Advertisement

ಇಂಗ್ಲಿಷ್‌ ಮೀಡಿಯಂ ಶಾಲೆಗೆ ಭರ್ಜರಿ ರೆಸ್ಪಾನ್ಸ್‌!

12:09 PM Jun 07, 2019 | Naveen |

ಶಿವಮೊಗ್ಗ: ರಾಜ್ಯ ಸರಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಇಂಗ್ಲಿಷ್‌ ಮೀಡಿಯಂ ಸ್ಕೂಲ್ಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಕೆಲವು ಶಾಲೆಗಳಲ್ಲಿ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ.

Advertisement

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆ ಅನುಕೂಲಕರವಾಗಿರುವ ನಿಟ್ಟಿನಲ್ಲಿ ಪೋಷಕರು ಸರಕಾರಿ ಶಾಲೆಗೆ ಮಕ್ಕಳನು ಕರೆತರುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 30 ಶಾಲೆಗಳಿಗೆ ಅನುಮತಿ ಸಿಕ್ಕಿದ್ದು, ಇನ್ನು ಹೆಚ್ಚಿನ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶುರು ಮಾಡಬೇಕೆಂಬ ಬೇಡಿಕೆ ಬಂದಿದೆ. ಸರಕಾರ ಮೊದಲ ಬಾರಿಗೆ ಸಾವಿರ ಶಾಲೆಗಳಿಗೆ ಮಾತ್ರ ಅನುಮತಿ ಕೊಟ್ಟಿರುವುದರಿಂದ ಜಿಲ್ಲೆಯಲ್ಲಿ 30 ಶಾಲೆಗಳಿಗೆ ಅವಕಾಶ ಸಿಕ್ಕಿದೆ.

ಇಂಗ್ಲಿಷ್‌ಗೆ ಜೈ, ಕನ್ನಡಕ್ಕೆ ಬೈ: ಇಂಗ್ಲಿಷ್‌ ಮಾಧ್ಯಮಕ್ಕೆ 30 ಶಾಲೆಗಳಲ್ಲೂ ದಾಖಲಾತಿ ಆರಂಭವಾಗಿದ್ದರೆ ಕನ್ನಡ ಮಾಧ್ಯಮಕ್ಕೆ 15 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ. ಇಂಗ್ಲಿಷ್‌ ಮಾಧ್ಯಮಕ್ಕೆ ಭದ್ರಾವತಿಯ ಹೊಸ ಸಿದ್ದಾಪುರ ಶಾಲೆಯಲ್ಲಿ 10 ಮಕ್ಕಳು, ದೊಣಬಘಟ್ಟ ಶಾಲೆಯಲ್ಲಿ 4, ಅಂತರಗಂಗೆ ಶಾಲೆಯಲ್ಲಿ 11, ಅರಳಿಹಳ್ಳಿ ಶಾಲೆಯಲ್ಲಿ 8, ಸಾಗರ ತಾಲೂಕಿನ ಹೊಸನಗರ ಶಾಲೆಯಲ್ಲಿ 17, ನಿಟ್ಟೂರು 3, ಅಮೃತ ಶಾಲೆಯಲ್ಲಿ 30, ತೀರ್ಥಹಳ್ಳಿಯ ಕೊಡೂರು ಸರಕಾರಿ ಶಾಲೆಯಲ್ಲಿ 6, ಸಾಗರದ ಆನಂದಪುರ ಶಾಲೆಯಲ್ಲಿ 30, ಸೂರನಗದ್ದೆ ಶಾಲೆಯಲ್ಲಿ 10, ಶಿಕಾರಿಪುರದ ಹಿತ್ತಲ ಶಾಲೆಯಲ್ಲಿ 15, ಕುಸ್ಕೂರು ಶಾಲೆಯಲ್ಲಿ 3, ಶಿರಾಳಕೊಪ್ಪ ಶಾಲೆಯಲ್ಲಿ 10, ಶಿಕಾರಿಪುರದ ಬಾಲಕಿಯರ ಶಾಲೆಯಲ್ಲಿ 15, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೊಮ್ಮನಾಳು 9, ಶೆಟ್ಟಿಹಳ್ಳಿ 30, ಐಹೊಳೆ 25, ಸೂಳೆಬೈಲು 18, ಇವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಎನ್‌.ಟಿ. ರಸ್ತೆಯ ಸರಕಾರಿ ಶಾಲೆಯಲ್ಲಿ 25, ಗಾಡಿಕೊಪ್ಪ 22, ಮಿಳಘಟ್ಟ 5, ಕೆ.ಆರ್‌. ಪುರಂ ಶಾಲೆ 6, ತೀರ್ಥಹಳ್ಳಿ ತಾಲೂಕಿನ ಗಾಜನೂರು ಶಾಲೆಯಲ್ಲಿ 11, ಉಂಬ್ಳೆಬೈಲು ಶಾಲೆಯಲ್ಲಿ 4, ಸೊರಬ ವಿಧಾನಸಭಾ ಕ್ಷೇತ್ರದ ಕಮರೂರು ಶಾಲೆಯಲ್ಲಿ 2, ಜಡೆ ಶಾಲೆಯಲ್ಲಿ 4, ಅನವಟ್ಟಿಯಲ್ಲಿ 8, ತೀರ್ಥಹಳ್ಳಿಯ ಮೇಗರವಳ್ಳಿ ಶಾಲೆಯಲ್ಲಿ 10, ಕೋಣಂದೂರು ಸರಕಾರಿ ಶಾಲೆಯಲ್ಲಿ 19 ಮಂದಿ ದಾಖಲಾಗಿದ್ದಾರೆ.

