Advertisement

ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆಗೆ ನಿರ್ಧಾರ

07:16 PM Oct 15, 2021 | Adarsha |

ಶಿವಮೊಗ್ಗ: ಭದ್ರಾ ಅಚ್ಚುಕಟ್ಟುಪ್ರದೇಶಾಭಿವೃದ್ಧಿ ಪ್ರಾ ಧಿಕಾರದ ಸಭೆಬುಧವಾರ ಅಧ್ಯಕ್ಷೆ ಪವಿತ್ರಾ ರಾಮಯ್ಯನೇತೃತ್ವದಲ್ಲಿ ನಡೆಯಿತು.

Advertisement

ಸಭೆಯಲ್ಲಿ ವಿವಿಧವಿಷಯಗಳ ಚರ್ಚೆ ನಡೆಸಲಾಯಿತಲ್ಲದೇಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಗಾಗಿಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆಪ್ರಸ್ತಾವನೆ ಸಲ್ಲಿಸಲು ನಿರ್ಣಯಕೈಗೊಳ್ಳಲಾಯಿತು.

ಸಭೆಯಲ್ಲಿ ಪ್ರಾಧಿಕಾರದಿಂದಕೈಗೊಳ್ಳಲಾದ ಕಾರ್ಯಗಳ ಕುರಿತುಅಧಿಕಾರಿಗಳು ಮಾಹಿತಿ ನೀಡಿ, ಕಳೆದಸಾಲಿನ 2020-21 ನೇ ಸಾಲಿನಲ್ಲಿಹೊಲಗಾಲುವೆ, ಬಸಿಗಾಲುವೆ,ಆಯಕಟ್ಟು, ಭೂ ಸುಧಾರಣೆ, ಸಂಘದವರ್ಷದ ಕಾರ್ಯನುದಾನ, ಸಂಘದಪದಾ ಕಾರಿಗಳಿಗೆ ನೀಡುವ ತರಬೇತಿಹಾಗೂ ನಬಾರ್ಡ್‌ ಯೋಜನೆಗಳಿಗೆಒಟ್ಟು 1629.52 ಲಕ್ಷ ಅನುದಾನ ಹಂಚಿಕೆಯಾಗಿದ್ದು ಇಲ್ಲಿಯವರೆಗೆ ಒಟ್ಟು1304.68 ಲಕ್ಷ ಅನುದಾನ ಬಳಕೆಯಾಗಿದೆ.

ಎಸ್‌.ಡಿ.ಪಿ ಯೋಜನೆಯಡಿ ವಿವಿಧಕಾಮಗಾರಿಗಳಿಗೆ ಒಟ್ಟು 596.97ಲಕ್ಷ ಅನುದಾನ ಮಂಜೂರಾಗಿದ್ದುಸಂಪೂರ್ಣ ಕಾರ್ಯಸಾಧನೆ ಆಗಿದೆಎಂದು ತಿಳಿಸಿದರು.ಪಿಎಂಕೆಎಸ್‌ವೈ ಯೋಜನೆ ಅನುಸಾರಹೊಲಗಾಲುವೆ, ಬಸಿಗಾಲುವೆ,ಆಯಕಟ್ಟು, ಭೂ ಸುಧಾರಣೆ, ಸಂಘದವರ್ಷದ ಕಾರ್ಯನುದಾನ, ಸಂಘದಪದಾಧಿ ಕಾರಿಗಳಿಗೆ ನೀಡುವ ತರಬೇತಿ,ಮೂಲ ಸೌಕರ್ಯ ಹಾಗೂ ಇನ್ನಿತರ ಕಾಮಗಾರಿಗಳಿಗೆ ಒಟ್ಟು 120.34 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕರ್ನಾಟಕ ನೀರಾವರಿ ನಿಗಮನಿಯಮಿತ ಯೋಜನೆಯಡಿ ಹೊಲಗಾಲುವೆ ಮತ್ತು ಆಯಕಟ್ಟು ರಸ್ತೆ ಅಭಿವೃದ್ಧಿಗೆ ಒಟ್ಟು 500 ಲಕ್ಷ ಅನುದಾನಮಂಜೂರಾಗಿದ್ದು, ಇದರಲ್ಲಿ 75 ಲಕ್ಷವರಾಹಿ ಯೋಜನೆಯಡಿ ಹೊಲಗಾಲುವೆನಿರ್ಮಾಣಕ್ಕಾಗಿ ಮೀಸಲಿರಿಸಲಾಗಿದೆ.

