Advertisement
ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನ ಬಿಜೆಪಿ ಕೈ ಹಿಡಿದಿದ್ದಾರೆ. ಜತೆಗೆ ನರೇಂದ್ರ ಮೋದಿ ಹವಾ, ಅಭಿವೃದ್ಧಿ ಕಾರ್ಯಗಳು ಎಲ್ಲವೂ ನಿರೀಕ್ಷೆಗೂ ಮೀರಿ ಮತ ತಂದುಕೊಡುತ್ತವೆ. ಐದು ಹೋಬಳಿಗಳಲ್ಲೂ ಬಿಜೆಪಿ ಲೀಡ್ ಪಡೆಯಲಿದೆ ಎಂಬ ಭರವಸೆ ಹೊಂದಿದೆ. ಜಿಲ್ಲಾಸ್ಪತ್ರೆ ವಾಪಸ್ ಹೋಗಲು ಮಧು ಬಂಗಾರಪ್ಪ ಕಾರಣ. 50 ಸಾವಿರ ಮತ ಕೊಟ್ಟರೂ ಒಂದು ಸಭೆ ಮಾಡಲಿಲ್ಲ ಎಂಬ ಅಂಶಗಳನ್ನು ಬಿಜೆಪಿ ಪ್ರಚಾರದ ಅಂಶಗಳನ್ನು ಯಶಸ್ವಿಗೆ ಬಳಸಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾದ ಏತ ನೀರಾವರಿ ಯೋಜನೆಗೆ ಹಣ ನಿಡುಗಡೆಯಾಗಿದ್ದು ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಮನವಿಯಿಂದ ಎಂದು ಸಹ ಪ್ರಚಾರ ಮಾಡಿದ್ದಾರೆ.
Related Articles
Advertisement
ಹಣ, ಹಣ: ಭರ್ಜರಿ ಪ್ರಚಾರದ ಹೊರತಾಗಿಯೂ ಶಿಕಾರಿಪುರದಲ್ಲಿ ಹಣದ ಹೊಳೆಯೇ ಹರಿದಿದೆ. ಶಿರಾಳಕೊಪ್ಪ ಭಾಗದಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಭರ್ಜರಿ ಹಣ ಹಂಚಲಾಗಿದೆ ಎನ್ನಲಾಗಿದೆ. ತಾಲೂಕಿನಾದ್ಯಂತ ಮನೆಗೆ 500 ರೂ. ಕೊಟ್ಟಿರುವ ಕಡೆ ಪ್ರತಿಸ್ಪರ್ಧಿಗಳು ತಲೆಗೆ 200, 300 ರೂ. ಹಂಚಿರುವ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿವೆ. ಲಿಂಗಾಯತರು, ಕುರುಬರು, ಈಡಿಗರು, ಮುಸ್ಲಿಮರಿಗೆ ಬೇರೆ ಬೇರೆ ಲೆಕ್ಕಾಚಾರದಲ್ಲಿ ಹಣ ಸಂದಾಯವಾಗಿರುವುದು ಕಾರ್ಯಕರ್ತರ ನಡುವೆ ಚರ್ಚೆಯ ವಿಷಯವಾಗಿದೆ.
ಒಳ ಹೊಡೆತ: ಹಣ ಹಂಚಿಕೆ ವಿಚಾರದಲ್ಲಿ ತಂತ್ರ, ಪ್ರತಿತಂತ್ರಗಳು ಕ್ಷೇತ್ರದಲ್ಲಿ ಜೋರಾಗಿ ನಡೆದಿವೆ. ಕೊನೆ ಕ್ಷಣದವರೆಗೂ ಕಾರ್ಯತಂತ್ರದ ಗುಟ್ಟು ಬಿಟ್ಟುಕೊಡದಿರಲು ಈ ಬಾರಿ ಜೆಡಿಎಸ್ ನಿರ್ಧರಿಸಿತ್ತು. ಇದು ಸಹ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಶಿರಾಳಕೊಪ್ಪ ಭಾಗದಲ್ಲಿ ಮೈತ್ರಿಕೂಟ ಮುಸ್ಲಿಮರಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಕಾರಣ ಕಾಂಗ್ರೆಸ್‌ನ ಲಿಂಗಾಯತ ಮುಖಂಡರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮತ ಪ್ರಮಾಣ: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 232 ಮತಗಟ್ಟೆಗಳಿವೆ. 97199 ಪುರುಷ ಹಾಗೂ 94746 ಮಹಿಳೆಯರು ಸೇರಿ 191955 ಮತದಾರಿದ್ದಾರೆ. ಇದರಲ್ಲಿ 79588 ಪುರುಷರು ಹಾಗೂ 75213 ಮಹಿಳೆಯರು ಸೇರಿ 154801 (ಶೇ..80.64) ಮಂದಿ ಮತ ಚಲಾಯಿಸಿದ್ದಾರೆ. ಹೊಸೂರು ಹೋಬಳಿಯಲ್ಲಿ ಹೆಚ್ಚು ಮತದಾನವಾಗಿದ್ದು ಇದು ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಇದೆ. ಅದೇ ರೀತಿ ಅಂಜನಾಪುರ ಹೋಬಳಿಯಲ್ಲೂ ಹೆಚ್ಚು ಮತದಾನವಾಗಿದ್ದು ಇದು ಜೆಡಿಎಸ್‌ಗೆ ಲಾಭವಾಗುವ ನಿರೀಕ್ಷೆಯಲ್ಲಿದ್ದಾರೆ.
ಅಂತರಕ್ಕೆ ಬೆಟ್ಟಿಂಗ್ ತಾಲೂಕಿನಲ್ಲಿ ಬೆಟ್ಟಿಂಗ್ ವ್ಯಾಪಕವಾಗಿಲ್ಲದಿದ್ದರೂ ಕೆಲ ಹೋಬಳಿಗಳಲ್ಲಿ ಸಣ್ಣಪುಟ್ಟ ಪ್ರಮಾಣದಲ್ಲಿ ನಡೆಯುತ್ತಿದೆ. 5 ಸಾವಿರ 1 ಲಕ್ಷದವರೆಗೂ ಗೆಲುವಿನ ಅಂತರ ಎಷ್ಟಿರಲಿದೆ ಎಂಬ ವಿಚಾರಕ್ಕೆ ಬೆಟ್ಟಿಂಗ್ ಕಟ್ಟಿದ್ದಾರೆ. ಮೈತ್ರಿಕೂಟ ಮತ್ತು ಬಿಜೆಪಿ ಭರ್ಜರಿ ಪ್ರಚಾರ ಮಾಡಿರುವುದರಿಂದ ಜನರಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ.
ಶರತ್ ಭದ್ರಾವತಿ