Advertisement
ಇದಕ್ಕೆ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರಾದ ರಮೇಶ್ ಹೆಗ್ಡೆ, ಯೋಗೀಶ್, ರೇಖಾ ರಂಗನಾಥ್, ಜೆಡಿಎಸ್ ಸದಸ್ಯ ನಾಗರಾಜ್ ಕಂಕಾರಿ, ಇದು ಅಭಿವ್ಯಕ್ತಿ ಸ್ವಾತಂತ್ರದ ಹರಣವಾಗಿದೆ. ನ್ಯಾಯವಾಗಿ ನೋಡಿದರೆ ಎಸ್‌ಆರ್ ದರದಲ್ಲಿ ಆಸ್ತಿ ತೆರಿಗೆ ವಿ ಧಿಸುವುದು ಸರಿಯಲ್ಲ. ಬೆಂಗಳೂರಿಗೆ ಒಂದು, ಶಿವಮೊಗ್ಗಕ್ಕೆ ಒಂದು ತೆರಿಗೆ ನೀತಿ ಇರಬಾರದು. ಇದು ಸಾರ್ವಜನಿಕರಿಗೆ ಹೊರೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಆಸ್ತಿ ತೆರಿಗೆಗೆ ಸಂಬಂಧಿ ಸಿದಂತೆ ಸರ್ಕಾರಕ್ಕೆ ಪತ್ರ ಬರೆದು ಮರುಪರಿಶೀಲನೆ ನಡೆಸುವಂತೆ ಹಿಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೂ ಸರ್ಕಾರಕ್ಕೆ ಪತ್ರ ಬರೆದಿಲ್ಲ ಎಂದು ಸದಸ್ಯರು ಆರೋಪಿಸಿದರು.
Related Articles
Advertisement
ಆಡಳಿತ ಪಕ್ಷದ ಸದಸ್ಯರು ಸಮಜಾಯಿಷಿ ನೀಡಲು ಮುಂದಾದಾಗ ವಿಪಕ್ಷ ಸದಸ್ಯರು ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಸ್ತಿ ತೆರಿಗೆಗೆ ಸಂಬಂ ಧಿಸಿದಂತೆ ಕಳೆದ ಸಭೆಯಲ್ಲಿಯೇ ತೀರ್ಮಾನಿಸಲಾಗಿದೆ. ಈ ಬಾರಿಯ ಅಜೆಂಡಾದಲ್ಲಿ ಆ ವಿಷಯವನ್ನು ಸೇರಿಸಿಯೇ ಇಲ್ಲ. ಹಾಗಾಗಿ ಚರ್ಚೆಗೆ ಅವಕಾಶವಿಲ್ಲ ಎಂಬ ಆಯುಕ್ತರ ಉತ್ತರಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಮತ್ತೂಮ್ಮೆ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ಹಂತದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಎಲ್ಲ ಸದಸ್ಯರು ಹೋಗಿ ಮನವಿ ಪಡೆದು ಬರುವಂತಹ ತುರ್ತು ನಿರ್ಧಾರವನ್ನು ಸಭೆ ತೆಗೆದುಕೊಂಡಿತು.
ಬಹುತೇಕ ಎಲ್ಲ ಸದಸ್ಯರು ಪ್ರತಿಭಟನೆ ಸ್ಥಳಕ್ಕೆ ಹೋಗಿ ಮನವಿ ಪಡೆದು ಮತ್ತೆ ಸಭೆ ಆರಂಭಿಸಿದರು. ಆಗಲೂ ಕೂಡ ಗದ್ದಲ, ಗಲಾಟೆ ನಡೆಯಿತು. ನಂತರ ಅಜೆಂಡಾ ಪ್ರಕಾರವೇ ಸಭೆ ನಡೆಸಬೇಕು ಎಂದು ತೀರ್ಮಾನಿಸಿ ಆಸ್ತಿ ತೆರಿಗೆ ವಿಷಯವನ್ನು ಅಲ್ಲಿಗೆ ನಿಲ್ಲಿಸಲಾಯಿತು. ಮಾಹಿತಿ ಕೊಡಲು ಹಿಂದೇಟು: ಸದಸ್ಯರಾದ ನಾಗರಾಜ್ ಕಂಕಾರಿ, ಯೋಗೀಶ್, ಯಮುನಾ ರಂಗೇಗೌಡ ಮುಂತಾದವರು ಸಿಟಿ ಸೆಂಟರ್‌ಗೆ ಸಂಬಂಧಿ ಸಿದಂತೆ ಲೀಸ್‌ಗೆ ನೀಡಿದ ಬಗ್ಗೆ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳುವಂತೆ ನಿರ್ಣಯವಾಗಿದ್ದರೂ ಯಾರೂ ಚೆಕಾರವೆತ್ತಿಲ್ಲ. ಸಭೆ ಏಕೆ ನಡೆಯುತ್ತಿಲ್ಲ. ಏನಾಗುತ್ತಿದೆ ಇಲ್ಲಿ? ಇದನ್ನೆಲ್ಲ ನೋಡಿದರೆ ಭ್ರಷ್ಟಾಚಾರದ ಘಾಟು ಕಾಣಿಸುತ್ತಿದೆ ಎಂದು ನೇರ ಆರೋಪ ಮಾಡಿದರು.
ಇದಕ್ಕೆ ಉತ್ತರ ನೀಡಿದ ಆಯುಕ್ತರು ಸಮಿತಿ ರಚನೆ ಮಾಡಿದಾಗ ಅ ಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿತ್ತು. ಆದರೆ, ಅವರಿಗೆ ಅನಾರೋಗ್ಯ ಕಾರಣ ರಜೆ ನೀಡಲಾಗಿದೆ. ಅವರ ಬದಲು ಬೇರೊಬ್ಬ ಅ ಧಿಕಾರಿಯನ್ನು ನೇಮಿಸಲಾಗಿದೆ ಎಂದರು. ಸಭೆಯಲ್ಲಿ ಉಪಮೇಯರ್ ಶಂಕರ್ ಗನ್ನಿ, ಆಯುಕ್ತ ಚಿದಾನಂದ ವಟಾರೆ, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ನಾಗರಾಜ್ ಕಂಕಾರಿ, ಬಿ.ಎ.ರಮೇಶ್ ಹೆಗಡೆ,ಆರ್ .ಸಿ.ನಾಯ್ಕ ಸೇರಿದಂತೆ ಹಲವರಿದ್ದರು.