Advertisement

ರಾಮ ಮಂದಿರ ನಿರ್ಮಾಣ ಎಲ್ಲರ ಸೌಭಾಗ್ಯ

07:00 PM Feb 08, 2021 | Shreeraj Acharya |

ಭದ್ರಾವತಿ: ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಬಿಳಕಿ ಹಿರೇಮಠದ
ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ನಿ ಧಿ ಸಂಗ್ರಹಣಾ ಅಭಿಯಾನದ ಸಮಾರೋಪ ಮೆರವಣಿಗೆಯಲ್ಲಿ ಭಾಗವಹಿಸಿ ಮಾಧವಾಚಾರ್‌ ವೃತ್ತದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ಅಸಂಖ್ಯಾತ ಜನರು, ಸಾಧು- ಸಂತರು ಶ್ರಮಿಸಿದ್ದು ಅವರೆಲ್ಲರ ಹಾಗೂ ನಮ್ಮೆಲ್ಲರ ಬಹುವರ್ಷಗಳ ಕನಸು ನನಸಾಗುವ ಕಾಲ ಬಂದಿರುವುದು ನಮ್ಮೆಲ್ಲರಿಗೂ ಬಹಳ ಸಂತೋಷವಾಗಿದೆ. ಇದಕ್ಕಾಗಿl ನಾವೆಲ್ಲರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸಬೇಕು. ಆದಷ್ಟು ಶೀಘ್ರವಾಗಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಲಿ ಎಂದು ನಾವೆಲ್ಲರೂ ಭಗವಂತನಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸೊಣ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಪ್ರಭಾಕರ್‌ ಮಾತನಾಡಿ, ಹಿಂದೆ ರಾಮಜನ್ಮಭೂಮಿಯ ಸ್ಥಳದಲ್ಲಿ ನಡೆದ ಕರಸೇವೆಯಲ್ಲಿ ಭದ್ರಾವತಿಯ ಅನೇಕರು ಭಾಗವಹಿಸಿದ್ದರು. ಈಗ ಆರಂಭವಾಗಲಿರುವ ರಾಮ ಮಂದಿರ ನಿರ್ಮಾಣ ಕಾರ್ಯ ಶೀಘ್ರವಾಗಿ ಪೂರ್ಣಗೊಂಡು, ನಾವೆಲ್ಲರೂ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದರು.

ಹೊಸಮನೆ ಶಿವಾಜಿ ವೃತ್ತದಿಂದ ಶ್ರೀರಾಮಚಂದ್ರ ದೇವರ ಮೂರ್ತಿಯನ್ನು ರಜತ ಕುದುರೆ ಸಾರೋಟು ವಾಹದಲ್ಲಿರಿಸಿ ನಿಧಿ
ಸಂಗ್ರಹಣಾ ಅಭಿಯಾನದ ಮೆರವಣಿಗೆಯನ್ನು ಆರಂಭಿಸಲಾಯಿತು. ಹೊಸನಮನೆ ಮುಖ್ಯ ರಸ್ತೆ, ರಂಗಪ್ಪ ವೃತ್ತ, ಚೆನ್ನಗಿರಿ ರಸ್ತೆ, ಡಾ| ರಾಜ್‌ಕುಮಾರ್‌ ರಸ್ತೆ, ಮಾಧವಾಚಾರ್‌ ವೃತ್ತ, ಹಳೇಸೇತುವೆ, ಹಾಲಪ್ಪ ವೃತ್ತ, ಬಿ.ಎಚ್‌. ರಸ್ತೆ ಮೂಲಕ ಸಾಗಿದ ಮೆರವಣಿಗೆ ಅಂಡರ್‌ ಬ್ರಿಡ್ಜ್ ಬಳಿಯಿರುವ ಅಂಬೇಡ್ಕರ್‌ ವೃತ್ತದ ಬಳಿ ಮುಕ್ತಾಯವಾಯಿತು. ಮೆರವಣಿಗೆಯಲ್ಲಿ ಬಿಜೆಪಿ ವಿಶ್ವ ಹಿಂದೂ ಪರಿಷತ್‌ ರಾಜ್ಯ ಸಂಚಾಲಕ ಹಾ. ರಾಮಪ್ಪ, ಮುಖಂಡರಾದ ಶ್ರೀನಾಥ್‌, ಧರ್ಮಪ್ರಸಾದ್‌, ಮಂಗೋಟೆ ರುದ್ರೇಶ್‌, ಆನಂದಕುಮಾರ್‌, ವಿಶ್ವನಾಥ್‌, ಸುಬ್ಬಣ್ಣ, ಕೃಷ್ಣಮೂರ್ತಿ, ವಿಜಯ್‌, ಡಾ| ದತ್ತ, ಭಜರಂಗದಳದ ಕೃಷ್ಣ, ಸವಾಯ್‌ಸಿಂಗ್‌, ಸುದರ್ಶನ್‌,ನರಸಿಂಹಾಚಾರ್‌ ಸೇರಿದಂತೆ ಅನೇಕ
ಮಹಿಳೆಯರು, ಪುರುಷರು ಭಾಗವಹಿಸಿದ್ದರು. ಯುವಕರು ಶ್ರೀರಾಮನ ಹಾಡನ್ನು ಹಾಡುತ್ತಾ ನರ್ತಿಸಿದರು. ಮೆರವಣಿಗೆಯ ಮಾರ್ಗದಲ್ಲಿನ ಅಂಗಡಿ- ಮುಂಗಟ್ಟುಗಳ ವ್ಯಾಪಾರಿಗಳು, ನಾಗರಿಕರು ಮಂದಿರ ನಿರ್ಮಾಣದ ನಿಧಿ ಗೆ ದೇಣಿಗೆ ನೀಡಿದರು.

Advertisement

ಓದಿ: ಕಂಗನಾ ರಾಣಾವತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು: ಪಾಟೀಲ್

 

Advertisement

Udayavani is now on Telegram. Click here to join our channel and stay updated with the latest news.

Next