ಸೊರಬ: ಗ್ರಾಪಂನಲ್ಲಿ ರಾಜಕೀಯ ಬೆರಸದೆಹಳ್ಳಿಗಳ ಅಭಿವೃದ್ಧಿಗೆ ಸದಸ್ಯರು ಒಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ಜನತೆಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದುಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಅಬ್ದುಲ್ ನಜೀರ್ ಸಾಬ್‌ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ ಮೈಸೂರು, ಜಿಪಂ ಮತ್ತುತಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂಗಳ ಚುನಾಯಿತ ಸದಸ್ಯರ ಒಂದುದಿನದ ಕಾರ್ಯಾಗಾರ ಉದ್ಘಾಟಿಸಿ ಅವರುಮಾತನಾಡಿದರು. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಬೇಕಾದರೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನುತಿಳಿದುಕೊಳ್ಳಬೇಕು ಮತ್ತು ಗ್ರಾಪಂಅಭಿವೃದ್ಧಿ ಅಧಿಕಾರಿ ಜೊತೆ ಚರ್ಚೆಗಳು ನಡೆಯಬೇಕು.
ನಿತ್ಯ ಮನೆಗಳಿಗೆ ಭೇಟಿನೀಡಿ, ಜನತೆಯ ಮೂಲ ಸಮಸ್ಯೆಗಳಕುರಿತು ಅರಿತುಕೊಳ್ಳಬೇಕು ಎಂದ ಅವರು,ಗ್ರಾಮದ ಕೆರೆಗಳ ಅಭಿವೃದ್ಧಿ, ಸ್ವತ್ಛತೆ,ಕುಡಿಯುವ ನೀರು, ಜಲಸಂರಕ್ಷಣೆ ಅನೇಕಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಬಹುದಾಗಿದೆ ಎಂದರು.
ಅಧಿಕಾರಿಗಳು ಗ್ರಾಮಸಭೆಗೆಕಡ್ಡಾಯವಾಗಿ ಹಾಜರಾಗಿ ಅಲ್ಲಿಯಆಗಬೇಕಾದ ಕೆಲಸಗಳನ್ನು ಪಟ್ಟಿ ಮಾಡಿಅವುಗಳ ಬಗ್ಗೆ ಒತ್ತು ನೀಡಬೇಕು.ಗ್ರಾಮಸಭೆಗೆ ಅಧಿಕಾರಿಗಳು ಗೈರಾದರೆಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಗುರುವಾರ ಕುಪ್ಪಗಡ್ಡೆಗ್ರಾಪಂನಲ್ಲಿ ಮಹಿಳಾ ಅಧ್ಯಕ್ಷೆಯೊಬ್ಬರುಅಧಿಕಾರಿಗಳು ಗೈರಾಗಿರುವುದನ್ನು ಖಂಡಿಸಿಸಭೆಯನ್ನೇ ರದ್ದು ಪಡೆಸುವ ಉತ್ತಮನಿರ್ಧಾರ ತೆಗೆದುಕೊಂಡಿರುವುದುಮೆಚ್ಚುವಂತಹದ್ದಾಗಿದೆ ಎಂದರು.
ಜಿಪಂ ಸಿಇಒ ವೈಶಾಲಿ ಎಂ.ಎಲ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕಕುಮಾರ್ ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯಆರ್. ಪ್ರಸನ್ನ ಕುಮಾರ್, ಸಂಪನ್ಮೂಲವ್ಯಕ್ತಿಗಳಾದ ಶಿವಾನಂದ ಕಳವೆ, ಪ್ರಮೋದಹೆಗಡೆ, ಸ್ವಪ್ನ, ಜಿ. ಮಲ್ಲಿಕಾರ್ಜುನ ಸ್ವಾಮಿ,ಪ್ರಕಾಶ, ಮನು, ಮಂಜುನಾಥ, ತಾಪಂಇಒ ಕೆ.ಜಿ. ಕುಮಾರ ಇತರರು ಇದ್ದರು.