Advertisement
ಶಿವಮೊಗ್ಗ ಬಿಜೆಪಿ ಭದ್ರ ಕೋಟೆ. ಸಂಘಟನೆ ವಿಚಾರದಲ್ಲಿ ಸದೃಢವಾಗಿದೆ. ಬಿಜೆಪಿ ಮತದಾರರ ಸೆಳೆಯಲು ಅಭಿವೃದ್ಧಿ-ಹಿಂದುತ್ವದ ವಿಚಾರಗಳನ್ನು ಬಳಸಲು ಮುಂದಾಗಿದೆ. ಕಾಂಗ್ರೆಸ್ ಈ ಬಾರಿ ಆಡಳಿತ ವಿರೋಧಿ ಅಲೆ,
Related Articles
Advertisement
ಬಂಡಾಯಗಾರರ ನಿರೀಕ್ಷೆ: 2008ರಲ್ಲಿ 19,232 ಹಾಗೂ 2013ರ ಚುನಾವಣೆಯಲ್ಲಿ 21,638 ಮತ ಪಡೆದಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರು ಈ ಬಾರಿ ತಟಸ್ಥರಾಗಿದ್ದಾರೆ. 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಿರಂಜನ್ ಅವರು ಕೇವಲ 5796 ಮತ ಪಡೆದು ರಾಜಕೀಯದಿಂದಲೇ ದೂರ ಉಳಿದರು. ಈಗ ಮತ್ತೂಮ್ಮೆ ಎಂ.ಶ್ರೀಕಾಂತ್ ಅವರಿಗೆ ಟಿಕೆಟ್ ಕೊಡಲು ಹೈಕಮಾಂಡ್ ಉತ್ಸುಕವಾಗಿದ್ದರೂ ಶ್ರೀಕಾಂತ್ ಅವರು ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ವೈದ್ಯ ಧನಂಜಯ ಸರ್ಜಿ ಅವರನ್ನು ಜೆಡಿಎಸ್‌ಗೆ ಕರೆತರುವ ಪ್ರಯತ್ನ ಫಲಕೊಡಲಿಲ್ಲ. ಬಂಡಾಯಗಾರರ ನಿರೀಕ್ಷೆಯಲ್ಲಿ ಜೆಡಿಎಸ್ ಇದೆ.
ಈಚೆಗೆ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿ ಕೊಂಡಿರುವ ಆಮ್ ಆದ್ಮಿ ಪಾರ್ಟಿ(ಆಪ್) ವತಿಯಿಂದ ಸಾಮಾಜಿಕ ಕಾರ್ಯಕರ್ತೆ ಋನೇತ್ರಾವತಿ ಗೌಡ, ಮನೋಹರ್ ಗೌಡ ಹೆಸರು ಮುಂಚೂಣಿಯಲ್ಲಿದೆ. ಜೆಡಿಯು, ಸಮಾಜವಾದಿ ಪಕ್ಷದಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಗೆಯೇ ಬಂಡಾಯ ನಿಂತು ಶಿವಮೊಗ್ಗದಲ್ಲಿ ಗೆಲ್ಲುವ ವಾತಾವರಣ ಮೊದಲಿನಿಂದಲೂ ಇಲ್ಲ.
ಕಾಂತೇಶ್‌ಗೆ ಟಿಕೆಟ್ ಕೊಡಿಸಲು ಯತ್ನ?ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆ.ಎಸ್.ಈಶ್ವರಪ್ಪನವರು ಹಾಲಿ ಶಾಸಕರಾಗಿದ್ದು ವಯೋಮಿತಿ ಕಾರಣಕ್ಕೆ ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಚರ್ಚೆಗಳು ಪಕ್ಷದೊಳಗೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಏರುತ್ತಿದೆ. ಮಗ ಕಾಂತೇಶ್‌ಗೆ ಟಿಕೆಟ್ ಕೊಡಿಸಲು ಈಶ್ವರಪ್ಪನವರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸಂಘಟನೆ ಭದ್ರವಾಗಿರುವುದರಿಂದ ಪಕ್ಷ ಪ್ರಯೋಗಕ್ಕೆ ಮುಂದಾಗುವುದೋ ಅಥವಾ ಗೆಲ್ಲುವ ಕುದುರೆ’ ಈಶ್ವರಪ್ಪನವರಿಗೆ ಮತ್ತೊಂದು ಅವಕಾಶ ಕೊಡುವುದೇ ಕುತೂಹಲ ಮೂಡಿಸಿದೆ. -ಶರತ್ ಭದ್ರಾವತಿ