Advertisement

ಕ್ಷಯ ರೋಗಕ್ಕಿದೆ ಉಚಿತ ಚಿಕಿತ್ಸೆ

06:56 PM Mar 25, 2021 | Shreeraj Acharya |

ಸೊರಬ: ಕ್ಷಯರೋಗವು ಬಹಳ ಪುರಾತನ ಕಾಯಿಲೆಯಾದರೂ ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಹೊರ ಬಂದು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಡಾ| ಎಂ.ಕೆ. ಭಟ್‌ ಹೇಳಿದರು.

Advertisement

ಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯ ರೋಗ ನಿಯಂತ್ರಣ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಲಯನ್ಸ್‌ ಕ್ಲಬ್‌, ರೋಟರಿ ಕ್ಲಬ್‌, ಜೆಸಿಐ, ಯುವಾ ಬ್ರಿಗೇಡ್‌, ಎಸ್‌ಐಒ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾಲೂಕು ಆರೋಗ್ಯಾ ಧಿಕಾರಿ ಡಾ| ಅಕ್ಷತಾ ವಿ. ಖಾನಾಪುರ ಮಾತನಾಡಿ, ಎರಡು ವಾರಗಳಿಗಳಿಗೂ ಹೆಚ್ಚು ದಿನ ಕೆಮ್ಮ, ಎದೆ ನೋವು, ಹಸಿವಾಗದೆ ಇರುವುದು, ಸಂಜೆಯ ವೇಳೆ ಜ್ವರ ಕಾಣಿಸಿಕೊಳ್ಳುವುದು. ಕಫದಲ್ಲಿ ರಕ್ತ ಬೀಳುವುದು ಕಾಣಿಸಿಕೊಂಡರೆ ಅದು ಕ್ಷಯ ರೋಗದ ಲಕ್ಷಣಗಳಾಗಿರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನು ಕಾಣಬೇಕು. ಕ್ಷಯ ರೋಗ ತಪಾಸಣೆ ಮತ್ತು ಚಿಕಿತ್ಸೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ ಎಂದರು. ತಾಪಂ ಪ್ರಭಾರ ಇಒ ಕೆ.ಜಿ. ಕುಮಾರ್‌ ಜಾಥಾಕ್ಕೆ ಚಾಲನೆ ನೀಡಿದರು.

ಕ್ಷಯ ರೋಗ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಎಚ್‌. ಅಕ್ಷಯ, ಸಾರ್ವಜನಿಕ ಆಸ್ಪತ್ರೆಯ ಡಾ.ಆಫಿಫಾ ಆರೀಫ್‌, ಡಾ. ಛಾಯಾ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರಭಾಕರ ಗೋಖಲೆ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ್‌ ಗೌಡ, ಜೆಸಿಐ ಸೊರಬ ವೈಜಯಂತಿ ಅಧ್ಯಕ್ಷ ಮಂಜುನಾಥ ಗುತ್ತಿ, ಕಾಳಿಂಗರಾಜ್‌, ವಾಸುದೇವ ಬೆನ್ನೂರು, ಯುವಾ ಬ್ರಿಗೇಡ್‌ನ‌ ಮಹೇಶ್‌ ಖಾರ್ವಿ, ಲೋಕೇಶ್‌, ರಂಗನಾಥ ಮೊಗವೀರ, ವಿನೋದ್‌ ವಾಲ್ಮಿಕಿ, ಕೃಷ್ಣ ಮೊಗವೀರ್‌, ರಾಘವೇಂದ್ರ, ಮಂಜು, ಅನಿಲ್‌ ಮಾಳವಾದೆ, ಎಸ್‌. ರಾಘವೇಂದ್ರ, ರೇಣುಕಮ್ಮ ಗೌಳಿ, ಮುಹಮ್ಮದ್‌ ಉಮೇರ್‌, ಸೈಯದ್‌ ಜಿಯಾ, ಸೈಯದ್‌ ಅಖೀಲ್‌, ಸೈಯದ್‌ ಸುಹೇಬ್‌, ಮುಹಮ್ಮದ್‌ ರೇಹಾನ್‌, ಹಸೀನಾ, ಶಶಿ, ಮಂಜು, ಸುರೇಶ್‌, ಸೋಮಶೇಖರ್‌ ಸೇರಿದಂತೆ ಇತರರಿದ್ದರು.

ಓದಿ : ಕಾಂಗ್ರೆಸ್‌ ಸಂಘಟನೆಗೆ ಶ್ರಮಿಸುವೆ: ಚೇತನ್‌ ದೊರೆರಾಜ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next