Advertisement

ಶಿವಮೊಗ್ಗ: ಮರಕ್ಕೆ ಢಿಕ್ಕಿ ಹೊಡೆದ ಕಾರು: ಮೂವರು ಸ್ಥಳದಲ್ಲೇ ಸಾವು

10:10 AM Mar 09, 2020 | Mithun PG |

ಶಿವಮೊಗ್ಗ: ಕಾರು ಮರವೊಂದಕ್ಕೆ ಢಿಕ್ಕಿಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಗಂಭಿರವಾಗಿ ಗಾಯಗೊಂಡ ಘಟನೆ ಸಾಗರ ತಾಲೂಕಿನ ಕಾಸ್ಪಾಡಿ ಬಳಿ ನಡೆದಿದೆ.

Advertisement

ಇಂದು ಬೆಳಗಿನ‌ಜಾವ ಈ ಘಟನೆ ನಡೆದಿದ್ದು, ಕಾರು ಮರಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತಪಟ್ಟವರನ್ನು ರಾಯಚೂರು ಶಕ್ತಿ ನಗರದ ಕೆಪಿಸಿ ಉದ್ಯೋಗಿಗಳಾದ ಸಿದ್ಧಪ್ಪ(40), ಜಿ.ತಿಪ್ಪಣ್ಣ(60), ವೆಂಕಟೇಶ(55) ಎಂದು ಗುರುತಿಸಲಾಗಿದೆ. ಗಾಯಗೊಂಡ ನಾಗರಾಜ್ ಸ್ಥಿತಿ ಗಂಭೀರವಾಗಿದೆ.

ರಾಯಚೂರಿನಿಂದ ಕಾರ್ಗಲ್ ಗೆ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next