ಶಿಕಾರಿಪುರ: ನರೇಂದ್ರ ಮೋದಿ ಅವರು ಅಧಿಕಾರ ವಹಿಕೊಂಡ ಸಮಯದಿಂದ ನಮ್ಮ ಭಾರತದ ಸಾಲ 54 ಲಕ್ಷ ಕೋಟಿ ಇತ್ತು. ಅವರ ಪ್ರಾಮಾಣಿಕತೆ ಹಾಗೂ ಉತ್ತಮ ಆಡಳಿತದಿಂದ ಇಂದು ನಾವು ಬೇರೆ ದೇಶಕ್ಕೆ ಸಾಲ ನೀಡುವ ಸ್ಥಿತಿಗೆ ಬಂದಿದೆ. ಮೋದಿ ಅವರು ವಿಶ್ವದ ನಾಯಕರಾಗಬೇಕೆಂದು ದೇಶದ ಜನ ಬಯಸುತ್ತಿದ್ದಾರೆ. ಈ ಬಾರಿ 300 ಕ್ಕೂ ಹೆಚ್ಚು ಸ್ಥಾನ ಗಳಿಸಿ ಮತ್ತೆ ಪ್ರಧಾನಿಯಾಗುವು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದ ಹಳೆ ಸಂತೆ ಮೈದಾನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಪುಲ್ವಾಮಾ ದಾಳಿ ನನಗೆ ಎರಡು ವರ್ಷದ ಹಿಂದೆ ಗೊತ್ತಿದೆ ಎಂದರು. ಇದನ್ನು ರಾಷ್ಟ್ರಕ್ಕೆ ಏಕೆ ತಿಳಿಸಲಿಲ್ಲ. ನೀವು ದೇಶದ ಮೇಲೆ ಇಟ್ಟಿರುವ ಅಭಿಮಾನ ಎಂತದ್ದು ಎಂದು ದೇಶದ ಜನರಿಗೆ ಗೊತ್ತಾಗಿದೆ. ರಾಜ್ಯದ ಗೌಪ್ಯತೆ ಕಾಪಾಡುವುದಾಗಿ ಹೇಳಿ ಪ್ರಮಾಣ ವಚನ ಸ್ವೀಕರಿಸಿದ ನೀವು ಐಟಿ ದಾಳಿಯಾಗುತ್ತದೆ ಎಂದು ನಿಮ್ಮವರನ್ನು ರಕ್ಷಿಸಿದ್ದೀರಿ. ಮಂಡ್ಯದಲ್ಲಿ ನಿಮ್ಮ ಪುತ್ರನ ಗೆಲುವಿಗೋಸ್ಕರ ರಾಜ್ಯದ ಜನರನ್ನು ನಿರ್ಲಕ್ಷಿಸುತ್ತಿದ್ದೀರಿ. ಐಟಿ ಕಚೇರಿ ಮುಂದೆ ಮುಖ್ಯಮಂತ್ರಿ ಸತ್ಯಾಗ್ರಹ ಮಾಡುತ್ತಾರೆ. ಇಂತಹ ಕೆಟ್ಟ ಸಂಸ್ಕೃತಿ ಇರುವ ನಿಮಗೆ
ಮುಖ್ಯಮಂತ್ರಿಯಾಗಿರುವುದಕ್ಕೆ ಯೋಗ್ಯತೆ ಇಲ್ಲ ಎಂದರು.
ನಮ್ಮ ದೇಶ ಕಾದು ನಮ್ಮನ್ನು ರಕ್ಷಣೆ ಮಾಡುವ ವೀರಯೋಧರನ್ನು ಬಡತನದಿಂದ ಎರಡು ಹೊತ್ತು ಊಟಕ್ಕೆ ಸೇನೆ ಸೇರುತ್ತಾರೆಂದು ಹೇಳುವ ನೀವು ಒಮ್ಮೆ ಯೋಚಿಸಿ ಮಾತನಾಡಬೇಕು. ರಾಜ್ಯದಲ್ಲಿ ನಮ್ಮ ಪಕ್ಷ ಕನಿಷ್ಟ 22 ಸೀಟು ಗೆಲ್ಲುವುದು. ಖಚಿತ. ನಿಮ್ಮ ತಂದೆಯವರಾದ ದೇವೇಗೌಡ್ರು ತುಮಕೂರಿನಲ್ಲಿ ಸೋಲುತ್ತಾರೆ. ಪ್ರಧಾನಿ ಮೋದಿ ಅವರ ಕನಸಿನಂತೆ ರಾಷ್ಟ್ರದ ನದಿಗಳ ಜೋಡಣೆ ಮಾಡಲಾಗುವುದು. ಎಂದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ವಿರೋಧಪಕ್ಷಗಳು ಮೋದಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಮೋದಿ ಮಾಡಿದ
ದೇಶದ ಅಭಿವೃದ್ಧಿಯನ್ನು ಕಂಡ ದೇಶದ ಜನ ಮೋದಿಯವರನ್ನು
ನಂಬಿದ್ದಾರೆ. ದೇಶವನ್ನು ಸಮರ್ಥವಾಗಿ ಮನ್ನೆಡಸುವ ಏಕೈಕ ನಾಯಕ ಮೋದಿ ಎಂದರು.
ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿದರು. ಶಾಸಕರಾದ ಕುಮಾರ ಬಂಗಾರಪ್ಪ, ಎಂ.ಪಿ.ರೇಣುಕಾಚಾರ್ಯ, ಅಶೋಕ ನಾಯ್ಕ, ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ರುದ್ರೇಗೌಡ, ಭಾರತಿ ಶೆಟ್ಟಿ, ತಾರಾ ಅನುರಾಧಾ ಮತ್ತಿತರರು ಇದ್ದರು.