Advertisement

ಮಲೆನಾಡಲ್ಲಿ ನಿರಂತರ ಮಳೆ

06:40 PM Jul 19, 2021 | Shreeraj Acharya |

ಶಿವಮೊಗ್ಗ: ಜಿಲ್ಲಾದ್ಯಂತ ಶನಿವಾರ ರಾತ್ರಿಯಿಂದಲೇ ಪುನರ್ವಸು ಮಳೆ ಆರ್ಭಟ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಲೆನಾಡು ಈಗ ಮಳೆನಾಡಾಗಿ ಮಾರ್ಪಟ್ಟಿದೆ. ವೀಕೆಂಡ್‌ನ‌ಲ್ಲಿ ಮನೆಯಿಂದ ಹೊರಗೆ ಹೋಗುವ ಪ್ಲಾನ್‌ನಲ್ಲಿದ್ದವರಿಗೆ ಮಳೆರಾಯ ಮನೆಯಲ್ಲೇ ಇರುವಂತೆ ಮಾಡಿದ್ದಾನೆ. ಪುನರ್ವಸು ಮಳೆ ಭಾನುವಾರ ಅಂತ್ಯಗೊಳ್ಳಲಿದ್ದು ಸೋಮವಾರದಿಂದ ಪುಷ್ಯ ಮಳೆ ಆರಂಭವಾಗಲಿದೆ.

Advertisement

ಹವಾಮಾನ ಇಲಾಖೆ ವರದಿ ಪ್ರಕಾರ ಸೋಮವಾರ ಕೂಡ ಭಾರೀ ಮಳೆ ಇದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಹೊರಟಿರುವ ಮಕ್ಕಳಿಗೆ ತೊಡಕಾಗುವ ಸಂಭವ ಇದೆ. ಹೊಸನಗರ, ತೀರ್ಥಹಳ್ಳಿ, ಸಾಗರ ಭಾಗದಲ್ಲಿ ಮಳೆ ರಭಸದಿಂದ ಕೂಡಿದ್ದು ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಸೊರಬದಲ್ಲೂ ಮಳೆ ಸುರಿಯುತ್ತಿದೆ.

ಸಂಚಾರ ದುರ್ಬರ: ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಗಳಿಂದ ಜನ ಮೊದಲೇ ಹೈರಾಣಾಗಿದ್ದು ಮಳೆ ಬಂತೆಂದರೆ ಕೆಸರು ರಾಡಿ, ಎಲ್ಲೆಂದರಲ್ಲಿ ವಾಹನಗಳು ಸಿಕ್ಕಿಕೊಳ್ಳುವುದು ಮಾಮೂಲಿಯಾಗಿದೆ. ಎಷ್ಟೋ ಕಡೆ ಕಾಮಗಾರಿ ನಡೆಸುವ ಸೂಚನಾ ಫಲಕಗಳಿಲ್ಲದೇ ರಸ್ತೆ ಕೊನೆವರೆಗೂ ಬಂದು ವಾಪಸ್‌ ಹೋಗಬೇಕಿದೆ. ಸ್ಮಾರ್ಟ್‌ಸಿಟಿ ಅಧಿ  ಕಾರಿಗಳಿಗೆ ಎಷ್ಟೇ ದೂರು ಬಂದರೂ ತಲೆಕೆಡಿಸಿಕೊಂಡಿಲ್ಲ.

ಲಾಕ್‌ಡೌನ್‌ ಅವ  ಧಿಯಲ್ಲಿ ಮಲಗಿದ್ದ ಅಧಿ ಕಾರಿಗಳು ಮಳೆಗಾಲದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ನಗರದಲ್ಲಿ ಅತಿ ಹೆಚ್ಚು ವಾಹನಗಳು ಓಡಾಡುವ ಕುವೆಂಪು ರಸ್ತೆ, ಬಾಲರಾಜ್‌ ಅರಸ್‌ ರಸ್ತೆ, ಹಳೇ ಜೈಲು ರಸ್ತೆಗಳಲ್ಲಿ ಎರಡು ಬದಿಯಲ್ಲಿ ಗುಂಡಿ ತೋಡಲಾಗಿದ್ದು ಈ ರಸ್ತೆಗಳನ್ನು ದಾಟುವುದು ನರಕವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next