Advertisement

2021-22 ನೇ ಸಾಲಿನ ಲೆಕ್ಕ ಶೀರ್ಷಿಕೆಯಡಿಒಟ್ಟು 1016.52 ಲಕ್ಷ, ನಂಜುಂಡಪ್ಪವರದಿಯ ಅನುಸಾರ ಹಿಂದುಳಿದಮತ್ತು ಅತಿ ಹಿಂದುಳಿದ ತಾಲೂಕುಗಳಲ್ಲಿಎಸ್‌.ಡಿ.ಪಿ ಯೋಜನೆಯಡಿ ಬರುವಪ್ರದೇಶಗಳಲ್ಲಿ ಕಾಮಗಾರಿಗಳು ನಡೆದಿವೆ.

ನಬಾರ್ಡ್‌ ಯೋಜನೆಗಳಿಗೆ ಅನುದಾನಬಿಡುಗಡೆಯಾಗಿಲ್ಲ ಎಂಬ ಮಾಹಿತಿನೀಡಲಾಯಿತು.ಭದ್ರಾ ಅಚ್ಚುಕಟ್ಟು ಪ್ರದೇಶದಅಭಿವೃದ್ಧಿ ಕಾಮಗಾರಿಗಳಿಗೆ ಪ್ರತಿಯೊಬ್ಬನಿರ್ದೇಶಕರಿಗೆ 2 ಕೋಟಿಯಂತೆಒಟ್ಟು 25 ಕೋಟಿ ಅನುದಾನ ಕೋರಿಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಅಲ್ಲದೇನಿರ್ದೇಶಕರಿಗೆ ಮಂಡಳಿ ಸಭೆಯ ದಿನನೀಡುವ 3 ಸಾವಿರ ಭತ್ಯೆ ಬದಲು 5ಸಾವಿರಕ್ಕೆ ಹೆಚ್ಚಿಸುವಂತೆ ಹಾಗೂ ಪ್ರಯಾಣಭತ್ಯೆ, ದಿನ ಭತ್ಯೆ ನೀಡುವಂತೆ ಪ್ರಸ್ತಾವನೆಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.

ಇ-ಟೆಂಡರ್‌ ಅನುಸಾರ ರಾಜ್ಯದಯಾವುದೇ ಮೂಲೆಯಲ್ಲಿ ಗುತ್ತಿಗೆದಾರಕುಳಿತುಕೊಂಡು ಬಿಡ್‌ ಮಾಡಬಹುದು,ಬಿಡ್‌ ಮಾಡುವ ಗುತ್ತಿಗೆದಾರ ಕಡಿಮೆಬೆಲೆಗೆ ಕೋಟ್‌ ಮಾಡುವುದರಿಂದಹಾಗೂ ಸ್ಥಳೀಯ ಗುತ್ತಿಗೆದಾರರಿಗೆ ಸಬ್‌ ಕಾಂಟ್ರಾಕ್ಟ್ ನೀಡುವುದರಿಂದ ಗುಣಮಟ್ಟದ ಕೆಲಸ ನಿರ್ವಹಣೆ ಕಷ್ಟ.ಆದ್ದರಿಂದ ಇದರಲ್ಲಿ ಬದಲಾವಣೆತಂದು ಸ್ಥಳೀಯ ಗುತ್ತಿಗೆದಾರರು ಭಾಗವಹಿಸಲು ಬದಲಾವಣೆ ತರುವಂತೆ ಪ್ರಸ್ತಾವನೆ ಸಲ್ಲಿಸುವ ಕುರಿತು ಚರ್ಚೆನಡೆಸಲಾಯಿತು.

ಸುಮಾರು 5 ಲಕ್ಷ ವೆಚ್ಚದ ಕಾಮಗಾರಿತನಕ ಮಾನ್ಯುಯಲ್‌ ಟೆಂಡರ್‌ಕರೆಯುವ ಹಾಗೆ ಪ್ರಸ್ತಾವನೆ ಸಲ್ಲಿಸಲುಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಲಾಯಿತು.

ಈ ಸಂದರ್ಭದಲ್ಲಿ ಆಡಳಿತಾ ಧಿಕಾರಿಶಿವಕುಮಾರ್‌, ನಿರ್ದೇಶಕರಾದವಿನಾಯಕ್‌, ಮಂಜುನಾಥ್‌, ಷಡಕ್ಷರಿ,ರುದ್ರ ಮೂರ್ತಿ, ಷಣ್ಮುಖಪ್ಪ, ಸದಾಶಿವಪ್ಪ,ರಾಜಪ್ಪ, ಹನುಮಂತಪ್ಪ ಹಾಗೂಅ ಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next