ಶಿವಮೊಗ್ಗ: ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ವಿರೋಧಿ ಸಿ ಶನಿವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಸುಂದರೇಶ್ ನೇತೃತ್ವದಲ್ಲಿ ಶಿವಪ್ಪನಾಯಕ ಪ್ರತಿಮೆ ಪಕ್ಕದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸ್ಥಳದಲ್ಲಿ ಸಿಲಿಂಡರ್‌ಗೆ ಹೂವಿನ ಮಾಲೆ ಹಾಕಿ ಪಕ್ಕದಲ್ಲಿ 3 ಸೌದೆ ಒಲೆಯಲ್ಲಿ ಬೋಂಡ ಹಾಗೂ ಹಪ್ಪಳ ಕರಿದು ಮತ್ತು ಟೀ ಮಾಡಿಕೊಂಡು ಪ್ರತಿಭಟನಾಕಾರರು ಸೇವಿಸಿ ವಿನೂತನ ಪ್ರತಿಭಟನೆ ನಡೆಸಿದರು. ತಾತ್ಕಾಲಿಕವಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎನ್ನುವ ಸರ್ಕಾರದ ವರದಿಯ ಜೊತೆ ಜೊತೆಗೆ ಎರಡನೇ ಹಂತದ ಕೊರೊನಾ ಭಾರೀ ವೇಗದಲ್ಲಿ ಹರಡುತ್ತಿದೆ ಎಂದು ಸರ್ಕಾರವೇ ಆತಂಕಗೊಂಡಿರುವ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ದಿನನಿತ್ಯ ಊಟ ಮಾಡಲು ಪರಿದಾಡುವಂತಹ ಕಷ್ಟಕರ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
2 ವಾರಗಳ ಹಿಂದಷ್ಟೇ ಗ್ಯಾಸ್ ದರ ದಿಢೀರನೆ 50 ರೂ. ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದರು. ಒಂದು ವಾರದಲ್ಲಿ 2 ಬಾರಿ ದರ ಏರಿಕೆಯಿಂದಾಗಿ ಗ್ರಾಹಕರಿಗೆ ಶಾಕ್ ನೀಡಿ ಈಗ ಗ್ಯಾಸ್ ದರ 880 ರೂ.ಗೆ ತಲುಪಿದೆ. ಬಡ ಜನತೆ ಕೊಳ್ಳಲಾರದಪರಿಸ್ಥಿತಿಗೆ ತಲುಪಿದ್ದಾರೆ. ಸಿಲಿಂಡರ್‌ಗೆ ಸಬ್ಸಿಡಿ ನೀಡುತ್ತಿದ್ದ ಕೇಂದ್ರ ಸರ್ಕಾರ 6 ತಿಂಗಳಿನಿಂದ ನಿಲ್ಲಿಸಿದೆ. ಆದರೆ ದರ ಏರಿಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ಆರೋಪಿಸಿದರು. ಕಳೆದ 1 ತಿಂಗಳಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕೈಗೆ ನಿಲುಕದಷ್ಟು ಏರಿಕೆಯಾಗಿದೆ. ಈಗಾಗಲೇ ಪೆಟ್ರೋಲ್ ಲೀ.100 ರೂ.ಮುಟ್ಟಿದೆ. ಇದರಿಂದಾಗಿ ವಾಹನ ಸವಾರರಿಗೆ, ಲಾರಿ, ಬಸ್, ಟ್ಯಾಕ್ಸಿ ಮಾಲೀಕರಿಗೆ ದರದ ಬಿಸಿ ತಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್‌ಗೆ ವಿ ಧಿಸಿರುವ ತೆರಿಗೆ ರದ್ದು ಪಡಿಸಬೇಕು ಅಥವಾ ಕಡಿತ ಮಾಡಬೇಕು ಎಂದು ಒತ್ತಾಯಿಸಿದರು.
ಅಗತ್ಯ ವಸ್ತುಗಳಾದ ಅಡುಗೆ ಎಣ್ಣೆ, ಬೇಳೆಕಾಳುಗಳು, ತರಕಾರಿ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಶ್ರೀಸಾಮಾನ್ಯರು ಆತಂಕಗೊಂಡಿದ್ದಾರೆ ಮತ್ತು ಅರೆಹೊಟ್ಟೆಯಲ್ಲಿ ಮಲಗುವ ಪರಿಸ್ಥಿತಿ ಉಂಟಾಗಿದೆ. ಒಟ್ಟಾರೆ ಬಿಜೆಪಿಯವರ ಸಾಧನೆ ಬಡವರ ಪಾಲಿಗೆ ಆತಂಕಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಸುಂದರೇಶ್, ಪಾಲಿಕೆ ಸದಸ್ಯರಾದ ಎಚ್.ಸಿ. ಯೋಗೇಶ್, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ, ಮುಖಂಡರಾದ ಇಸ್ಮಾಯಿಲ್‌ಖಾನ್, ಎಲ್. ರಾಮೇಗೌಡ, ಎಸ್.ಪಿ. ಶೇಷಾದ್ರಿ, ಎನ್. ರಮೇಶ್, ವೈ.ಎಚ್. ನಾಗರಾಜ್, ವಿಶ್ವನಾಥ ಕಾಶಿ, ವಿಜಯಲಕ್ಷಿ¾à ಪಾಟೀಲ್, ಸಿ.ಎಸ್. ಚಂದ್ರಭೂಪಾಲ್, ಎನ್.ಡಿ. ಪ್ರವೀಣ್ ಕುಮಾರ್, ಚಂದನ್, ಸೌಗಂ ಧಿಕ, ಎಚ್.ಪಿ. ಗಿರೀಶ್ ಇನ್ನಿತರರು ಇದ್ದರು.