.ಜಾತಿ ಮತ್ತುವರ್ಗದ ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ವಹಿಸುತ್ತಿದೆಎಂದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕನಾಗರಾಜ್ ಮಾತನಾಡಿ, 2021 ರಲ್ಲಿ ಒಟ್ಟು 63ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 6 ಬಿರಿಪೋರ್ಟ್ ಆಗಿದ್ದು, 35 ಪ್ರಕರಣಗಳು ಚಾಜ್ìಶೀಟ್ ಆಗಿವೆ. ಈ ವರ್ಷ 36 ಪ್ರಕರಣಗಳಿಗೆಪರಿಹಾರ ಒಟ್ಟು ರೂ.44.42 ಲಕ್ಷ ನೀಡಲಾಗಿದೆಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದಆಯನೂರು ಮಂಜುನಾಥ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಎಡಿಸಿನಾಗೇಂದ್ರ ಹೊನ್ನಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅಜ್ಜಪ್ಪ, ಜಾಗೃತಿಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ)ಸಮಿತಿ ಸದಸ್ಯರಾದ ಬಸವರಾಜ್, ನಾಗರಾಜ್,ನಾಮನಿರ್ದೇಶಿತ ಸದಸ್ಯರಾದ ಮಲ್ಲೇಶ್,ಕಿರಣ್‌ಕುಮಾರ್ ಇತರೆ ಅಧಿಕಾರಿಗಳು ಇದ್ದರು.