Advertisement

Shivamogga: ಅಯೋಧ್ಯೆ ರೀತಿ ವ‌ಕ್ಫ್ ಹಗರಣಕ್ಕೂ ನ್ಯಾಯ ಸಿಕ್ಕೇ ಸಿಗುತ್ತದೆ; ಈಶ್ವರಪ್ಪ

07:38 PM Dec 17, 2024 | Poornashri K |

ಶಿವಮೊಗ್ಗ: ಅಯೋಧ್ಯೆಗೆ ನ್ಯಾಯ ಸಿಕ್ಕಿದ ಹಾಗೆ ವಕ್ಫ್ ಹಗರಣಕ್ಕೂ ಮುಂದೊಂದು ದಿನ ನ್ಯಾಯ ಸಿಗುತ್ತದೆ, ಸತ್ಯ ಹೊರಗೆ ಬರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಪತಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

Advertisement

ವಕ್ಫ್ ಆಸ್ತಿ ವರದಿಯ ಅಕ್ರಮವನ್ನು ಮುಚ್ಚಿಡುವಂತೆ ಅಲ್ಪಸಂಖ್ಯಾಕರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿಗೆ ಬಿ.ವೈ. ವಿಜಯೇಂದ್ರ 150 ಕೋಟಿ ರೂ ಆಮಿಷ ಒಡ್ಡಿರುವ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪ ಗಂಭೀರವಾದದ್ದು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸರಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು.

ಮಠ-ಮಂದಿರಗಳ ಪಹಣಿಯಲ್ಲಿ ಇನ್ನೂ ವ‌ಕ್ಫ್ ಆಸ್ತಿ ಎಂದೇ ಇದ್ದು ತಿದ್ದುಪಡಿ ಆಗಿಲ್ಲ. ಸರಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿಲ್ಲ. ಅನ್ವರ್‌ ಮಾಣಿಪ್ಪಾಡಿ ವರದಿ ಇನ್ನೂ ಚರ್ಚೆಯಾಗಿಲ್ಲ. ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ವರದಿಯನ್ನು ಟೇಬಲ್‌ ಮಾಡಿದ್ದರು. ಆದರೆ ಈ ಬಗ್ಗೆ ವಿಧಾನ ಮಂಡಲದಲ್ಲಿ ಚರ್ಚೆಯಾಗಿಲ್ಲ. ವಕ್ಫ್ ಆಸ್ತಿಯನ್ನು ರಾಜಕಾರಣಿಗಳು ಮತ್ತು ಪ್ರಮುಖರು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದರಲ್ಲಿ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಅನೇಕ ಗಣ್ಯರು ಸೇರಿದ್ದಾರೆ. ಬಿಜೆಪಿಯವರೂ ಇದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next