Advertisement

Karnataka: ಅಪರಾಧ ಪ್ರಕರಣ ವಾಪಸಾತಿಗೆ ಮುಂದಾದ ಸರಕಾರ- ವ್ಯಾಪಕ ಆಕ್ರೋಶ

01:00 AM Oct 04, 2023 | Team Udayavani |

ಬೆಂಗಳೂರು: ಶಿವಮೊಗ್ಗ ಗಲಭೆ ಪ್ರಕರಣ ಹೊಗೆಯಾಡುತ್ತಿರುವಂತೆಯೇ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಹಿಂಪಡೆಯಲು ಸರಕಾರ ಮುಂದಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರವಿದ್ದಾಗ ಪಿಎಫ್ಐ ಸಹಿತ ವಿವಿಧ ಸಂಘಟನೆಗಳ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿತ್ತು. ಈಗ ಹಳೇ ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಪ್ರಕರಣ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಸಹಿತ ಹತ್ತಾರು ಮೊಕದ್ದಮೆಗಳನ್ನು ಹಿಂಪಡೆಯಲು ಕಾಂಗ್ರೆಸ್‌ ನಾಯಕರು ಶಿಫಾರಸು ಪತ್ರ ರವಾನಿಸಿದ್ದಾರೆ. ಈ ಪತ್ರಗಳ ಆಧಾರದಲ್ಲಿ ಸೆಪ್ಟಂಬರ್‌ನಿಂದಲೇ ಹಿಂಪಡೆಯಬಹುದಾದ ಮೊಕದ್ದಮೆಗಳ ಪಟ್ಟಿ ತಯಾರಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ| ಪರಮೇಶ್ವರ್‌, “ಹಳೆಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆಯಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಪತ್ರ ಬರೆದಿದ್ದಾರೆ. ಈ ಬಗ್ಗೆ ಕಾನೂನು ಹಾಗೂ ಇಲಾಖೆಯ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ’ ಎಂದಿದ್ದಾರೆ.

ಸರಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, “ತಮ್ಮ ಬ್ರದರ್ಸ್‌ ವಿರುದ್ಧ ಪ್ರಕರಣಗಳನ್ನು ಹಿಂಪಡೆಯಲು ಪತ್ರ ಬರೆದಿರುವ ಡಿ.ಕೆ. ಶಿವಕುಮಾರ್‌, ರಾಜ್ಯದ ಶಾಂತಿ ಕದಡುವ ಪುಂಡ ಪೋಕರಿಗಳಿಗೆ ಬೆಂಬಲ ನೀಡುತ್ತಿ¨ªಾರೆ’ ಎಂದು ಆರೋಪಿಸಿದ್ದಾರೆ.

ಠಾಣೆ ಮೇಲೆ ದಾಳಿ ಪ್ರಕರಣ
2022ರ ಎ. 16ರ ರಾತ್ರಿ ಹಳೆ ಹುಬ್ಬಳ್ಳಿ ಠಾಣೆ ಮೇಲೆ ನಡೆದಿದ್ದ ದಾಳಿ ಕೇಸನ್ನು ಹಿಂಪಡೆಯುವ ಸಾಧ್ಯತೆಗಳ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕ ತನ್ವೀರ್‌ ಸೇಠ್‌ ಶಿಫಾರಸು ಪತ್ರ ಬರೆದಿದ್ದಾರೆ. ಅಭಿಷೇಕ್‌ ಹಿರೇಮಠ್‌ ಎಂಬವರ ವಾಟ್ಸ್‌ಆ್ಯಪ್‌ ಪೋಸ್ಟ್‌ನಿಂದ ಧರ್ಮನಿಂದನೆಯಾಗಿದೆ ಎಂದು ದೂರು ಕೊಡಲು ಬಂದಿದ್ದ ಮೊಹಮ್ಮದ್‌ ಮತ್ತಿತರರು ಪೊಲೀಸರೊಂದಿಗೆ ಚರ್ಚಿಸುತ್ತಿರುವಾಗಲೇ 100-150 ಮಂದಿ ಠಾಣೆ ಮುಂದೆ ಜಮಾಯಿಸಿ ದಾಳಿ ನಡೆಸಿದ್ದರು. ಪೊಲೀಸರ ಮೇಲೆ ಹಲ್ಲೆ ನಡೆಸಿ, ಚಪ್ಪಲಿ, ಕಲ್ಲು ತೂರಾಟ, ವಾಹನಗಳ ಧ್ವಂಸದಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲಾಗಿತ್ತು. ಈ ಸಂಬಂಧ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.

