Advertisement

Shivamogga; ಅಕ್ರಮ ಪಟಾಕಿ ಮಾರಾಟ: ಪೊಲೀಸರಿಂದ ದಾಳಿ

10:26 PM Nov 12, 2023 | Vishnudas Patil |

ಶಿವಮೊಗ್ಗ : ನಗರದ ಗಾಂಧಿ ಬಜಾರ್ ನ ಜನ ವಸತಿ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಭಾನುವಾರ ಪೊಲೀಸರು ದಾಳಿ ನಡೆಸಿದ್ದಾರೆ.

Advertisement

ತಹಶೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ದೊಡ್ಡಪೇಟೆ ಪೊಲೀಸರು ಗಾಂಧಿ ಬಜಾರ್ ನ ರಮೇಶ್ ಎನ್ನುವರ ಅಂಗಡಿ ಮೇಲೆ ದಾಳಿ ನಡೆಸಿದ್ದು ಸಾವಿರಾರು ರೂ ಮೌಲ್ಯದ ಪಟಾಕಿ ವಶಕ್ಕೆ ಪಡೆದಿದ್ದಾರೆ.

ಜಿಲ್ಲಾಡಳಿತ ಅಹಿತಕರ ಘಟನೆಗಳನ್ನು ತಡೆಯಲು ಫ್ರೀಡಂ ಪಾರ್ಕ್ ನಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಿದ್ದು, ಜಿಲ್ಲಾಡಳಿತದ ಆದೇಶ ಇದ್ದರು ಜನ‌ ನಿಬಿಡ ಪ್ರದೇಶದಲ್ಲಿ ಅಕ್ರಮ ಪಟಾಕಿ ಮಾರಾಟ ಮಾಡಲಾಗುತ್ತಿತ್ತು. ಪೊಲೀಸರು ಮತ್ತು ಅಧಿಕಾರಿಗಳು ಹದ್ದಿನ ಕಣ್ಣುಇಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next