ಸೊರಬ: ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಖ್ಯಾತ ವಾಗ್ಮಿ, ತಾಳಮದ್ದಲೆ ಅರ್ಥಧಾರಿ ಮಹಾಬಲೇಶ್ವರ ಎ. ಹೆಗಡೆ ದಂಟ್ಕಲ್ (ಎಂ.ಎ. ಹೆಗಡೆ) ಅವರ ನಿಧನದಿಂದ ಯಕ್ಷಗಾನ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ಸೊರಬ ಯಕ್ಷ ರಂಗ ಬಳಗ ಸಂತಾಪ ಸೂಚಿಸಿದೆ.
ಹೆಸರಿಗೆ ತಕ್ಕಂತೆ ಯಕ್ಷಗಾನ ಕ್ಷೇತ್ರದಲ್ಲಿ “ಮaಹಾಬಲ’ನಾಗಿ ಮೆರೆದ ಅವರ ಅಗಲಿಕೆ ಅಭಿಮಾನಿಗಳಿಗೆ ಆಘಾತ ತಂದೊಡ್ಡಿದೆ. ಕಳೆದ ಅವ ಧಿಯಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಅವರು ಮತ್ತೂಂದು ಅವ ಧಿಗೆ ಮುಂದುವರಿದಿದ್ದರು.
ಇಳಿ ವಯಸ್ಸಿನಲ್ಲೂ ಯಕ್ಷಗಾನ, ತಾಳಮದ್ದಲೆ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡ ಹೆಗ್ಗಳಿಕೆ ಅವರ ಪಾಲಿಗಿತ್ತು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಯಕ್ಷಗಾನ ಕಲಾವಿದ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಡಾ| ಎಂ.ಕೆ. ಭಟ್, ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ದಿವಾಕರ ಭಾವೆ, ಷಣ್ಮುಖಾಚಾರ್, ಸತ್ಯನಾರಾಯಣ ರಾವ್, ದಿನಕರ ಭಟ್ ಭಾವೆ, ದತ್ತಾತ್ರೇಯ ಪುರಾಣಿಕ್, ಕಾಳಿಂಗರಾಜ್, ಸೈಯದ್ ಅನ್ಸರ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಯವರು ಸಂತಾಪ ಸೂಚಿಸಿದ್ದಾರೆ.