Advertisement

ಇನ್ನೊಂದೆಡೆ ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಮ್ಯಾಜಿಸ್ಟೀರಿಯಲ್‌ ವಿಚಾರಣ ವರದಿಯನ್ನು ಸರಕಾರ ಸೆ. 27ರಂದು ಅಂಗೀಕರಿಸಿದೆ. ಆದರೆ ಸೆ. 29ರಂದು ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು ಈ ಪ್ರಕರಣ ಹಿಂಪಡೆಯಲು ಅಗತ್ಯ ದಾಖಲೆ ಒದಗಿಸುವಂತೆ ಕೇಳಲಾಗಿದೆ. ಸಾಲದ್ದಕ್ಕೆ ಹೀಗೆ ಹಿಂಪಡೆಯಬಹುದಾದ ಮೊಕದ್ದಮೆಗಳ ಪಟ್ಟಿ ತಯಾರಿಸಿ, ಸೆ. 30ರಂದು ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯನ್ನೂ ನಡೆಸಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪತ್ರದಲ್ಲಿ ಏನಿದೆ?
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಅಪರಾಧ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆ ಯುವ ಕುರಿತು ನಿಯಮಾನುಸಾರ ಪರಿಶೀಲಿಸಿ, ಸ್ಪಷ್ಟ ಅಭಿಪ್ರಾಯ ಸಮರ್ಥಿಸುವ ಪೂರಕ ಮಾಹಿತಿ ಸಲ್ಲಿಸಬೇಕು. ಸರಕಾರದ ನಿಗದಿತ ಪಟ್ಟಿಯಲ್ಲಿರುವ 15 ಅಂಶಗಳನ್ನು ಒಳಗೊಂಡ ಅಭಿಪ್ರಾಯ ತಿಳಿಸಬೇಕು. ಪ್ರಕರಣದ ಪ್ರಥಮ ವರ್ತಮಾನ ವರದಿ, ದೋಷಾರೋಪಣ ಪಟ್ಟಿ, ಸಾಕ್ಷಿಗಳ ಹೇಳಿಕೆಗಳನ್ನು ಕಳುಹಿಸಿ ಕೊಡ ಬೇಕು ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಿದೆ.

ಪತ್ರ ಬರೆದ ತತ್‌ಕ್ಷಣ ಕೇಸ್‌ ವಾಪಸ್‌ ತೆಗೆದುಕೊಳ್ಳಲ್ಲ: ಪರಂ
ತುಮಕೂರು: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ತೆಗೆದುಕೊಳ್ಳಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಪತ್ರ ಬರೆದಿದ್ದಾರೆ. ಸಾಕಷ್ಟು ಶಾಸಕರು ಪತ್ರ ಬರೆಯುತ್ತಾರೆ. ಡಿ.ಕೆ. ಶಿವಕುಮಾರ್‌ ಅವರು ಪತ್ರ ಬರೆದ ತತ್‌ಕ್ಷಣವೇ ಸರಕಾರ ಕೇಸ್‌ ವಾಪಸ್‌ ತೆಗೆದುಕೊಳ್ಳುವುದಿಲ್ಲ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈ ಬಗ್ಗೆ ಕಾನೂನು ಹಾಗೂ ಇಲಾಖೆ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ. ಕೇಸ್‌ ವಾಪಸ್‌ ಪರಿಶೀಲನೆಗೆ ಒಂದು ಪದ್ಧತಿಯಿದೆ. ಅದಕ್ಕಾಗಿ ಕ್ಯಾಬಿನೇಟ್‌ ಸಬ್‌ ಕಮಿಟಿ ಮಾಡಿ¨ªಾರೆ. ಕಮಿಟಿಯಲ್ಲಿ ಕಾನೂನು ತಜ್ಞರಿರುತ್ತಾರೆ. ಅಲ್ಲಿ ಚರ್ಚಿಸಲಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಇದನ್ನು ತೆಗೆಯಬಾರದು, ತೆಗೆಯಬಹುದು ಅನ್ನುವುದನ್ನು ನಮಗೆ ತಿಳಿಸುತ್ತಾರೆ. ಈ ಕಮಿಟಿಯಲ್ಲಿ ಗೃಹ ಸಚಿವರೇ ಅಧ್ಯಕ್ಷರಿರುತ್ತಾರೆ. ಅಲ್ಲಿಯೂ ತೆಗೆಯಬಹುದು ಎಂದಾದರೆ ಮತ್ತೆ ಕ್ಯಾಬಿನೇಟ್‌ನಲ್ಲಿ ಇಡಲಾಗುತ್ತದೆ. ಅಲ್ಲಿ ಸರಿ ಇದ್ದರೆ ಕೇಸ್‌ ತೆಗೆಯುತ್ತಾರೆ, ಇಲ್ಲದಿದ್ದರೆ ವಾಪಸ್‌ ಕಳುಹಿಸಲಾಗುತ್ತದೆ ಎಂದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಗಳನ್ನು ಹಿಂಪಡೆಯುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ. ಈ ಸಂಬಂಧ ವಕೀಲರು ಮತ್ತು ಹೋರಾಟಗಾರರು ಪತ್ರ ಬರೆದಿದ್ದಾರೆ. ಅದರ ಆಧಾರದಲ್ಲಿ ಡಿ.ಕೆ. ಶಿವಕುಮಾರ್‌ ಪತ್ರ ರವಾನಿಸಿದ್ದಾರೆ. ಯಾರೇ ಕೋಮುಗಲಭೆ ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಹಳೇ ಹುಬ್ಬಳ್ಳಿ ಗಲಭೆ, ಡಿ.ಜೆ. ಹಳ್ಳಿ-ಕೆ.ಜಿ. ಹಳ್ಳಿ ಗಲಭೆ ಸಹಿತ ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯುವುದು ಖಂಡನೀಯ. ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ 4 ತಿಂಗಳಲ್ಲೇ ತುಷ್ಟೀಕರಣ ರಾಜಕಾರಣ ಪರಾಕಾಷ್ಠೆಗೆ ತಲುಪಿದೆ. ಹೀಗೆ ಮಾಡಿದರೆ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತೆ ಆಗಲಿದೆ.
– ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next