Advertisement

ಮಧು ಗೆಲ್ಲುವ ಸುದ್ದಿಯಿಂದ ಬಿಜೆಪಿಯಲ್ಲಿ ನಡುಕ: ಬೇಳೂರು

05:34 PM Apr 21, 2019 | Naveen |

ಸಾಗರ: ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳಿಂದ
ಜಯ ಸಾ ಧಿಸುತ್ತಾರೆ. ಈಗಾಗಲೇ ಜಿಲ್ಲೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು ಇದು ಬಿಜೆಪಿ ನಾಯಕರಿಗೆ ನಡುಕ ಹುಟ್ಟಿಸಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

Advertisement

ನಗರದ ಗಾಂಧಿ ಮಂದಿರದ ಕಾಂಗ್ರೆಸ್‌ ಪಕ್ಷದ
ಕಚೇರಿಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಪಕ್ಷವನ್ನು
ಸೇರಿದ ಯುವ ಪ್ರಮುಖರನ್ನು ಬರಮಾಡಿಕೊಂಡು
ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ಹೆಚ್ಚು
ಸ್ಥಾನಗಳನ್ನು ಮೈತ್ರಿಕೂಟ ಪಡೆಯುತ್ತದೆ. ಬಿಜೆಪಿ
ಮೋದಿಯ ಅಲೆಯಿದೆ ಎಂದು ಹೇಳಿ ಕೇವಲ ಫೇಸ್‌
ಬುಕ್‌, ವಾಟ್ಸಾಪ್‌ ಗಳಂತ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದೆ. ಇದು ಎರಡು ದಿನದ ಹಿಂದೆ ನಡೆದ ಕೆಲವು ಕ್ಷೇತ್ರಗಳ ಚುನಾವಣೆಯ ಮತದಾನವನ್ನು ನೋಡಿದಾಗ ತಿಳಿಯುತ್ತದೆ ಎಂದು ಟೀಕಿಸಿದರು.

ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಮೂಲೆಗುಂಪಾಗುತ್ತಿರುವ ಬಗ್ಗೆ ಸ್ವತಃ ಅವರಿಗೇ
ಆತಂಕವಿದೆ. ಇತ್ತೀಚೆಗೆ ಲಿಂಗಾಯುತ ಸಮಾಜದ
ಸಭೆಯಲ್ಲಿ ಅವರು ಈ ವಿಷಯವನ್ನು ಹೊರಹಾಕಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಸಂತೋಷ್‌ಜೀ ಅವರು ಹೆಚ್ಚು ಪ್ರಭಾವಶಾಲಿಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನನ್ನು ಪಕ್ಷದ ಹಿರಿಯ ಮುಖಂಡರು ದೂರ ಇಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಬೇರೆ ಪಕ್ಷದದರಿಗೆ ಯಡಿಯೂರಪ್ಪ ಗಾಳ ಹಾಕಲು ಪ್ರಯತ್ನಿಸಿದರೆ ಅವರದೇ ಪಕ್ಷದವರು ಇವರ ಬೆಂಬಲಿಗರನ್ನೇ ಗಾಳಕ್ಕೆ ಸಿಕ್ಕಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್‌. ಜಯಂತ್‌
ಮಾತನಾಡಿ. ಕಾಂಗ್ರೆಸ್‌ ಎನ್ನುವುದು ಜಾತ್ಯಾತೀತವಾದ ಪಕ್ಷ. ಗಾಂ ಧೀಜಿಯಿಂದ ಹುಟ್ಟಿಕೊಂಡಿದ್ದ ಈ ಪಕ್ಷ ನೆಹರು ಅವರಿಂದ ವಿಸ್ತಾರವಾಯಿತು. ದೇಶದ ಸಂವಿಧಾನದಂತೆ ಅದರ ಆಶಯದಂತೆ ಇರುವ ಏಕೈಕ ಪಕ್ಷ ಕಾಂಗ್ರೆಸ್‌ ಆಗಿದೆ. ಬಿಜೆಪಿ ಎನ್ನುವ ಪಕ್ಷ ಆರ್‌ಎಸ್‌ಎಸ್‌ ಶಾಖೆಯಾಗಿ
ರಾಜಕೀಯದಲ್ಲಿದೆ ಎಂದು ಚಾಟಿ ಬೀಸಿದರು. ಬಿಜೆಪಿ ಕೇವಲ ಧರ್ಮ ಹಾಗೂ ಜಾತಿ ಆಧಾರದ ಮೇಲೆ ರಾಜಕೀಯವನ್ನು ಮಾಡಿ ಮತಗಳನ್ನು ಗಳಿಸುತ್ತದೆ. ದೇಶದಲ್ಲಿ ನಾನಾ ಧರ್ಮ, ನಾನಾ ಜಾತಿಗಳು ಇವೆ. ಅವೆಲ್ಲವನ್ನು ಒಗ್ಗೂಡಿಸಿ ಎಲ್ಲರೂ ನಮ್ಮವರು
ಎನ್ನುವ ಬಾವನೆಯಿಂದ ಇರುವ ಕಾಂಗ್ರೆಸ್‌ ಪಕ್ಷಕ್ಕೆ
ತನ್ನದೇ ಆದ ಇತಿಹಾಸವಿದೆ. ಬಿಜೆಪಿ ಪಕ್ಷದ ಇತಿಹಾಸ, ಸ್ವತಂತ್ರ ರಾಷ್ಟ್ರ ನಿರ್ಮಾಣದಲ್ಲಿನ ಬಿಜೆಪಿಯ ಕೊಡುಗೆ ಬಗ್ಗೆ ಮತದಾರರು ತಿಳಿಯಬೇಕಾಗಿದೆ. ದೇಶದಲ್ಲಿ ಕೋಮುಗಲಭೆಗಳನ್ನು ಸೃಷ್ಟಿ ಮಾಡುತ್ತಿರುವ ಬಿಜೆಪಿ ಧರ್ಮ ಹಾಗೂ ಜಾತಿಯನ್ನು ಬಿಟ್ಟು ಚುನಾವಣೆಯನ್ನು ಎದುರಿಸಿಲ್ಲ. ಇಂತವರಿಗೆ ನಿಜವಾಗಿಯೂ ಈ ಬಾರಿ ಮತದಾರರು ಪಾಠ ಕಲಿಸಬೇಕಾಗಿದೆ ಎಂದು ತಿಳಿಸಿದರು.

ನಗರಾಧ್ಯಕ್ಷ ತಶ್ರೀಫ್‌ ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್‌, ಮುಖಂಡರಾದ
ಸಲೀಂ, ವಿದಾನ ಪರಿಷತ್‌ ಮಾಜಿ ಸದಸ್ಯೆ ಪ್ರಫುಲ್ಲ
ಮಧುಕರ್‌, ಹೊಳೆಯಪ್ಪ, ಕಲಸೆ ಚಂದ್ರಪ್ಪ, ತುಕರಾಂ ಶಿರವಾಳ, ಮಧುಮಾಲತಿ, ಮಾಜಿ ನಗರಸಭೆ ಅಧ್ಯಕ್ಷೆ ವೀಣಾ ಪರಮೇಶ್ವರ್‌, ಪರಿಮಳ, ಡಿ. ದಿನೇಶ್‌, ರವಿ ಜಂಬಗಾರು, ರವಿಗೌಡ ಹುಣಾಲುಮಡಿಕೆ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next