Advertisement
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಗರ ತಾಲೂಕಿನಲ್ಲಿ 1,33,692 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಮಧು ಬಂಗಾರಪ್ಪ 68,993 ಹಾಗೂ ರಾಘವೇಂದ್ರ 60,256 ಮತಗಳನ್ನು ಪಡೆದಿದ್ದರು. ಈ ಬಾರಿ ತಾಲೂಕಿನ 1,99,502 ಮತದಾರರಲ್ಲಿ 1,55,760 ಜನ ಇವಿಎಂ ಬಟನ್ ಒತ್ತಿದ್ದಾರೆ. ಕಳೆದ ಉಪ ಚುನಾವಣೆಗಿಂತ 22,068 ಮತಗಳು ಹೆಚ್ಚು ಮತಪೆಟ್ಟಿಗೆಗೆ ಬಿದ್ದಿವೆ. ಈ ಮತಗಳೇ ನಿರ್ಣಾಯಕವಾಗುವ ಎಲ್ಲ ಸಾಧ್ಯತೆಗಳಿವೆ.
Related Articles
Advertisement
ಚುನಾವಣೆಗೆ ಶಿಸ್ತಿನ ತಯಾರಿ ನಡೆಸುವ ಬಿಜೆಪಿ ಜನಪರವಾಗಿಲ್ಲದಿರುವುದರಿಂದಲೇ ಅವರಿಗೆ ಚುನಾವಣೆಗಳಲ್ಲಿ ಹಿನ್ನಡೆಯಾಗುತ್ತದೆ. ಅವರ ತರಹ ಮಾಡಿದರೆ ನಮಗೆ ಸೋಲೇ ಆಗುವುದಿಲ್ಲ ಎಂದು ಟೀಕಿಸುವ ತಾಪಂ ಅಧ್ಯಕ್ಷ ಬಿ.ಎಚ್.ಮಲ್ಲಿಕಾರ್ಜುನ ಹಕ್ರೆ, ಜಾತಿ ಆಧಾರಿತವಾಗಿಯೇ ಈ ಬಾರಿ ಮತಗಳು ಬಿದ್ದಿವೆ. ಈ ನಿಟ್ಟಿನಲ್ಲಿ ಒಕ್ಕಲಿಗ ಮತಗಳು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿದರೆ ಮಧು ಗೆಲುವು ಸುಲಭವಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ಮತದಾನದ ದಿನ, ಮರುದಿನಗಳಲ್ಲಿ ರಾತ್ರಿ ಬೆಂಗಳೂರು ಹಾಗೂ ಇತರೆಡೆಗೆ ತೆರಳಲು ಸಾಗರದ ಬಸ್‌ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕಂಡುಕೇಳರಿಯದ ಪ್ರಮಾಣದಲ್ಲಿ ಜನಸಂದಣಿ ಇತ್ತು. 22 ಸಾವಿರದ ಮತ ಏರಿಕೆಯಲ್ಲಿ ಈ ಮತದಾರರ ಪಾತ್ರ ಹೆಚ್ಚು. ಯುವ ಸಮೂಹವನ್ನು ನರೇಂದ್ರ ಮೋದಿ ಪ್ರಭಾವಿಸಿದಷ್ಟು ಸ್ಥಳೀಯ ಅಭ್ಯರ್ಥಿಗಳು ಕಾಡಿಲ್ಲ. ಇದರಿಂದ ಸಾಗರ ತಾಲೂಕಿನಲ್ಲಿಯೂ ಬಿಜೆಪಿ ತೆಳುವಾದ ಮುನ್ನಡೆಯನ್ನು ಪಡೆಯಲಿದೆ ಎಂಬ ತರ್ಕವಿದೆ. ಇದೇ ವೇಳೆ ವಿಧಾನಸಭೆಗೆ ಕುಮಾರ್ ಬಂಗಾರಪ್ಪ, ಲೋಕಸಭೆಗೆ ಮಧು ಎಂಬ ಘೋಷಣೆ ತಾಳಗುಪ್ಪ ಹೋಬಳಿಯ ಬಹುಸಂಖ್ಯಾತ ಈಡಿಗ ಮತದಾರರನ್ನು ಪ್ರಭಾವಿಸಿರುವ ವಾದವೂ ಇದೆ. ಫಲಿತಾಂಶದ ಬಗ್ಗೆ ಅಸ್ಪಷ್ಟತೆ ಇರುವ ಕಾರಣದಿಂದಾಗಿಯೇ ಖಾಸಗಿ ಬೆಟ್ಟಿಂಗ್ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಈ ಕಾವು ಮುಂದಿನ ಮೂರು ವಾರ, ಮೇ 23ರವರೆಗೆ ಮುಂದುವರಿಯುವುದು ಖಚಿತ.
ಚುನಾವಣೆಗಳನ್ನು ಮಾಡುವುದರಲ್ಲಿ ನಾವು ಅಪ್‌ಡೇಟ್ ಆಗಬೇಕಾಗಿರುವುದು ಸತ್ಯ. ಈ ಬಾರಿ ರಚನೆಯಾಗಿರುವ ಪ್ರಚಾರ ಸಮಿತಿ ಚುನಾವಣಾ ಸಮಿತಿಯಲ್ಲ, ಹಾಗಾಗಿ ಇದು ನಿರಂತರವಾಗಿರುತ್ತದೆ. ಇದರ ಉಸ್ತುವಾರಿಯಾಗಿರುವ ಎಚ್.ಕೆ. ಪಾಟೀಲ್ ಸದ್ಯದಲ್ಲಿಯೇ ರಾಜ್ಯ ಮಟ್ಟದ ಮೀಟಿಂಗ್ ಕರೆಯಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಶಿಸ್ತುಭರಿತ ವ್ಯವಸ್ಥೆಯನ್ನು ನಾವು ರೂಪಿಸಲಿದ್ದೇವೆ.•ಮಲ್ಲಿಕಾರ್ಜುನ ಹಕ್ರೆ
ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಕಾರ್ಯದರ್ಶಿ 192- ಎ ಕಾಯ್ದೆ ತಿದ್ದುಪಡಿಯಿಂದ ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿರುವಾಗ ನಾವು ಮಾತ್ರ ರಕ್ಷಣೆಗೆ ಬರುತ್ತೇವೆ ಎಂಬ ಭಾವ ಜನರಲ್ಲಿರುವುದು ಮೈತ್ರಿ ಅಭ್ಯರ್ಥಿಗೆ ಮತವಾಗಿ ಪರಿವರ್ತನೆಯಾಗಲಿದೆ. ಮೋದಿ ಅಲೆ ಎಂಬುದು ಬಿಜೆಪಿ ಹಬ್ಬುತ್ತಿರುವ ವದಂತಿಯಷ್ಟೇ. 2014ರ ಮೋದಿ ಆಕರ್ಷಣೆಯ ಶೇ. 10ರಷ್ಟೂ ಈ ಬಾರಿ ಅಲೆ ಇಲ್ಲ. ವ್ಯವಸ್ಥಿತ ಪ್ರಚಾರದ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಕಳೆದ ಬಾರಿಯ 8 ಸಾವಿರ ಮುನ್ನಡೆಗೆ ಹೆಚ್ಚುವರಿಯಾಗಿ ಇನ್ನೂ ಐದಾರು ಸಾವಿರ ಮತ ಸೇರ್ಪಡೆಯಾಗುತ್ತದೆ.
•ಬಿ.ಆರ್. ಜಯಂತ್,
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾ.ವೆಂ.ಸ. ಪ್ರಸಾದ್