ಶಿವಮೊಗ್ಗ: ಕೋವಿಡ್ ಸೋಂಕಿನ ಎರಡನೇ ಅಲೆ ಹಾಗೂ ಬ್ಲ್ಯಾಕ್ ಫಂಗಸ್ ನ ಆತಂಕದ ನಡುವೆ ಜನ ಜೀವನ ಅಸ್ತವ್ಯಸ್ಥವಾಗಿದೆ. ರಾಜ್ಯದಲ್ಲಿ ಕರ್ಫ್ಯೂ ವನ್ನು ವಿಸ್ತರಿಸಬೇಕೆ ಬೇಡವೇ ಎನ್ನವುದರ ಬಗ್ಗೆ ಸಚಿವ ಸಂಪುಟದ ಉನ್ನತ ಮಟ್ಟದ ಸಭೆಗಳು ನಡೆಯುತ್ತಿದೆ. ಇತ್ತ ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಡಳಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.
ಇದನ್ನೂ ಓದಿ : ಚಿಕ್ಕಮಗಳೂರು : ಜಿಲ್ಲಾಡಳಿತದಿಂದ ಹೊಸ ಲಾಕ್ ಡೌನ್ ಮಾರ್ಗಸೂಚಿ ಬಿಡುಗಡೆ
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಕೋವಿಡ್ ಸೋಂಕಿನ ಪ್ರಮಾಣ ಕೊಂಚ ಮಟ್ಟಿಗೆ ಇಳಿದಿದ್ದರೂ ಸೋಂಕಿನ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ(ಸೋಮವಾರ)ದಿಂದ ಭಾನುವಾರದವರೆಗೂ ಕಠಿಣ ಲಾಕ್ ಡೌನ್ ನನ್ನು ಜಿಲ್ಲಾಡಳಿತ ಘೋಷಣೆ ಮಾಡಿದ ಪರಿಣಾಮ ಸೋಮವಾರ ಅಗತ್ಯ ವಸ್ತುಗಳ ಖರೀದಿಗೆ ಭಾರಿ ಜನಸ್ತೋಮ ಕಂಡುಬಂದಿದೆ.
ಸೋಮವಾರದಿಂದ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಸಮಯ ಮಿತಿ ಹೇರಲಾಗಿದೆ. ಅಲ್ಲದೇ ಎಪಿಎಂಸಿಯಲ್ಲಿ ಖರೀದಿಗೆ ಅವಕಾಶ ನಿಲ್ಲಿಸಲಾಗಿದೆ. ಬ್ಯಾಂಕ್ ವ್ಯವಹಾರದ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಇನ್ನು, ಏರಿಯಾ ಬಿಟ್ಟು ಏರಿಯಾಗೆ ಬರಲು ನಿರ್ಬಂಧ ಹೇರಿರುವ ಪರಿಣಾಮ ಸೋಮವಾರ ಅಗತ್ಯ ವಸ್ತುಗಳ ಖರೀದಿಗೆ ನೂಕುನುಗ್ಗಲು ಕಂಡುಬಂದಿದೆ.
ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಇದೇ ವಾತಾವರಣ ಕಂಡುಬಂದಿದ್ದು, ಭದ್ರಾವತಿಯಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ವಿಡಿಯೋ ಈಗ ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಸಿಡಿ ಲೇಡಿಯ ಹೆಬಿಯಸ್ ಕಾರ್ಪಸ್ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