Advertisement

ಬಿಎಸ್‌ವೈ ತವರಲ್ಲಿ ಅಭಿವೃದ್ಧಿ ಶಕೆಯ ನಿರೀಕ್ಷೆ

11:46 AM Jul 27, 2019 | Team Udayavani |

ಶಿವಮೊಗ್ಗ: ಬಿ.ಎಸ್‌. ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗುತ್ತಿದ್ದಂತೆ ಜಿಲ್ಲೆಯ ಜನರು ಮತ್ತೂಂದು ಅಭಿವೃದ್ಧಿ ಶಕೆ ಎದುರು ನೋಡುತ್ತಿದ್ದಾರೆ.

Advertisement

2007ರಲ್ಲಿ 2ನೇ ಬಾರಿ ಸಿಎಂ ಆಗಿದ್ದ ಬಿಎಸ್‌ವೈ ಅವರು ಜಿಲ್ಲೆಯ ಅಭಿವೃದ್ಧಿ ಚಿತ್ರಣವನ್ನೇ ಬದಲಾಯಿಸಿದ್ದರು. 3 ವರ್ಷ 66 ದಿನಗಳ ಅವಧಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ನಂತರ ಬಂದ ಕಾಂಗ್ರೆಸ್‌ ಸರಕಾರ, ಮೈತ್ರಿ ಸರಕಾರದಿಂದ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಸಾಗಲಿಲ್ಲ. ಈಗ ಮತ್ತೂಮ್ಮೆ ಮುಖ್ಯಮಂತ್ರಿಯಾಗಿರುವುದರಿಂದ ನನೆಗುದಿಗೆ ಬಿದ್ದ ಹಲವು ಯೋಜನೆಗಳು ಚುರುಕುಗೊಳ್ಳುವ ಸಾಧ್ಯತೆ ಇದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಬಿಎಸ್‌ವೈ ಸಿಎಂ ಆಗುತ್ತಾರೆ ಎಂಬ ನಿರೀಕ್ಷೆಯಿಂದ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಆರು ಸ್ಥಾನ ಬಿಜೆಪಿ ಪಾಲಾದವು. ಮೈತ್ರಿ ಸರಕಾರದಲ್ಲಿ ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿಲ್ಲ. ಸಮ್ಮಿಶ್ರ ಸರಕಾರದ ಮೊದಲ ಬಜೆಟ್‌ನಲ್ಲಿ ಜಿಲ್ಲೆಗೆ ಶೂನ್ಯ ಕೊಡುಗೆ ಸಿಕ್ಕಿತ್ತು. ಎರಡನೇ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡಲಾಗಿದ್ದರೂ ಮೂಲ ಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ತೀವ್ರ ನಿರಾಸೆ

ಅಪಾರ ನಿರೀಕ್ಷೆ: ಸಮ್ಮಿಶ್ರ ಮತ್ತು ಬಿಜೆಪಿ ಸರಕಾರದ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರ ಆಡಳಿತವನ್ನು ಕಂಡಿರುವ ಪಕ್ಷದ ಕಾರ್ಯಕರ್ತರು ಮತ್ತು ಜನತೆಯಲ್ಲಿನ ಈ ಕುತೂಹಲ ಸಹಜವಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಪಶು ವೈದ್ಯಕೀಯ ಮಹಾವಿದ್ಯಾಲಯ, ಸರಕಾರಿ ಆಯುರ್ವೇದ ಮಹಾವಿದ್ಯಾಲಯ, ನೂತನ ಜೈಲು, ತುಂಗಾ ಹೊಸ ಸೇತುವೆ, ಕೆಎಸ್‌ಆರ್‌ಟಿಸಿಬಸ್‌ ನಿಲ್ದಾಣ, ಬಿ.ಎಚ್. ರಸ್ತೆ ವಿಸ್ತರಣೆ, ನೆಹರೂ ರಸ್ತೆ, ಸಿಟಿ ಸೆಂಟರ್‌ ಮಾಲ್ ಹಲವು ಸರಕಾರಿ ಇಲಾಖೆಗಳಿಗೆ ನೂತನ ಕಟ್ಟಡಗಳು, ಸೇತುವೆಗಳು ಸೇರಿದಂತೆ ಹಲವು ಯೋಜನೆ, ಕಾಮಗಾರಿಗಳನ್ನು ಜಾರಿಗೊಳಿಸಿದ್ದರು. ಈ ಎಲ್ಲ ಅಭಿವೃದ್ಧಿ ಯೋಜನೆಗಳು ಈಗಲೂ ಜನರ ಮನದಲ್ಲಿವೆ.

ಇದರ ಜತೆಗೆ ವಿಮಾನ ನಿಲ್ದಾಣ, ಸರಕಾರಿ ಆಯುರ್ವೇದ ವೈದ್ಯಕೀಯ ವಿಶ್ವವಿದ್ಯಾಲಯ, ಶಿವಮೊಗ್ಗ ಹೊರ ವರ್ತುಲ ರಸ್ತೆ ಸೇರಿದಂತೆ ಹಲವು ಯೋಜನೆಗಳು ನನೆಗುದಿಗೆ ಬಿದ್ದಿರುವುದೂ ಗೊತ್ತಿದೆ. ಯಡಿಯೂರಪ್ಪ ಅವರು ಮತ್ತೆ ಸಿಎಂ ಗಾದಿಗೆ ಏರಿದಲ್ಲಿ ಇವೆಲ್ಲವೂ ಪೂರ್ಣವಾಗುವುದರ ಜತೆಗೆ ಮತ್ತಷ್ಟು ಅಭಿವೃದ್ಧಿ ಯೋಜನೆಗಳು ಅನುಷ್ಠಾನಕ್ಕೆ ಬರುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾರೆ.

Advertisement

ಮತ್ತೂಂದು ಕಡೆ ರಿಯಲ್ ಎಸ್ಟೇಟ್ ಉದ್ಯಮಿಗಳಂತೂ ಯಡಿಯೂರಪ್ಪ ಅವರ ಅಧಿಕಾರದ ದಿನಗಳಿಗಾಗಿ ಕಾಯುತ್ತಿದ್ದರು. ಈ ಹಿಂದೆ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಶಿವಮೊಗ್ಗದಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಉತ್ತುಂಗ ತಲುಪಿತ್ತು. ಭೂಮಿ ಬೆಲೆ ಗಗನ ತಲುಪಿತ್ತು. ಬಹಳಷ್ಟು ಹೊಸ ಬಡಾವಣೆಗಳು, ವಸತಿ ಸಮುಚ್ಚಯಗಳು ತಲೆ ಎತ್ತಿದ್ದವು. ಅವರು ಅಧಿಕಾರದಿಂದ ಇಳಿದ ಬಳಿಕ ಉದ್ಯಮ ಮತ್ತೆ ಕುಸಿತ ಕಂಡಿತು. ಹೀಗಾಗಿ ಅವರು ಮತ್ತೂಮ್ಮೆ ಅಂತಹದ್ದೇ ಕ್ಷಣಗಳಿಗೆ ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next