Advertisement

ರಾಜಬೀದಿ ಉತ್ಸವಕ್ಕೆ ಸಿದ್ಧತೆ

01:45 PM Sep 11, 2019 | Naveen |

ಶಿವಮೊಗ್ಗ: ಹಿಂದೂ ಮಹಾಸಭಾ 75ನೇ ಗಣೇಶೋತ್ಸವ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳು ಕೇಸರಿಮಯವಾಗಿವೆ. ಸೆ.12ರಂದು ನಡೆಯುವ ರಾಜಬೀದಿ ಉತ್ಸವಕ್ಕೆ ಸಕಲಸಿದ್ಧತೆ ಪೂರ್ಣಗೊಂಡಿದೆ. ಎಲ್ಲೆಲ್ಲೂ ಕೇಸರಿ ಬಂಟಿಂಗ್ಸ್‌, ಫೆಕ್ಸ್‌ಗಳು ರಾರಾಜಿಸುತ್ತಿವೆ. ಸ್ವಾಗತ ಕಮಾನುಗಳು ಒಂದಕ್ಕಿಂತ ಒಂದು ಆಕರ್ಷಕವಾಗಿವೆ. 24 ಅಡಿಯ ಎತ್ತರದ ಬೃಹತ್‌ ಮಹಾದ್ವಾರ, 18 ಅಡಿಯ ಛತ್ರಪತಿ ಶಿವಾಜಿ ಪ್ರತಿಮೆಯ ಈ ಬಾರಿಯ ಪ್ರಮುಖ ಅಕರ್ಷಣೆ.

Advertisement

ಗಾಂಧಿ ಬಜಾರ್‌ ಸೇರಿದಂತೆ ಶಿವಪ್ಪ ನಾಯಕ ವೃತ್ತ, ಅಮೀರ್‌ ಅಹಮ್ಮದ್‌ ವೃತ್ತ, ಗೋಪಿ ವೃತ್ತ, ರಾಮಣ್ಣ ಶ್ರೇಷ್ಠಿ ಪಾರ್ಕ್‌ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳನ್ನು ಅಲಂಕರಿಸಲಾಗಿದ್ದು, ಇದಕ್ಕಾಗಿ ಸುಮಾರು 8 ಲಕ್ಷ ರೂ.ಗೂ ಅಧಿಕ ಹಣ ವೆಚ್ಚವಾಗಿದೆ. ಭದ್ರಾವತಿಯ ಹಿಂದೂಮಹಾಸಭಾ ಗಣೇಶ ಮೂರ್ತಿ ವಿಸರ್ಜನೆಗೆ ಸಾವಿರಾರು ಜನ ಸೇರಿದ್ದು, ಶಿವಮೊಗ್ಗದಲ್ಲೂ ಅದಕ್ಕಿಂತ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದೆ. ಹಿಂದು ಮಹಾಸಭಾ ಗಣಪತಿ ಪ್ರತಿಷ್ಠಾನೆ ಅಂಗವಾಗಿ ನಗರದ ಗಾಂಧಿ ಬಜಾರ್‌ನಲ್ಲಿ ನಿರ್ಮಾಣವಾಗಿರುವ ಹಿಂದೂ ಸಂಘಟನಾ ಮಹಾ ಮಂಡಳಿಯ ಮಹಾದ್ವಾರವೂ ಕೇಂದ್ರ ಬಿಂದುವಾಗಿದ್ದು ಕಳೆದ ಬಾರಿಗಿಂತಲೂ ಈ ಬಾರಿ ಎತ್ತರವಾಗಿ ಮಹಾದ್ವಾರ ನಿರ್ಮಾಣವಾಗಿದೆ.

ಈ ಬಾರಿ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಜನಪದ ಕಲಾ ತಂಡಗಳು ಸೇರಿದಂತೆ ಭಾರತೀಯ ಸಂಸ್ಕೃತಿ ಬಿಂಬಿಸುವ ಎಲ್ಲ ವಾದ್ಯಗಳು ಮೆರೆವಣಿಯಲ್ಲಿ ಇರಲಿವೆ. 75ನೇ ವರ್ಷದ ವಿಸರ್ಜನೆ ಮರವಣಿಗೆ ಅದ್ದೂರಿಯಾಗಿ ನಡೆಯಲಿದ್ದು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನರು ಸೇರುವ ನಿರೀಕ್ಷೆ ಹಿಂದೂ ಸಂಘಟನಾ ಮಹಾ ಮಂಡಳಿಯದ್ದು.

75ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಅದ್ಧೂರಿ ವಿಸರ್ಜನೆಗೆ ಇಡೀ ನಗರವೇ ಸಜ್ಜಾಗಿದೆ. ಈ ಬಾರಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಅಂಗವಾಗಿ ಸುಮಾರು 2 ಲಕ್ಷಕ್ಕೂ ಅಧಿಕ ರೂ. ವೆಚ್ಚದಲ್ಲಿ ಗಾಂಧಿ ಬಜಾರ್‌ನ ಮುಖ್ಯದ್ವಾರದ ಮೇಲೆ ನಿರ್ಮಿಸಲಾಗಿರುವ 18 ಅಡಿ ಶಿವಾಜಿ ಪ್ರತಿಮೆ ಎಲ್ಲರನ್ನು ಆಕರ್ಷಿಸುತ್ತಿದೆ. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಅಂಗವಾಗಿ ನಿರ್ಮಾಣಗೊಂಡಿರುವ 18 ಅಡಿಯ ಶಿವಾಜಿ ಪ್ರತಿಮೆ ಹಿರಿಯರ ಮಾರ್ಗದರ್ಶದಂತೆ ಶಿವಮೊಗ್ಗದ ಹೆಸರಾಂತ ಶಿಲ್ಪಿ ಜೀವನ್‌ ಮತ್ತು ತಂಡದವರ ಕೈಚಳಕದಿಂದ ಮೂಡಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next