ಗ್ರಾಮಾಂತರ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ನಗರ ಹಾಗೂ ಪಟ್ಟಣದಲ್ಲಿರುವ ಶಾಲೆಗಳಿಗೆ ಉತ್ತಮ ದಾಖಲಾತಿ ಆಗಿದೆ. 15 ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಶೂನ್ಯ ದಾಖಲಾತಿ ಆಗಿರುವುದು ಕುತೂಹಲ ಮೂಡಿಸಿದೆ. ಜೂನ್‌ ಕೊನೆವರೆಗೂ ದಾಖಲಾತಿಗೆ ಅವಕಾಶವಿರುವುದರಿಂದ ಶೂನ್ಯ ದಾಖಲಾತಿ ಶಾಲೆಗಳೂ ಭರ್ತಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅಕಾರಿಗಳು.

ಗರಿಷ್ಠ 30: ಕೆಲ ಶಾಲೆಗಳಲ್ಲಿ ನಿರೀಕ್ಷೆ ಮೀರಿ ಅರ್ಜಿ ಬಂದಿದ್ದರೂ ಅವುಗಳನ್ನು 30ಕ್ಕೆ ಸೀಮಿತಗೊಳಿಸಲು ಸರಕಾರ ಸೂಚಿಸಿದೆ. ಕೆಲ ಪೋಷಕರಿಗೆ ಇದರಿಂದ ದಿಕ್ಕು ತೋಚದಂತಾಗಿದ್ದು ಶಿಕ್ಷಣ ಇಲಾಖೆ ಮೇಲೆ ಒತ್ತಡ ತರುತ್ತಿದ್ದಾರೆ. 30 ಮಕ್ಕಳಿಗೆ ಬೇಕಾಗುವ ಪಠ್ಯಪುಸ್ತಕ, ಶಿಕ್ಷಕರು ಮಾತ್ರ ಇರುವುದರಿಂದ, ಅಲ್ಲದೇ ಪ್ರಾಯೋಗಿಕ ಹಂತದಲ್ಲಿ ಇರುವುದರಿಂದ 30ಕ್ಕಿಂತ ಹೆಚ್ಚು ಅನುಮತಿ ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಉತ್ತಮ ಪ್ರತಿಕ್ರಿಯೆ ಇದೆ. ಸರಕಾರ 30 ಮಕ್ಕಳಿಗೆ ಮಾತ್ರ ಅವಕಾಶ ನೀಡಿರುವುದರಿಂದ ಹೆಚ್ಚುವರಿ ಅರ್ಜಿಗಳು ಬಂದರೂ ಪಡೆಯಲು ಆಗುತ್ತಿಲ್ಲ. ಕನ್ನಡ ಮಾಧ್ಯಮಕ್ಕೆ ಕೆಲ ಕಡೆ ಶೂನ್ಯ ದಾಖಲಾತಿ ಆಗಿದೆ. ದಾಖಲಾತಿ ಇನ್ನೂ ಅವಕಾಶವಿರುವುದರಿಂದ ಭರ್ತಿಯಾಗಬಹುದು.
ಸುಮಂಗಳ ಕುಚಿನಾಡ,
ಡಿಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next