Advertisement

ಸರ್ಕಾರದಲ್ಲಿ ಗೊಂದಲವಿದ್ದಿದ್ದು ನಿಜ : ಈಶ್ವರಪ್ಪ

10:05 PM Jun 21, 2021 | Shreeraj Acharya |

ಶಿವಮೊಗ್ಗ: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ. ನಮ್ಮ ನಾಯಕರಾದ ಅರುಣ್‌ ಸಿಂಗ್‌ ಬಂದು ಸಮಸ್ಯೆ ಪರಿಹಾರ ಮಾಡಿದ್ದಾರೆ. ನಾಲ್ಕು ಗೋಡೆ ಮಧ್ಯೆ ಕುಳಿತು ಎಲ್ಲರ ಸಮಸ್ಯೆ ಕೇಳಿ ಬಗೆಹರಿಸಿದ್ದಾರೆ.

Advertisement

ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸಹ ಸ್ಪಷ್ಟಪಡಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ ಸಿಂಗ್‌ ಬರುವ ಮುಂಚೆ ಇದ್ದ ಗೊಂದಲ ಬಗೆಹರಿದಿದ್ದು, ಸರ್ಕಾರ ಶಕ್ತಿಶಾಲಿಯಾಗಿ ಕೆಲಸ ಮಾಡಲಿದೆ. ಜತೆಗೆ ಯಾರೂ ಕೂಡ ಪರ-ವಿರೋಧದ ಬಹಿರಂಗ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ.

ಅಭಿವೃದ್ಧಿ, ಪಕ್ಷದ ಸಂಘಟನೆ ಬಗ್ಗೆ ಗಮನ ಹರಿಸಲು ಮಾತ್ರ ಸೂಚನೆ ನೀಡಿದ್ದಾರೆ ಎಂದರು. ಕಾಂಗ್ರೆಸ್ಸಿಗರು ಐದು ವರ್ಷ ಹಾಗೋ ಹೀಗೋ ಅ ಧಿಕಾರ ಮಾಡಿದ್ರು. ಬಳಿಕ ರಾಜ್ಯದ ಜನ ತಿರಸ್ಕಾರ ಮಾಡಿದ್ರು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಸಚಿವರು, ಶಾಸಕರು ಸೋತು ಸರ್ಕಾರವೇ ಹೋಯ್ತು. ಸರ್ಕಾರ ಹೋದ ಮೇಲೂ ಕೆಲವು ನಾಯಕರು ಸಿಎಂ ಸ್ಥಾನದ ಕನಸು ಕಾಣಾನೇ ಇದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಮೇಲ್ನೋಟಕ್ಕೆ ಇಬ್ಬರು ಸಿಎಂ ಸ್ಥಾನಕ್ಕೆ ಹೋರಾಟ ಮಾಡ್ತಿದ್ದಾರೆ. ಸಿಎಂ ಸ್ಥಾನದ ಬಗ್ಗೆ ಅವರು ಹೇಳಲ್ಲ. ಯಾರೋ ಜನ ಹೇಳ್ತಾರೆ. ಶಾಸಕರು ಹೇಳ್ತಾರೆ ಅಂತಾರೆ. ಅದು ಜಮೀರ್‌ ವೈಯಕ್ತಿಕ ಅಭಿಪ್ರಾಯ ಅಂತಾರೆ. ಹಾಗಾದ್ರೆ ನಿಮ್ಮ ಅಭಿಪ್ರಾಯ ಏನು? ನೀವು ಮೊದಲು ಶಾಸಕರಾಗಿ ಗೆಲ್ತಿàರಾ ನೋಡಿಕೊಳ್ಳಿ. ಜನ ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ. ಸಿಎಂ ಸ್ಥಾನದ ಕನಸು ಬಿಟ್ಟು ಮೊದಲನೆಯದಾಗಿ ಇಬ್ಬರೂ ಶಾಸಕರಾಗಿ ಗೆದ್ದು ಬನ್ನಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next