Advertisement

ಕೆಎಫ್‌ಡಿ ಬಾಧಿತ ಪ್ರದೇಶಕ್ಕೆ ಸ್ವದೇಶಿ ಕೀಟ ನಿವಾರಕ

05:14 PM Mar 03, 2022 | Adarsha |

ಶಿವಮೊಗ್ಗ: ಕೆಎಫ್‌ಡಿ ಬಾಧಿ ತ ಗ್ರಾಮದಜನರಿಗೆ ನೀಡುತ್ತಿದ್ದ ಡಿಎಂಪಿ ಆಯಿಲ್‌(ಕೀಟ ನಿವಾರಕ) ಕಮಟು ವಾಸನೆ, ಅಂಟು,ಶಕ್ತಿ ಕಡಿಮೆ ಕಾರಣಕ್ಕೆ ಜನರ ಬಳಕೆಯಿಂದದೂರವಿತ್ತು. ಇದಕ್ಕೆ ಪರಿಹಾರವಾಗಿಸರ್ಕಾರ ಈಗ ಸ್ವದೇಶಿ ಮಂತ್ರ ಜಪಿಸಿದೆ.ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸೈನಿಕರುಬಳಸುತ್ತಿರುವ ಡಿಇಪಿಎ ಮಲೆನಾಡಿನಜನರಿಗೆ ಹತ್ತಿರವಾಗುವುದರಲ್ಲಿಅನುಮಾನವಿಲ್ಲ.

Advertisement

60 ವರ್ಷಗಳಿಂದ ಮಲೆನಾಡುಸೇರಿ 11 ಜಿಲ್ಲೆಗಳ 3 ಲಕ್ಷ ಜನರಿಗೆಬಾ ಧಿಸುತ್ತಿರುವ ಕೆಎಫ್‌ಡಿ (ಕ್ಯಾಸನೂರುಫಾರೆಸ್ಟ್‌ ಡಿಸೀಸ್‌) ನಿಯಂತ್ರಣಕ್ಕೆ ಸರ್ಕಾರಅನೇಕ ಉಪಕ್ರಮಗಳನ್ನು ಕೈಗೊಂಡಿದೆ.ಈ ಕಾಯಿಲೆ ಹರಡಲು ಮಂಗನ ಪಾತ್ರಇಲ್ಲದಿದ್ದರೂ ಮಂಗನ ಕಾಯಿಲೆ ಎಂದುಕುಖ್ಯಾತಿಯಾಗಿತ್ತು. ನಿಜವಾಗಿಯೂವೈರಸ್‌ಗಳು ಮನುಷ್ಯನಿಗೆ ಹರಡುತ್ತಿದ್ದದ್ದುಉಣುಗುಗಳಿಂದ.

ವೈರಸ್‌ ಬಾ ಧಿತಉಣುಗುಗಳು ಮನುಷ್ಯನಿಗೆ ಅಥವಾಮಂಗನಿಗೆ ಕಚ್ಚಿದರೆ ಕೆಎಫ್‌ಡಿ ಸೋಂಕುಲಕ್ಷಣಗಳು ಕಾಣಿಸಿಕೊಳ್ಳುತಿತ್ತು.ಕಾಡಂಚಿನ ಜನರು ನಿತ್ಯ ಕಾಡಿಗೆದನಕರು, ಸೌದೆಗೆ ಇತರೆ ಚಟುವಟಿಕೆಗಳಿಗೆಹೋಗಿ ಬರುತ್ತಿದ್ದರಿಂದ ಉಣುಗುಗಳುದನಕರು, ಬಟ್ಟೆ ಮೇಲೆ ಬರುವ ಸಾಧ್ಯತೆಇತ್ತು. ಉಣುಗುಗಳು ಮನುಷ್ಯನಿಗೆಕಚ್ಚುವುದನ್ನು ನಿಯಂತ್ರಿಸಲುಮನುಷ್ಯನಿಗೆ ಹಾನಿಕಾರಕವಲ್ಲದ ಕೀಟನಿವಾರಕಗಳನ್ನು ಬಳಸಲುಆರಂಭಿಸಲಾಯಿತು. ದಶಕದ ಹಿಂದೆಮೊದಲು ಮೈಲೋಲ್‌ ಸೊಳ್ಳೆ ನಿವಾರಕಆಯಿಲ್‌ ವಿತರಣೆ ಮಾಡಲಾಯಿತು.

ಇದು ಹೆಚ್ಚು ಉಪಯೋಗಕಾರಿ ಅಲ್ಲದಕಾರಣ ಡಿಎಂಪಿ ಬಳಕೆಗೆ ಬಂತು.ಡಿಎಂಪಿ ಕೂಡ ವಾಸನೆ, ಹೆಚ್ಚು ಸಮಯಹೋರಾಡದ ಕಾರಣ ನಿರ್ಲಕ್ಷಿಸಲಾಯಿತು.ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಎರಡು ಬಾಟಲ್‌ ಡಿಎಂಪಿಆಯಿಲ್‌ ಕೊಟ್ಟರೂ ಬಳಸುತ್ತಿರಲಿಲ್ಲ.ಇದಕ್ಕೆ ಪರಿಹಾರವಾಗಿ ಸ್ವದೇಶಿಮಂತ್ರದ ಅಡಿ ದೇಶದ ಪ್ರತಿಷ್ಠಿತ ಸಂಸ್ಥೆಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಡಿಇಪಿಎಬಳಸಲು ಸಿದ್ಧತೆ ನಡೆಸಲಾಗಿದೆ.ಈಗಾಗಲೇ ಟೆಂಡರ್‌ ಪ್ರಕ್ರಿಯೆಮುಗಿದಿದ್ದು ಈಗಿರುವ ಡಿಎಂಪಿ ಆಯಿಲ್‌ಸ್ಟಾಕ್‌ ಖಾಲಿಯಾದ ನಂತರ ಬಳಕೆಗೆಸಿಗಲಿದೆ.

ಶರತ್‌ ಭದ್ರಾವತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next