Advertisement

ಮೋದಿ ಶಕ್ತಿ ಪಾಕ್‌ಗೂ ಗೊತ್ತಾಗಿದೆ: ಈಶ್ವರಪ್ಪ

04:38 PM Apr 13, 2019 | Naveen |

ಶಿವಮೊಗ್ಗ: ಈ ಬಾರಿ ಚುನಾವವಣೆಯಲ್ಲಿ ನಿಂಬೆಹಣ್ಣು ರೇವಣ್ಣನ ಆಟ ಏನೂ ನಡೆಯೊಲ್ಲ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಕೆ. ಎಸ್‌.
ಈಶ್ವರಪ್ಪ ಲೇವಡಿ ಮಾಡಿದ್ದಾರೆ.

Advertisement

ನಗರದ ಕೋಟೆ ರಸ್ತೆಯಲ್ಲಿ ಶುಕ್ರವಾರ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರವಾಗಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿ ಮಾತನಾಡಿದ ಅವರು,
ಹಿಂದೆ ದೇವೇಗೌಡರು ಮೋದಿ ಪ್ರಧಾನಿಯಾದರೆ ದೇಶ ಬಿಟ್ಟುಹೋಗುತ್ತೇನೆ ಎಂದಿದ್ದರು. ಈಗ ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ ರಾಜಕೀಯ
ಸನ್ಯಾಸತ್ವ ಸ್ವೀಕರಿಸುವುದಾಗಿ ಎಚ್‌.ಡಿ. ರೇವಣ್ಣ ಹೇಳಿದ್ದಾರೆ. ದೇವೇಗೌಡರು ದೇಶಬಿಟ್ಟು ಹೋಗುವುದೂ ಬೇಡ. ರೇವಣ್ಣ ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದೂ ಬೇಡ. ಅಪ್ಪ, ಮಕ್ಕಳು ಮೊದಲು ಸುಳ್ಳು ಹೇಳುವುದನ್ನು ಬಿಡಲಿ ಎಂದರು.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿ ಎಂದು ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಯಾರ ಬಳಿ ದಂಡ ಇರುತ್ತದೋ ಅವರ ಮಾತು ನಡೆಯುತ್ತದೆ.

ಭಾರತೀಯ ಸೇನೆ ಮತ್ತು ಮೋದಿಯ ಶಕ್ತಿ ಗೊತ್ತಾಗಿ ಇಮ್ರಾನ್‌ ಖಾನ್‌ ಭಾರತಕ್ಕೆ ಶರಣಾಗದಿದ್ದರೆ ಪಾಕಿಸ್ತಾನ ಉಳಿಯುವುದಿಲ್ಲ ಎಂದು ಮನಗಂಡು ಇಂತಹ ಹೇಳಿಕೆ ನೀಡಿದ್ದಾರೆ ಎಂದರು.

ಸಿದ್ದರಾಮಯ್ಯ ನನ್ನನ್ನು ಟೀಕಿಸುವುದು ನಾನು ಅವರನ್ನು ಟೀಕಿಸುವುದು ರಾಜಕಾರಣದಲ್ಲಿ ಸಹಜ ಎಂದ ಅವರು, ಸಿಎಂ ಮಾಧ್ಯಮದವರ ಮೇಲೆ
ಹಲ್ಲೆ ಆಗುತ್ತದೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿದರು. ಮಾಧ್ಯಮಗಳ ಮೇಲೆ ಹಲ್ಲೆ ಆಗುವುದು ಗೊತ್ತಿದ್ದರೂ ಮುಖ್ಯಮಂತ್ರಿಯಾಗಿ
ತಡೆಯುವ ಪ್ರಯತ್ನವನ್ನು ಏಕೆ ಮಾಡುತ್ತಿಲ್ಲ. ಅವರ ಕೈಲಿ ಆಗದಿದ್ದರೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಿ. ಬೇರೆಯವರಾದರೂ
ಮುಖ್ಯಮಂತ್ರಿಯಾಗಿ ಹಲ್ಲೆಯನ್ನು ತಡೆಯುತ್ತಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಿದ್ದರು. ಸಿಎಂ ಮಾಧ್ಯಮದವರ ಮೇಲೆ ಹಲ್ಲೆ ನಡೆಯುವುದು ಗೊತ್ತಿದ್ದರೂ ತಡೆಯಲು ಮುಂದಾಗಿಲ್ಲ. ಬಿಜೆಪಿ ಮಾಧ್ಯಮದ
ಸ್ವಾತಂತ್ರ್ಯ ವನ್ನು ಉಳಿಸಲು ಹೋರಾಟ ನಡೆಸಲಿದೆ ಎಂದು ಹೇಳಿದರು.

Advertisement

ಈ ಬಾರಿ ರಾಜ್ಯದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಪ್ರಚಾರದಲ್ಲಿ ಆಯನೂರು ಮಂಜುನಾಥ್‌, ಎಸ್‌.ರುದ್ರೇಗೌಡ, ಮೇಯರ್‌ ಲತಾ ಗಣೇಶ್‌,
ಎಸ್‌.ಎನ್‌. ಚನ್ನಬಸಪ್ಪ, ಡಿ.ಎಸ್‌.ಅರುಣ್‌, ಎಸ್‌. ಜ್ಞಾನೇಶ್ವರ್‌, ನಾಗರಾಜ್‌, ಬಿ.ವೈ. ವಿಜಯೇಂದ್ರ, ಎಚ್‌.ಎನ್‌. ಮಂಜುನಾಥ್‌ ಮಧುಸೂದನ್‌, ಹಿರಣ್ಣಯ್ಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next