Advertisement

ವಿವಿ ಸಾಗರಕ್ಕೆ ನೀರು ಹರಿಸುವುದು ನಿಲ್ಲಿಸಿ

10:16 PM Jul 11, 2021 | Shreeraj Acharya |

ಶಿವಮೊಗ್ಗ: ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಒಕ್ಕೂಟ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ಭದ್ರಾ ಜಲಾಶಯದಲ್ಲಿ ನೀರು ಕಡಿಮೆ ಸಂಗ್ರಹವಾಗಿದೆ. ಜು. 9 ರಂದು ಕೇವಲ 155.9 ಅಡಿ ಮಾತ್ರ ನೀರಿದೆ. ಡೆಡ್‌ ಸ್ಟೋರೇಜ್‌, ಬೇಸಿಗೆಗೆ ಕುಡಿಯುವ ನೀರು ಇವೆಲ್ಲವೂ ಸೇರಿದರೆ ಕೇವಲ 28 ದಿನಗಳಿಗಾಗುವಷ್ಟು ಮಾತ್ರ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವುದು ಸೂಕ್ತವಲ್ಲ ಎಂದರು.

ತುಂಗಾ ನದಿಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಅಲ್ಲದೇ ಯಥೇತ್ಛವಾಗಿ ಹರಿದು ಹೋಗುತ್ತಿದೆ. ಇಲ್ಲಿಂದ 17.4 ಟಿಎಂಸಿ ನೀರೆತ್ತುವ ಯೋಜನೆ ವಿಳಂಬವಾಗುತ್ತಿದ್ದು, ಅದನ್ನು ಪೂರ್ಣಗೊಳಿಸಬೇಕು. ಆಗ ಭದ್ರಾ ಜಲಾಶಯದಿಂದ ನೀರು ಹರಿಸುವ ಬಗ್ಗೆ ಯೋಚಿಸಬಹುದಾಗಿದೆ. ಮತ್ತು ಭದ್ರಾ ತುಂಬದ ಹೊರತು ವಿವಿಸಾಗರಕ್ಕೆ ನೀರು ಹರಿಸಬಾರದು. ಇಷ್ಟಾಗಿಯೂ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೇ ನೀರು ಹರಿಸಲು ಮುಂದಾದರೆ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನೀರು ಬಳಕೆದಾರರ ಒಕ್ಕೂಟ ಮತ್ತು ರೈತ ಸಂಘದ ಮುಖಂಡರಾದ ಅತ್ತಿಗುಂದ ಆರ್‌. ಶ್ರೀನಿವಾಸ್‌, ಕೆ. ದೇವೇಂದ್ರಪ್ಪ, ಜಿ.ಎಂ. ಚನ್ನಬಸಪ್ಪ, ಎಸ್‌. ಶಿವಮೂರ್ತಿ, ಕೆ. ರಾಘವೇಂದ್ರ, ಎಚ್‌.ಎಂ. ಚಂದ್ರಪ್ಪ, ಮಲ್ಲಿಕಾರ್ಜುನ, ದೇವೇಂದ್ರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next