Advertisement

ಪ್ರಧಾನಿ ವಿರುದ್ಧ ಲಘುವಾಗಿ ಮಾತಾಡೋದು ಸರಿಯಲ್ಲ: ಎಸ್ಎಂಕೆ

04:13 PM Apr 21, 2019 | Team Udayavani |

ಶಿವಮೊಗ್ಗ: ದೇಶದ ಪ್ರಧಾನಿಯ ಬಗ್ಗೆ ಏಕವಚನದಲ್ಲಿ ಲಘುವಾಗಿ ಮಾತನಾಡುವುದು ಸರಿಯಲ್ಲ. ಇದರಿಂದ ಮೋದಿಗೆ ಏನೂ ಆಗಲ್ಲ. ಆದರೆ, ಇದು ಬೈಯುವವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದರು.

Advertisement

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಗರದ ಬೆಕ್ಕಿನಕಲ್ಮಠದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಬಗ್ಗೆ ಹಗುರ ಹೇಳಿಕೆ ನೀಡುತ್ತಿರುವವರಿಗೆ ತಿರುಗೇಟು ನೀಡಿದರು.

ಬಹಳ ದಿನಗಳ ಬಳಿಕ ಶಿವಮೊಗ್ಗಕ್ಕೆ ಬಂದಿದ್ದೇನೆ. ಇಲ್ಲಿಗೆ ಬಂದಿದ್ದಕ್ಕೆ ತುಂಬ ಸಂತೋಷವಾಗಿದೆ. ನರೇಂದ್ರ ಮೋದಿ ಅವರಂತಹ ದಕ್ಷ, ಶಕ್ತಿಶಾಲಿ ಪ್ರಧಾನಿಯ ಅವಶ್ಯಕತೆ ಇಡೀ ದೇಶಕ್ಕಿದೆ. ಅವರ ಕೈ ಬಲಪಡಿಸಬೇಕಾದರೆ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು
ಮನವಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಎಸ್‌.ಎಂ. ಕೃಷ್ಣರಿಂದ ನಮಗೆ ಆನೆಬಲ ಬಂದಂತಾಗಿದೆ. ರಾಜ್ಯದಲ್ಲಿ 22 ಸೀಟು ಗೆಲ್ಲುವ ವಿಶ್ವಾಸವಿದೆ. ರಾಘವೇಂದ್ರ ಕನಿಷ್ಠ ಒಂದೂವರೆ ಲಕ್ಷ ಲೀಡ್‌ನ‌ಲ್ಲಿ ಗೆಲ್ಲಲಿದ್ದಾರೆ. ದೇಶದಲ್ಲಿ 300 ಹಾಗೂ ರಾಜ್ಯದಲ್ಲಿ 22 ಸ್ಥಾನ ಗೆಲ್ಲಲಿದ್ದೇವೆ. ಭದ್ರಾವತಿಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ನವರು ಎಷ್ಟೇ ಡ್ನೂಟಿ ಮಾಡಲಿ. ನಮ್ಮ ಕೆಲಸ ನಾವು ಮಾಡಿತ್ತೇವೆ ಎಂದು ಹೇಳಿದರು.

ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ,
ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವ ಜೀವರಾಜ್‌, ಬಿಜೆಪಿ ಮುಖಂಡರಾದ ಮದನ್‌, ಎನ್‌.ಜೆ. ರಾಜಶೇಖರ್‌, ಮಂಜುಳಾ, ಸುವರ್ಣ ಶಂಕರ್‌, ಪವಿತ್ರ ರಾಮಯ್ಯ ಇತರರಿದ್ದರು. ಡಿಕೆಶಿಗೆ ಈಶ್ವರಪ್ಪ ಟಾಂಗ್‌: ಡಿ.ಕೆ. ಶಿವಕುಮಾರ್‌ ಅವರು ಶಾಸಕ ಕೆ.ಎಸ್‌. ಈಶ್ವರಪ್ಪ ಒಬ್ಬ ‘ಮೆಂಟಲ್‌’ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ‘ಇನ್ನೊಮ್ಮೆ ಈ ರೀತಿಯ ಹೇಳಿಕೆಗಳನ್ನು ನೀಡಿದರೆ ನಾನು ಬೇರೆಯ ರೂಪದಲ್ಲಿಯೇ ಉತ್ತರ ಕೊಡಬೇಕಾಗುತ್ತದೆ’ ಎಂದು ಕಿಡಿಕಾರಿದ್ದಾರೆ.

Advertisement

ಶಿವಮೊಗ್ಗಕ್ಕೆ ಬಂದಿರುವ ಡಿಕೆಶಿ ಭಯಭೀತರಾಗಿದ್ದಾರೆ. ಅವರಿಗೆ ಪರಿಸ್ಥಿತಿಯನ್ನು ಎದುರಿಸಲು ಆಗುತ್ತಿಲ್ಲ. ಅದಕ್ಕಾಗಿಯೇ ನನ್ನ, ಯಡಿಯೂರಪ್ಪ ಹಾಗೂ ಮೋದಿ ಅವರ ಬಗ್ಗೆ ಕನಿಷ್ಠ ಪದ ಪ್ರಯೋಗ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್‌ ಬಳಿ 235 ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಇದೆ. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿದೆ ಎಂದು ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next