ಶಿವಮೊಗ್ಗ: ಜಿಲ್ಲೆಯಲ್ಲಿ ಎರಡು ದಿನಗಳಿಂದಆರಿದ್ರಾ ಮಳೆ ಅಬ್ಬರ ಮುಂದುವರೆದಿದ್ದು, ತುಂಗಾಜಲಾಶಯದಿಂದ 18 ಗೇಟ್ ಗಳ ಮೂಲಕ 43085ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.ತುಂಗಾ ಜಲಾಶಯ ಗರಿಷ್ಠ 588.24 ಅಡಿ ಇದ್ದು,ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಹೀಗಾಗಿನೀರಿನ ಪ್ರಮಾಣ ಅಪಾಯ ಮಟ್ಟಕ್ಕೇರಿದೆ.
ನೀರುಹೊರಬಿಟ್ಟಿದ್ದರಿಂದ ತುಂಗಾ ನದಿಯಲ್ಲಿ ನೀರಿನ ಹರಿವುಹೆಚ್ಚಾಗಿದ್ದು, ಕೋರ್ಪಲಯ್ಯನ ಛತ್ರದ ಬಳಿ ಇರುವಕಲ್ಲಿನ ಮಂಟಪ ಮುಳುಗಡೆಯಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆಜಿಲ್ಲಾಡಳಿತ ಸೂಚನೆ ನೀಡಿದೆ.
ತುರ್ತು ಸಹಾಯಕ್ಕೆ180042 57677 ಸಂಪರ್ಕಿಸುವಂತೆ ಕೋರಲಾಗಿದೆ.ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀಮಳೆಯಾಗುತ್ತಿರುವ ಪರಿಣಾಮ ಅಪಾರ ಪ್ರಮಾಣದನೀರು ಹರಿದುಬರುತ್ತಿದೆ.
ಜಲಾಶಯದ ಗರಿಷ್ಠಮಟ್ಟ 186 ಅಡಿ ಆಗಿದ್ದು, ಇಂದು 156.6 ಅಡಿನೀರಿದೆ. 30167 ಕ್ಯೂಸೆಕ್ ಒಳಹರಿವು ಇದ್ದು, 133ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಮಲೆನಾಡಿನಲ್ಲಿಮುಂಗಾರು ಮಳೆ ಚುರುಕಾಗಿದ್ದು, ಕೃಷಿಚಟುವಟಿಕೆಗಳು ಕೂಡ ಬಿರುಸು ಪಡೆದಿವೆ.