Advertisement

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಸರ್ಕಾರದ ಆದ್ಯತೆ

08:57 PM Oct 07, 2021 | Adarsha |

ಶಿವಮೊಗ್ಗ: ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಕ್ಕೆಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆನೀಡುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ|ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿಬಿಜೆಪಿ ಜಿಲ್ಲಾ ಘಟಕ ಸೇವೆ ಮತ್ತು ಸಮರ್ಪಣಾಅಭಿಯಾನದಡಿ ಹಮ್ಮಿಕೊಂಡಿದ್ದ ನವಭಾರತಮೇಳದಲ್ಲಿ ಬುಧವಾರ ನಡೆದ ಭಾರತದಲ್ಲಿವಿಜ್ಞಾನ-ತಂತ್ರಜ್ಞಾನ ವಿಷಯದ ಸಂವಾದದಲ್ಲಿಅವರು ಮಾತನಾಡಿದರು.

ವಿಶ್ವದಲ್ಲೇ ಮಾಹಿತಿ ತಂತ್ರಜ್ಞಾನದಲ್ಲಿ ಭಾರತನಾಗಾಲೋಟದಿಂದ ಮುಂದೆ ಸಾಗಿದೆ.ವಿಜ್ಞಾನ ಮತ್ತು ತಂತ್ರಜ್ಞಾನ, ಬಯೋಟೆಕ್‌,ಬಯೋಮೆಡಿಕಲ್‌, ಏರೋಟೆಕ್‌ ಸೇರಿದಂತೆಎಲ್ಲ ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಭಾರತಮುಂದುವರೆದ ದೇಶವಾಗಿದ್ದು, ದೇಶದಲ್ಲಿಕರ್ನಾಟಕ ಮೊದಲ ಸ್ಥಾನದಲ್ಲಿದೆ.

ತಂತ್ರಜ್ಞಾನಮಾಹಿತಿಗಾಗಿಯೇ ರಾಜ್ಯ ಸರ್ಕಾರ ಎಲಿವೇಟ್‌ಸ್ಕೀಂ ಅಳವಡಿಸಿದ್ದು ಎಲ್ಲ ಸಂಶೋಧನಾವಿದ್ಯಾರ್ಥಿಗಳಿಗೂ ತಾವು ಮಾಡಿದ ಸಾಧನೆಯನ್ನುಬೆಳಕಿಗೆ ತರಲು ಇದು ಸಹಾಯಕವಾಗಿದೆ. ಇಡೀವಿಶ್ವದಲ್ಲೇ ಸ್ಟಾರ್ಟ್‌ ಅಪ್‌ ನಲ್ಲಿ ಭಾರತ ಮೂರನೇಸ್ಥಾನದಲ್ಲಿದ್ದು, ನಮ್ಮ ಆರ್ಥಿಕ ವ್ಯವಸ್ಥೆಯ ಮೂರನೇಒಂದು ಭಾಗ ಆದಾಯ ತಂತ್ರಜ್ಞಾನ ಕ್ಷೇತ್ರದಿಂದಲಭ್ಯವಾಗಿದೆ.

ರಾಜ್ಯದ ಒಟ್ಟಾರೆ ಜಿಡಿಪಿಯಲ್ಲಿ 250ಮಿಲಿಯನ್‌ ಡಾಲರ್‌ ತಂತ್ರಜ್ಞಾನ ಕ್ಷೇತ್ರದಿಂದಲೇಬರುತ್ತಿದೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಹಿತಿತಂತ್ರಜ್ಞಾನದ ಆವಿಷ್ಕಾರ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದ್ದು, ಎಲ್ಲ ಕ್ಷೇತ್ರಗಳೂ ಮುಂದಿನ ದಿನಗಳಲ್ಲಿಜನಸಾಮಾನ್ಯರಿಗೆ ತಲುಪುವಂತೆ ಮಾಡಲುಸರ್ಕಾರ ಕ್ರಮಕೈಗೊಂಡಿದೆ.

Advertisement

ಸಂಶೋಧನಾವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 20 ಸಾವಿರ ಸ್ಕಾಲರ್‌ಶಿಪ್‌ ನೀಡುತ್ತಿದ್ದು, ಹಿರಿಯ, ಕಿರಿಯ ವಿಜ್ಞಾನಿಗಳಿಗೆವಿಶೇಷ ಪ್ರೋತ್ಸಾಹಧನ ನೀಡಿ ಉತ್ತೇಜಿಸಲಾಗುತ್ತಿದೆಎಂದರು.ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನುಈಗಾಗಲೇ ಪ್ರಕಟಿಸಲಾಗಿದ್ದು, ನರ್ಸರಿಯಿಂದಲೇಮಗುವಿನಲ್ಲಿ ಸಂಶೋಧನೆಯ ಆಸಕ್ತಿಬೆಳೆಸಲಾಗುತ್ತಿದೆ.

ಇದನ್ನೂ ಓದಿ:ಮೂಢನಂಬಿಕೆ ಮೀರಿ ಚಾಮರಾಜನಗರಕ್ಕೆ ಬಂದ ಬೊಮ್ಮಾಯಿ

ವಿದ್ಯಾರ್ಥಿಯ ಆಸಕ್ತಿ ವಿಷಯದಲ್ಲಿಆತನಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಶಿಕ್ಷಣದಲ್ಲಿಸುಧಾರಣೆ ತರುವ ಮೂಲಕ ಗುಣಮಟ್ಟದಸಂಸ್ಕೃತಿಯನ್ನು ಬೋಧಿ ಸಲಾಗುತ್ತಿದೆ ಎಂದರು.

ತಾವು ಕೈಗೊಳ್ಳುವ ವೃತ್ತಿಯ ಮೂಲಕ ಸಮಾಜಕ್ಕೆಏನಾದರೂ ಕೊಡುಗೆ ನೀಡುವಂತಾಗಬೇಕು. ತನು,ಮನ ಸರ್ಮಪಿಸಿ ಕೈಗೊಂಡ ವೃತ್ತಿ ಲಾಭದಾಯಕವಾಗಿರಬೇಕು. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತುತಂತ್ರಜ್ಞಾನದ ಆವಿಷ್ಕಾರಕ್ಕೆ ಸರ್ಕಾರ ವಿಶೇಷಯೋಜನೆಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿಸಮಾಲೋಚನೆ ಹಮ್ಮಿಕೊಂಡು ಯುವಕರಲ್ಲಿಜಾಗೃತಿ ಮೂಡಿಸುತ್ತಿದೆ ಎಂದರು.

ಬಿಜಿಪಿ ಯುವ ಮೋರ್ಚಾ ರಾಜ್ಯಕಾರ್ಯಕಾರಿಣಿ ಸದಸ್ಯ ಅನೂಪ್‌ ಕುಮಾರ್‌ಎಸ್‌.ಬಿ. ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next