Advertisement

ಮೈತ್ರಿ ಅಭ್ಯರ್ಥಿಗೆ ಮತ ಹಾಕಿ: ಸಂಗಮೇಶ್‌

04:31 PM Apr 20, 2019 | Naveen |

ಭದ್ರಾವತಿ: ನರೇಂದ್ರ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಯಾವುದೇ ಭರವಸೆಯನ್ನು ಈಡೇರಿಸದೆ ಇರುವುದು ಜನರಿಗೆ
ಅರಿವಾಗಿರುವುದರಿಂದ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಎಸ್‌. ಮಧು ಬಂಗಾರಪ್ಪ ಅವರಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂದು ಶಾಸಕ ಬಿ.ಕೆ. ಸಂಗಮೇಶ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರು ತಾಲೂಕಿನಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಜೆಪಿಯವರು ಧರ್ಮದ ಆಧಾರದ ಮೇಲೆ ಹಿಂದೂಗಳನ್ನು ಒಡೆದು, ಅಲ್ಪಸಂಖ್ಯಾತರ ಮೇಲೆ ಎತ್ತಿಕಟ್ಟಿ ಯುವಕರನ್ನು ದಾರಿ ತಪ್ಪಿಸಿ ಚುನಾವಣಾ
ಪ್ರಚಾರ ಮಾಡುತ್ತಿದ್ದಾರೆ.

ಭದ್ರಾವತಿ ಜನತೆ ಇವರನ್ನು ತಿರಸ್ಕರಿಸಿ ಮಧು ಬಂಗಾರಪ್ಪನವರಿಗೆ ಮತಹಾಕಬೇಕು ಎಂದು ಕೋರುತ್ತೇನೆ ಎಂದರು.

ಭದ್ರಾವತಿಗೆ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಬರುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಿಂದ ಯಾವ ರಾಷ್ಟ್ರ ನಾಯಕರನ್ನು ಕರೆಸುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿನ ಪ್ರತಿಯೊಬ್ಬರೂ ಅಮಿತ್‌ ಶಾ ಅವರಷ್ಟೇ ಪವರ್‌ಫುಲ್‌ ಆಗಿರುವುದರಿಂದ ನಾವೇ ಮಧು ಬಂಗಾರಪ್ಪನವರನ್ನು ಗೆಲ್ಲಿಸಲು ಸಾಕು ಎಂಬ ಭರವಸೆ ನಮ್ಮ ಹೈಕಮಾಂಡ್‌ ನಾಯಕರಿಗಿರುವುದರಿಂದ ನಮ್ಮ ಬೇರೆ ಯಾವ
ನಾಯಕರು ಇಲ್ಲಿಗೆ ಬರಬೇಕಾದ ಅಗತ್ಯವಿಲ್ಲ
ಎಂದು ಉತ್ತರಿಸಿದರು.

ಬಿಎಸ್‌ವೈ – ಬಿವೈಆರ್‌ ಕೊಡುಗೆ ಶೂನ್ಯ
ಪಕ್ಷದ ನಗರಾಧ್ಯಕ್ಷ ಟಿ.ಚಂದ್ರೇಗೌಡ ಮಾತನಾಡಿ, ಭದ್ರಾವತಿಗೆ ಬಿಎಸ್‌ವೈ, ಬಿವೈಆರ್‌ ಕೊಡುಗೆ ಶೂನ್ಯವಾಗಿದ್ದು ಚುನಾವಣೆಯ ನಂತರ ಬಿಎಸ್‌ಬೈ ಮೂಲೆಗುಂಪಾಗಲಿದ್ದಾರೆ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಮುಂಖಂಡರಾದ ಎಸ್‌.
ಪಿ. ದಿನೇಶ್‌, ಬಿ.ಟಿ.ನಾಗರಾಜ್‌, ಸಿ.ಎಂ. ಖಾದರ್‌
ಮತ್ತಿತರರು ಇದ್ದರು.

ಬಿಜೆಪಿ ಅಭ್ಯರ್ಥಿ ಭದ್ರಾವತಿಗೆ ಹೆಚ್ಚಿನ ಬಾರಿ ಬಂದು ಪ್ರಚಾರ ನಡೆಸಿ ಹೋಗುತ್ತಿದ್ದಾರೆ. ಆದರೆ ಮಧು ಬಂಗಾರಪ್ಪ ಕೇವಲ ಜೆಡಿಎಸ್‌ ಮತ್ತು ಕಾರ್ಯಕರ್ತರ 2 ಸಭೆಗೆ ಬಂದದ್ದು ಬಿಟ್ಟರೆ
ಮತ ಯಾಚನೆಗೆ ಸಾರ್ವಜನಿಕವಾಗಿ ಈ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದಿರುವ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಶಾಸಕರು, ಈ ಕ್ಷೇತ್ರದ ಕಾಂಗ್ರೆಸ್‌ನ ಪ್ರತಿಯೊಬ್ಬ ನಾಯಕರು, ಕಾರ್ಯಕರ್ತರು ಮಧು ಬಂಗಾರಪ್ಪ ಆಗಿ ಮತಯಾಚನೆ ಮಾಡುತ್ತಿರುವುದರಿಂದ ಮಧು ಇಲ್ಲಿಗೆ ಬಂದು ಮತ ಕೇಳಬೇಕಾದ ಅಗತ್ಯವಿಲ್ಲ.
.ಬಿ.ಕೆ. ಸಂಗಮೇಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next