Advertisement

ಮೋದಿ ಪಿಎಂ ಆದ್ರೆ ದೇಶದ ಚಿತ್ರಣ ಬದಲು

04:30 PM Apr 13, 2019 | Naveen |

ಸಾಗರ: ನರೇಂದ್ರ ಮೋದಿ ಐದು ವರ್ಷಗಳ ಕೆಳಗೆ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಇರಲಿಲ್ಲ. ಈ ನಿಟ್ಟಿನಲ್ಲಿ ಶೇ. 100ರ ಸಾಧನೆಯಾಗಿದ್ದು ಈಗ ವಿದ್ಯುತ್‌ ಇಲ್ಲದ ಗ್ರಾಮಗಳಿಲ್ಲ. ಕೇವಲ ಉದ್ಯಮಿಗಳಿಗೆ ಮಾತ್ರ ಮೋದಿ ಸಹಾಯ ಮಾಡುತ್ತಾರೆ ಎಂದು ಆರೋಪಿಸುವವರು ಈ ಹಳ್ಳಿಗಳಲ್ಲಿ ಯಾವ ಅಂಬಾನಿ, ಅದಾನಿ ಬಾಂಧವರಿದ್ದಾರೆ ಎಂದು ಹೇಳಬೇಕು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್‌ ಪೂಜಾರಿ ಸವಾಲು ಹಾಕಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಹಿಂದೆಂದಿಗಿಂತಲೂ ಈ ಬಾರಿ ವಿದ್ಯಾವಂತರು, ಗ್ರಾಮೀಣ ಜನರು, ಸಾಮಾನ್ಯ ಜನರು, ಸರ್ಕಾರಿ ನೌಕರರು ಸೇರಿದಂತೆ ಎಲ್ಲ ವರ್ಗ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮೋದಿಪರ ಜನಾಭಿಪ್ರಾಯ ಕ್ರೋಢೀಕರಣವಾಗಿದ್ದು, ಅಭ್ಯರ್ಥಿ ಬಿ.ವೈ.ರಾಘವೇಂದ್ರ 2 ಲಕ್ಷಕ್ಕೂ ಅಧಿ ಕ ಮತಗಳ ಅಂತರದಿಂದ ಗೆಲ್ಲುತ್ತಾರೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೇಶ ಮೊದಲು ಎನ್ನುವ ಸಂಕಲ್ಪದೊಂದಿಗೆ ಜನರು ಮೋದಿ ಪರವಾಗಿ ಮತಚಲಾವಣೆಗೆ ಮುಂದಾಗಿದ್ದಾರೆ. ನರೇಂದ್ರ ಮೋದಿ ಅವರು ಐದು ವರ್ಷಗಳ ಕಾಲ ಒಂದೇ ಒಂದು ಕಪ್ಪುಚುಕ್ಕೆಯನ್ನು ಹೊಂದದೆ ಆಡಳಿತ ನಡೆಸಿದ್ದು, ದೇಶದ್ರೋಹಿಗಳಿಗೆ ತಕ್ಕಪಾಠ ಕಲಿಸಿದ್ದು, ದೇಶ ಮೊದಲು ಎನ್ನುವ ಸಂದೇಶ ನೀಡಿದ್ದು ಜನರಲ್ಲಿ ಬಿಜೆಪಿ ಬಗ್ಗೆ ಹೆಚ್ಚು ವಿಶ್ವಾಸ ಮೂಡಲು ಕಾರಣವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಎಲ್ಲ ವಾತಾವರಣವಿದೆ. ರಾಜ್ಯದಲ್ಲಿ ಬಿಜೆಪಿ 23 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ. ಮೋದಿ ಅವರು ಪ್ರಧಾನಿಯಾದ ನಂತರ 8 ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ವಿತರಣೆ, ಆರೋಗ್ಯ ಕ್ಷೇತ್ರದಡಿ ಬಡವರಿಗೆ ಸೌಲಭ್ಯ ಕಲ್ಪಿಸಲು ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ತಂದಿದೆ. ನರೇಂದ್ರ ಮೋದಿ ಅವರು ಇನ್ನೊಮ್ಮೆ ಪ್ರಧಾನಿಯಾದರೆ ದೇಶದ ಅಭಿವೃದ್ಧಿಯ ಚಿತ್ರಣ ಬದಲಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next