Advertisement

Shivamogga: ಸಿಡಿಮದ್ದು ಸ್ಪೋಟಗೊಂಡು ಇಬ್ಬರಿಗೆ ಗಾಯ

02:43 PM Feb 18, 2024 | Team Udayavani |

ಶಿವಮೊಗ್ಗ: ಸಿಡಿಮದ್ದು ಸ್ಪೋಟಗೊಂಡು ಇಬ್ಬರಿಗೆ ಗಾಯಗಳಾದ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಫೆ. 18ರ ಭಾನುವಾರ ಸಂಭವಿಸಿದೆ.

Advertisement

ಶಿರಾಳಕೊಪ್ಪದಲ್ಲಿನ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದ್ದು, ಹಾವೇರಿಯ ಕುಟುಂಬವೊಂದು ಸಂತೆಗಾಗಿ ಬಂದಿದ್ದ ಸಂದರ್ಭ ಅವರು ಸಿಡಿಮದ್ದು ತಂದಿದ್ದರು. ಸಂತೆಯ ವೇಳೆ ಸಿಡಿಮದ್ದನ್ನು ಅಂಗಡಿ ಬಳಿ ಇಟ್ಟಿದ್ದು, ಈ ವೇಳೆ ಸಿಡಿಮದ್ದು ಏಕಾಏಕಿ ಸ್ಫೋಟಗೊಂಡಿದೆ.

ಹಾವೇರಿಯ ಉಮೇಶ್ ಹಾಗೂ ರೂಪ ದಂಪತಿ ತಂದಿದ್ದ ಬ್ಯಾಗ್ ನಲ್ಲಿ ಕಾಡುಪ್ರಾಣಿಗಳ ಬಲಿಗೆ ಬಳಸುವ ಸಿಡಿಮದ್ದು ತಂದಿದ್ದರು.

ಈ ಘಟನೆಯ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಪೋಟಗೊಂಡ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next