Advertisement

Shivamogga ಗಲಾಟೆ ತುಷ್ಠೀಕರಣ ರಾಜಕಾರಣದ ಪರಮಾವಧಿ: ಪ್ರಹ್ಲಾದ ಜೋಶಿ

03:13 PM Oct 07, 2023 | Team Udayavani |

ಹುಬ್ಬಳ್ಳಿ: ಶಿವಮೊಗ್ಗ ಗಲಾಟೆ ವಿಚಾರ ರಾಜ್ಯ ಸರ್ಕಾರದ ತುಷ್ಠೀಕರಣ ರಾಜಕಾರಣದ ಪರಮಾವಧಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

Advertisement

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಘಟನೆಯನ್ನು ರಾಜ್ಯ ಸರ್ಕಾರ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಹಿಂದೂಗಳ ಮೇಲೆ ಹಲ್ಲೆ ಮಾಡಲಾಗಿದೆ. ತುಷ್ಠೀಕರಣ ಕಾರಣದಿಂದ ಮತಾಂಧ ಶಕ್ತಿಗಳಿಗೆ ರಕ್ಷಣೆ ದೊರೆಯುತ್ತಿದೆ ಅನ್ನೋ ಮನೋಭಾವನೆ ಇದೆ. ಕಾಂಗ್ರೆಸ್ ಸರ್ಕಾರದಿಂದ ನಮಗೆ ರಕ್ಷಣೆ ಇದೆ ಅನ್ನೋ ಪರಿಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ.

ಅಲ್ಲಿ ಇಷ್ಟೊಂದು ರೀತಿಯ ದೊಡ್ಡ ಪ್ರಮಾಣದ ಗಲಾಟೆಯಾದರು ಸಹ ಅದರ ಬಗ್ಗೆ ಉಡಾಫೆ ಉತ್ತರ ರಾಜ್ಯ ಕಾಂಗ್ರೆಸ್ ಸರಕಾರದಿಂದ ವ್ಯಕ್ತವಾಗುತ್ತಿದೆ ಇದು ಖಂಡನೀಯ.ಹಳೇ ಹುಬ್ಬಳ್ಳಿ ವಿಚಾರದಲ್ಲೂ ಪೊಲೀಸರು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳದಿದ್ದರೆ ಪೊಲೀಸರು ಮತ್ತು ಜನರ ಹತ್ಯೆಯಾಗುತ್ತಿತ್ತು. ಹಳೇ ಹುಬ್ಬಳ್ಳಿ ಗಲಾಟೆ ವಿಚಾರದಲ್ಲೂ ಸಾಕಷ್ಟು ಗಲಭೆ ದೊಂಬಿ ನಡೆದಿದೆ. ಆದರೆ ಇಂತಹ ಗಲಭೆ ನಡೆಸಿದವರ ಕೇಸ್ ವಾಪಸ್ ತೆಗೆದುಕೊಳ್ಳಲು ಸರ್ಕಾರ ಮುಂದಾಗುತ್ತಿದೆ. ಇದನ್ನು ನೋಡಿದರೇ ಸರ್ಕಾರ ಏನೋ ಮಾಡಲು ಹೊರಟಂತಿದೆ ಎಂದೆನಿಸುತ್ತಿದೆ.ತುಷ್ಠೀಕರಣದ ರಾಜಕಾರಣ ಪರಾಕಾಷ್ಠೆಯನ್ನ ಕಾಂಗ್ರೆಸ್ ತಲುಪಿದೆ. ಕಾಂಗ್ರೆಸ್ಸಿಗರು ಕೇವಲ ಅಲ್ಪಸಂಖ್ಯಾತರು ಮತ ಹಾಕಿಲ್ಲ ಅನ್ನೋದು ನೆನಪಿನಲ್ಲಿಟ್ಟು ಕೊಳ್ಳಬೇಕು.‌ ದೇಶದ್ರೋಹಿಗಳ, ಗಲಭೆಕೋರರ ಪರ ನಿಲ್ಲೋದನ್ನ‌ ನಾವು ತೀವ್ರವಾಗಿ ಖಂಡಿಸುತ್ತೇವೆ.

ಪಾಕಿಸ್ಥಾನ ಜಿಂದಾಬಾದ್ ಅಂತ ಘೋಷಣೆ ಕೂಗುವವರನ್ನ ತಲ್ವಾರ್ ಹಿಡಿದು ಬೆದರಿಕೆ ಹಾಕೋರನ್ನ ರಕ್ಷಣೆ ಮಾಡಲು ಹೊರಟಿದ್ದಾರೆ.ಪಾಕಿಸ್ತಾನಿ ಭಯೋತ್ಪಾದಕರ ಪರವಾಗಿ ನಿಲ್ಲೋಕೆ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು‌. ಈ ಕುರಿತು ಕಾಂಗ್ರೆಸ್ ಎಚ್ಚೆತ್ತುಕೊಳ್ಳದಿದ್ದಲ್ಲಿ ನಾವುಗಳು ತೀವ್ರ ಹೋರಾಟ ನಡೆಸುತ್ತೇವೆ.

ಕಾಂಗ್ರೆಸ್ ನಲ್ಲಿ ಲಿಂಗಾಯತ ಲಡಾಯಿ ವಿಚಾರ.‌ ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ.‌ಈ‌ ಬಗ್ಗೆ ಶಾಮನೂರು ಶಿವಶಂಕರಪ್ಪ‌ ಅವರೇ ಸ್ಪಷ್ಟಪಡಿಸಿದ್ದಾರೆ. ನಾವೇನೂ ಜಾಸ್ತಿ ಹೇಳಲ್ಲ. ಪಿಎಫ್ ಐ ಗೆ ಬೆಂಬಲ‌ ಸೂಚಿಸುವುದು ಕಾಂಗ್ರೆಸ್ ನ ಪಾಲಸಿ. ಪಿಎಫ್ ಐ ಸೇರಿದಂತೆ ದೇಶದ್ರೋಹಿಗಳಿಗೆ ಪ್ರೋತ್ಸಾಹ ನೀಡುವಂತ ಪಕ್ಷವಾಗಿ ಕಾಂಗ್ರೆಸ್ ಪರಿವರ್ತನೆ ಹೊಂದುತ್ತಿದೆ.

Advertisement

ಧಾರವಾಡ ಜಿಲ್ಲೆಗೆ ಉಗ್ರರ ನಂಟು ವಿಚಾರ ಮಾತನಾಡಿದ ಅವರು. ಈ ವಿಚಾರದಲ್ಲಿ ಗೃಹ ಇಲಾಖೆ ದೆಹಲಿ ಪೊಲೀಸರ ಜೊತೆ ಸಂಪರ್ಕ‌ ಮಾಡುವ ಮೂಲಕ ಸೂಕ್ತ ತನಿಖೆ ನಡೆಸಬೇಕು. ಕಾಂಗ್ರೆಸ್ ಸರ್ಕಾರ ಈ ರೀತಿ ದೇಶದ್ರೋಹಿ ಕೆಲಸ ಮಾಡುವವರ ಪ್ರಕರಣ ಹಿಂತೆಗೆದುಕೊಂಡರೆ ಈ ರೀತಿ ಉಗ್ರರ ತಾಣವಾಗೋದು‌ ಸಹಜ. ಈ ಕುರಿತು ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇರಿಸಬೇಕೆಂದು ಕೇಂದ್ರ ಸಚಿವ ಜೋಶಿ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next