Advertisement

ರಸ್ತೆ ಅಗಲೀಕರಣ ಸಮರ್ಪಕವಾಗಿರಲಿ: ಈಶ್ವರಪ್ಪ

11:08 PM Jun 25, 2021 | Shreeraj Acharya |

ಭದ್ರಾವತಿ: ಸಾರ್ವಜನಿಕ ಉಪಯೋಗಕ್ಕೆ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ‌ ಅಗತ್ಯವಾದಲ್ಲಿ ಖಾಸಗಿ ಸ್ವತ್ತುಗಳನ್ನು ಅದರ ಮಾಲೀಕರಿಗೆ ನಿಗ ದಿತ ಪರಿಹಾರ ನೀಡಿ ಅದನ್ನು ಕಾಮಗಾರಿಗಾಗಿ ವಶಪಡಿಸಿಕೊಳ್ಳುವುದು ನ್ಯಾಯಸಮ್ಮತವಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ನಗರದ ರಂಗಪ್ಪ ವೃತ್ತದ ಬಳಿ ಕೋರ್ಟ್‌ ಮುಂಭಾಗದ ರಸ್ತೆಯ ಅಗಲೀಕರಣದ ಕಾಮಗಾರಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ರಸ್ತೆ ವಿಸ್ತೀರ್ಣ ಕಾರ್ಯ ಸಮರ್ಪಕವಾಗಿ ಆಗುವಂತೆ ಮಾಡಬೇಕೆಂದು ಭದ್ರಾವತಿ ವಕೀಲರ ಸಂಘ ಸಾರ್ವಜನಿಕ ಹಿತಾಸಕ್ತಿಯಿಂದ ನಡೆಸಿದ ಹೋರಾಟ ಹಾಗೂ ಮನವಿಗೆ ಪೂರಕವಾಗಿ ಸಮಸ್ಯೆಯ ಇತ್ಯರ್ಥಕ್ಕಾಗಿ ಗುರುವಾರ ವಕೀಲರ ಸಂಘದ ಪದಾಧಿಕಾರಿಗಳ ಹಾಗೂ ರಸ್ತೆ ಅಗಲೀಕರಣದ ಕಾಮಗಾರಿಗೆ ತೊಡಕಾಗಿರುವ ಕೋರ್ಟ್‌ ಮುಂದಿನ ಕೆಲವು ಕಟ್ಟಡಗಳ ಮಾಲೀಕರ ಜಂಟಿಸಭೆಯನ್ನು ವಿಐಎಸ್‌ಎಲ್‌ ಅತಿಥಿಗೃಹದಲ್ಲಿ ನಡೆಸಿ ಉಭಯ ಪಕ್ಷಗಾರರ ಮಾತನ್ನು ಆಲಿಸಿ ಅವರು ಮಾತನಾಡಿದರು.

ಕೋರ್ಟ್‌ ಮುಂದಿನ ರಸ್ತೆ ಅಗಲೀಕರಣವಾಗ ಬೇಕೆಂಬ ವಕೀಲರ ಸಂಘದ ಸಾಮಾಜಿಕ ಕಳಕಳಿ ಸಮರ್ಥನೀಯವಾಗಿದೆ. ಅದೇ ರೀತಿ ರಸ್ತೆ ಅಗಲೀಕರಣಕ್ಕೆ ಅಲ್ಲಿನ ರಸ್ತೆ ಬದಿಯ ಯಾವ ಕಟ್ಟಡಗಳನ್ನು ತೆರವುಗೊಳಿಸಬೇಕಾಗುತ್ತದೆಯೋ ಅಂತಹ ಖಾಸಗಿ ವ್ಯಕ್ತಿಗಳಿಗೆ ನಿಗ ದಿತ ಪರಿಹಾರ ನೀಡಬೇಕೆನ್ನುವ ಬೇಡಿಕೆ ಸಹ ಸರಿಯಾದುದು ಎಂದರು.

ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್‌ ಹಾಗೂ ವಕೀಲರಾದ ಕೆ.ಎನ್‌. ಶ್ರೀಹರ್ಷ, ಕೆ.ಎಸ್‌. ಸುಧಿಧೀಂದ್ರ, ಮಂಗೋಟೆ ರುದ್ರೇಶ್‌ ಮಾತನಾಡಿ, ರಸ್ತೆ ಅಗಲೀಕರಣ ಅಸಮರ್ಪಕವಾಗಿದೆ. ರಸ್ತೆ ಅಗಲೀಕರಣದ ನೆಪದಲ್ಲಿ ಸಾಲುಮರಗಳನ್ನು ಕಡಿದು, ರಸ್ತೆಯನ್ನೂ ಸಹ ಸರಿಯಾಗಿ ಅಗಲೀಕರಣ ಮಾಡದಿರುವ ಕಾರಣ ವಕೀಲರ ಸಂಘ ಸರ್ವಜನಿಕವಾಗಿ ಪ್ರತಿಭಟನೆ ನಡೆಸಿ ವರ್ಷ ಕಳೆದರೂ ಈ ಸಮಸ್ಯೆ ಬಗೆಹರಿಸಿಲ್ಲ. ಈಗ ತಾಲೂಕು ಕಚೇರಿ ಮುಂಭಾಗದವರೆಗೆ ಮಾಡಿರುವ ರಸ್ತೆ ಅಗಲೀಕರಣದ ವಿಸ್ತೀರ್ಣವನ್ನೇ ಮುಂದುವರಿಸಿ ಕೋರ್ಟ್‌ ಮುಂಭಾಗದ ರಸ್ತೆ ಸಮರ್ಪಕವಾಗಿ ಅಗಲೀಕರಣ ಮಾಡಬೇಕು ಎಂದರು.

ಜಿಲ್ಲಾ ಧಿಕಾರಿ ಶಿವಕುಮಾರ್‌, ನಗರಸಭೆ ಆಯುಕ್ತ ಪರಮೇಶ್‌, ತಹಶೀಲ್ದಾರ್‌ ಸಂತೋಷ್‌ ಕುಮಾರ್‌, ಡಿವೈಎಸ್‌ಪಿ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಂಡಕಿ ಇದ್ದರು.

Advertisement

ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪ್ರಭಾಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ಶ್ರೀನಾಥ್‌, ವಕೀಲರ ಸಂಘದ ಉಪಾಧ್ಯಕ್ಷ ಜಯರಾಂ, ಕಾರ್ಯದರ್ಶಿ ರಾಜು, ಖಜಾಂಚಿ ರಂಗಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next